ಚಳ್ಳಕೆರೆ : ಅಕ್ರಮವಾಗಿ ಶ್ರೀಗಂಧದ ಮರದ ತುಂಡುಗಳನ್ನು ಹೆಚ್ಚಿನ ಮೌಲ್ಯಕ್ಕೆ ಮಾರಾಟ ಮಾಡಲು ತಂದ ಕಳ್ಳರನ್ನು ಬಂಧಿಸುವಲ್ಲಿ ಚಳ್ಳಕೆರೆ ಪೊಲೀಸರ ಕಾರ್ಯಚರಣೆ ಯಶ್ವಸಿಯಾಗಿದೆ.
ತಾಲೂಕಿನ ಬೊಮ್ಮಸಮುದ್ರ ಗ್ರಾಮದ ರಾಜು ತಂದೆ ಮುತ್ತಣ್ಣ ಎಂಬುವವರು ಅಕ್ರಮವಾಗಿ ಶ್ರೀಗಂಧದ ಮರದ ತುಂಡುಗಳನ್ನು ತಂದು ತೋಟದ ಮನೆಯೊಂದಲ್ಲಿ ಶೇಖರಿಸಿದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ ವಶಕ್ಕೆ ಪಡಿಯುವಲ್ಲಿ ಯಶ್ವಸಿಯಾಗಿದ್ದಾರೆ.
ಸುಮಾರು ಏಳು ಏಜಿ ತೂಕದ, ಅಂದಾಜು 30 ಸಾವಿರ ಬೆಲೆ ಬಾಳುವ ಶ್ರೀಗಂಧದ ಮರದ ತುಂಡುಗಳನ್ನು ಶ್ರೀಘ್ರ ಕಾರ್ಯಚರಣೆಯಲ್ಲಿ ಪಿಎಸ್‌ಐ ಪ್ರಮೀಳಮ್ಮ ಹಾಗೂ ತಂಡದ ಸಿಹೆಚ್‌ಸಿ ಶ್ರೀನಿವಾಸ್ ರವರ ತಂಡ ಮಾಲು ಸಹಿತ ಹಿಡಿಯವಲ್ಲಿ ಯಶ್ವಸಿಯಾಗಿದ್ದಾರೆ.