ಕಾರ್ಮಿಕ ಮಕ್ಕಳಿಗೆ ಉಚಿತ ಶಾಲಾ ಕಿಟ್ ವಿತರಣೆ : ಕಾರ್ಮಿಕ ಅಧಿಕಾರಿ ಕುಸುಮಾ
ಚಳ್ಳಕೆರೆ : ಬಡ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವ ರೀತಿಯಲ್ಲಿ ರಾಜ್ಯ ಸರಕಾರ ಹೊರ ತಂದಿರುವ ಕಾರ್ಮಿಕ ಮಕ್ಕಳಿಗೆ ಉಚಿತ ಶಾಲಾ ಕಿಟ್ ಗಳನ್ನು ಪಡೆದು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಕಾರ್ಮಿಕ ಅಧಿಕಾರಿ ಕುಸುಮಾ ಹೇಳಿದ್ದಾರೆ.
ಅವರು ನಗರದ ಕಾರ್ಮಿಕ ಇಲಾಖೆಯಲ್ಲಿ ಆಮ್ಮಿಕೊಂಡಿದ್ದ ಉಚಿತ ಶಾಲಾ ಕಿಟ್‌ವಿತರಣೆಯಲ್ಲಿ ಪೋಷಕರಿಗೆ ಹಾಗೂ ಮಕ್ಕಳಿಗೆ ಕಿಟ್ ವಿತರಿಸಿ ಮಾತನಾಡಿದರು, ಆರ್ಥಿಕವಾಗಿ ಬಡತನದಿಂದ ಜೀವನ ಸಾಗಿಸುವ ಕಾರ್ಮಿಕ ಮಕ್ಕಳಿಗೆ ರಾಜ್ಯ ಸರಕಾರ ವಿದ್ಯಾರ್ಥಿಗಳ ಇತ ದೃಷ್ಠಿಯಿಂದ ಉಚಿತ ಶಾಲಾ ಕಿಟ್ ವಿತರಿಸುತ್ತಿರುವುದು ಸಂತಸ ತಂದಿದೆ ಇದರಿಂದ ಮಕ್ಕಳು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂಧರ್ಭದಲ್ಲಿ ಕಾರ್ಮಿಕ ಇಲಾಕೆ ಸಿಬ್ಬಂದಿಯಾದ ರೇಖಾ, ಹಾಗೂ ಪೋಷಕರು, ಹಾಗೂ ಮಕ್ಕಳು ಬಾಗಿಯಾಗಿದ್ದರು.