ಚಳ್ಳಕೆರೆ : ನಿಮ್ಮ ನೆಚ್ಚಿನ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗಿ, ವಿದ್ಯಾಹರ್ತೆಗೆ ತಕ್ಕಂತೆ ಉದ್ಯೋಗ ಗಿಟ್ಟಿಸಿಕೊಳ್ಳಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಪಾವಗಡ ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಕೌಶಲ್ಯಾಭಿವೃದ್ದಿ, ಉದ್ಯಮಶಿಲತೆ, ಮತತು ಜೀವನೋಪಾಯ ಇಲಾಕೆ, ಜಿಲ್ಲಾ ಕಛಶಲ್ಯ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದವತಿಯಿAದ ಆಯೋಜಿಸಲಾಗಿದ್ದ ಉದ್ಗೋಗ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಬಯಲು ಸೀಮೆಯ ಯುವಕರು ಯಾರೂ ಕೂಡ ನಿರೋದ್ಯೋಗಿಗಳಾಗಿ ಇರದೆ ನಿಮ್ಮ ಅರ್ಹತೆಗೆ ತಕ್ಕ ಉದ್ಯೋಗ ಪಡೆದುಕೊಳ್ಳಬೇಕು, ಉದ್ಯೋಗ ಸ್ಥಳದಲ್ಲಿ ನಿಮಗೆ ಆಗುವ ತೊಂದರೆಗಳನ್ನು ಮೆಟ್ಟಿನಿಂತಾಗ ಮಾತ್ರ ನಿಮ್ಮ ಯಶಸ್ಸಿನ, ಸಾಧನೆಗೆ ಮೆಟ್ಟಿಲುಗಳು ಹಾಗುತ್ತಾವೆ ಆದ್ದರಿಂದ ಯಂತಹ ಉದ್ಯೋಗ ಪಡೆದರು ಕೂಡ ಅದನ್ನು ಸ್ವ ಇಚ್ಚೆಯಿಂದ ಮನಸ್ಸಿಟ್ಟು ಮಾಡಿದಾಗ ಮಾತ್ರ ಅದು ಸಾಪಲ್ಯ ಕಾಣುತ್ತದೆ ಆದ್ದರಿಂದ ನಗರದಲ್ಲಿ ಹತ್ತನೆ ತರಗತಿ ವ್ಯಾಸಂಗ ಮುಗಿದ ಮೇಲೆ ಜಿಟಿಟಿಸಿ ತರಬೇತಿ ಪಡೆದರೆ ನಿಮ್ಮ ವ್ಯಾಸಂಗ ಹಂತದಲ್ಲೆ ನಿಮ್ಮ ಉದ್ಯೋಗ ನಿಗಧಿಯಾಗುತ್ತದೆ ಆದ್ದರಿಂದ ನಿಮ್ಮ ಆಯ್ಕೆ ಉದ್ಯೋಗದ ಕಡೆ ಇರಲಿ ಯಾರೂ ಕೂಡ ನಿರುದ್ಯೋಗಿಗಳಾಗದೆ ಉದ್ಯೋಗ ಪಡೆದು ಆರ್ಥಿಕವಾಗಿ ಸಬಲರಾಗಿ ಎಂದರು.
ಇನ್ನೂ ಉದ್ಯೋಗ ಆಯ್ಕೆ ಸಮಿತಿಗೆ ಆಗಮಿಸಿದ ಕಂಪನಿಯ ಶಾ ಬಾದ್ ಆಲಂ ಮಾತನಾಡಿ, ಉದ್ಯೋಗಕ್ಕಾಗಿ ಬಂದಿರುವವರು ನಿಮ್ಮ ಅರ್ಹತೆಗೆ ತಕ್ಕ ಉದ್ಯೋಗ ನೀಡಲಾಗುವುದು, ಹಾಗೂ ನಿಮ್ಮ ನಿರ್ಧಾರ ಮುಖ್ಯ ಅದು ಬಿಟ್ಟು ತಂದೆ ತಾಯಿಯನ್ನು ಕೇಳಿ ಬರುತ್ತೆನೆ ಎಂಬುದರಲಿ ಅರ್ಥವಿಲ್ಲ, ನೀವು ಈಗಾಗಲೇ ಪ್ರಬುದ್ಧಮಾನರಾಗಿದಿರೀ, ನಿಮ್ಮ ಆಯ್ಕೆ ಕೂಡ ಸರಿಯಾದ ಕಡೆ ಇರಬೇಕು, ಕೇವಲ ಸಂಬಳಕ್ಕಾಗಿ ಉದ್ಯೋಗ ಮಾಡದೆ ನಿಮ್ಮ ಆತ್ಮಭಿಮಾನ ಒಪ್ಪುವ ರೀತಿಯಲ್ಲಿ ಉದ್ಯೋಗ ಮಾಡಿದಾಗ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಚಿತ್ರದುರ್ಗ ನಗರಸಭೆ ಕೌಶಲ್ಯಾಧಿಕಾರಿ ಪಾಲಯ್ಯ ಮಾತನಾಡಿ, ಜೀವನ ನಿರ್ವಹಣೆಗೆ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರ ಯಾವುದಾದರೂ ಸರಿಯೇ ನಿರುದ್ಯೋಗಿಗಳು ಕೆಲಸ ನಿರ್ವಹಿಸಲು ಸಿದ್ದರಾಗಿರಬೇಕು. ವಿದ್ಯೆಯ ಜೊತೆಗೆ ತಮ್ಮಲ್ಲಿರುವ ಪ್ರತಿಭೆ, ನೈಪುಣ್ಯ, ಕೌಶಲವನ್ನು ಉದ್ಯೋಗದಾತ ಕಂಪನಿಗಳ ಸಮ್ಮುಖದಲ್ಲಿ ಪ್ರಸ್ತುತಪಡಿಸಬೇಕು, ಯಾರಿಗೆ ಉದ್ಯೋಗ ಮಾಡಬೇಕೆಂವ ಛಲ, ವಿಶ್ವಾಸ, ಇಚ್ಚಾ ಶಕ್ತಿ ಇರುತ್ತದೆಯೇ ಅವರ ಎಂದಹ ಕಠಿಣ ಉದ್ಯೋಗ ಅಥವಾ ಕಡಿಮೆ ವೇತವಾದರೂ ಸಿಗಲಿ ಕೆಲಸ ಮಾಡುತ್ತೇನೆ ಎಂಬ ಉದ್ದೇಶ ಗುರಿ ಇದ್ದವರು ಸಾಧಿಸಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕೌಶ್ಯಲ್ಯಾಭಿವೃದ್ಧಿ ಅಧಿಕಾರಿ ಜೆ.ಗೋಪಾಲರೆಡ್ಡಿ ಮಾತನಾಡಿ ಇಂದಿನ ಪರಸ್ಥಿತಿಯಲ್ಲಿ ಉದ್ಯೋಗ ಅತ್ಯಾಗತ್ಯವಾಗಿದೆ ತರಬೇತಿ ಪಡೆದ ವಿದ್ಯಾರ್ಥಿಗಳು ಸರಕಾರ ಕೌಶಲ್ಯ ಕರ್ನಾಟಕ ಎಂಬ ತಂತ್ರಾAಶದಲ್ಲಿ ನೀವು ನಿಮ್ಮ ತರಬೇತಿ ಸ್ವವಿವರಗಳೊಂದಿಗೆ ನೋಂದಣೆ ಮಾಡಿಕೊಂಡರೆ ನಿಮ್ಮ ತರಬೇತಿ ಕೌಶಲ್ಯಕ್ಕೆ ಅನುಗುಣವಾಗಿ ಕಂಪನಿಗಳು ನಿಮಗೆ ಉದ್ಯೋಗಾವಶಕಗಳನ್ನು ನೀಡುತ್ತವೆ ಈ ನಿಟ್ಟಿನಲ್ಲಿ ನಿರುದ್ಯೋಗಿ ಯುವಕ, ಯುವತಿಯರು ಭೌತಿಕವಾಗಿ ಮಾತ್ರವಲ್ಲ; ಮಾನಸಿಕವಾಗಿ ಸದೃಢರಾಗಿರಬೇಕು’ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳ, ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ಜೆ.ರಾಘವೇAದ್ರ, ಸದಸ್ಯ ರಮೇಶ್‌ಗೌಡ, ಪ್ರಾಚಾರ್ಯರಾದ ಟಿ.ಎಂ.ಬಸಣ್ಣ, ಹಿರಿಯೂರು ಪ್ರಾಚಾರ್ಯರಾದ ಜೆಬಿವುಲ್ಲಾ, ಶಯಬಾದ್ ಆಲಿ, ಚಿತ್ರದುರ್ಗ ನಗರಸಭೆ ನಗರಸಭೆ ಕೌಶಲ್ಯಾಧಿಕಾರಿ ಪಾಲಯ್ಯ, ಮಂಜುನಾಥ್, ಮಹೇಶ್ವರಪ್ಪ, ಬಾಲರಾಜ್, ಪ್ರಸನ್ನ, ಜ್ಯೋತಿ, ಹಾಗೂ ವಿವಿಧ ಕಂಪನಿಯಗಳ ವ್ಯಸ್ಥಾಪಕರು, ಉದ್ಯೋಗಕಾಂಕ್ಷಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!