ಚಳ್ಳಕೆರೆ ನಗರಸಭೆಯ 2023-24ನೇ ಸಾಲಿನ 74.51 ಲಕ್ಷ ಉಳಿತಾಯ ಬಜೆಟ್ ಮಂಡಸಿದ ಅಧ್ಯಕ್ಷೆ ಸುಮಕ್ಕ

ಚಳ್ಳಕೆರೆ : ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಗರಸಭೆ ಅಧ್ಯಕ್ಷೆ ಸುಮಕ್ಕ ಅಧ್ಯಕ್ಷತೆಯಲ್ಲಿ ನಡೆದ 2023-24ನೇ ಸಾಲಿನ ಬಜೆಟ್ ಮಂಡನೆ ಸಭೆಯಲ್ಲಿ ನಗರಸಭೆ ಅಧ್ಯಕ್ಷರ ಒಪ್ಪಿಗೆ ಮೇರೆಗೆ ಸ್ಥಾಯಿಸಮಿತಿ ಅಧ್ಯಕ್ಷ ಎಂಜೆ ರಾಘವೇಂದ್ರ 74.51 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.

ನಗರದ ಎಲ್ಲಾ ವಾರ್ಡ್ಗಳಿಗೂ ಸಮರ್ಪಕ ಕುಡಿಯುವ ನೀರು ಸರಬರಾಜು ಬೀದಿದೀಪ ಅಳವಡಿಕೆ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ, ಅಂಗವಿಕಲರಿಗೆ ಇರುವ ಅನುದಾನದಲ್ಲಿ ಸಮರ್ಪಕ ಬಳಕೆ, ಕೊಳಚೆ ಪ್ರದೇಶಗಳ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳು ಬಜೆಟ್‌ನಲ್ಲಿ ಒಳಗೊಂಡಿತ್ತು,

ನಗರದ 31 ವಾರ್ಡ್ಗಳಲ್ಲಿ ಬೀದಿದೀಪ, ಹೈಮಾಸ್ಕ್ ಅಳವಡಿಕೆಗೆ 16.25 ಲಕ್ಷ, ಉದ್ಯಾನವನಗಳ ಅಭಿವೃದ್ಧಿಗೆ 63ಲಕ್ಷ, ನಗರಸಭೆ ವ್ಯಾಪ್ತಿಯ ಶಿಶು ವಿಹಾರ ಪಾರ್ಕ್ ನಿರ್ಮಾಣಕ್ಕೆ 20 ಲಕ್ಷ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕಲ್ಯಾಣ ನಿಧಿಗೆ 90 ಲಕ್ಷ, ಇತರೆ ವರ್ಗದ ಕಲ್ಯಾಣ ನಿಧಿಗೆ 40ಲಕ್ಷ, ಅಂಗವಿಕಲರ ಕಲ್ಯಾಣಕ್ಕೆ 30ಲಕ್ಷ, ಕ್ರೀಡಾ ಕಲ್ಯಾಣಕ್ಕೆ 50ಲಕ್ಷ, ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕ ಅಭಿವೃದ್ಧಿಗೆ 120.ಲಕ್ಷ, ಇಂದಿರಾ ಕ್ಯಾಂಟೀನ್ ಆವರಣದಲ್ಲಿ ನೆರಳಿನ ವ್ಯವಸ್ಥೆಗೆ 15ಲಕ್ಷ, ಚಿತ್ರದುರ್ಗ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಗ್ರಿಲ್ ಅಳವಡಿಕೆಗೆ 1 ಲಕ್ಷ, ರೈಲ್ವೆ ಗೇಟ್ ಬಳಿ ರಾಜಕಾಲುವೆ ಹಳ್ಳಕ್ಕೆ ಬ್ಯಾರಿಕೇಡ್ ನಿರ್ಮಾಣಕ್ಕೆ 10.ಲಕ್ಷ ಮೀಸಲಿಡಲಾಗಿದೆ.

ನಗರಸಭೆ ಆಸ್ತಿ ತೆರಿಗೆಯಿಂದ 325.00 ಲಕ್ಷ, ನೀರಿನ ಕಂದಾಯ 185. ಲಕ್ಷ ವಾಣಿಜ್ಯ ಸಂಕೀರ್ಣಗಳ ಬಾಡಿಗೆ 15.ಲಕ್ಷ, ಉದ್ದಿಮೆ ಪರವಾನಿಗೆ 18.00ಲಕ್ಷ ದಿನವಹಿ ಬಸ್ ಸ್ಟ್ಯಾಂಡ್ ಫೀಸ್ ಸಂತೆ ವಸೂಲಿ 50.00ಲಕ್ಷ ವಸೂಲಿ ಮಾಡಲಾಗಿದೆ

ಆದಾಯದ ಒಟ್ಟು ವೆಚ್ಚದಲ್ಲಿ ರಾಜಸ್ವ ಪಾವತಿ 2085.50ಲಕ್ಷ, ಬಂಡವಾಳ ಪಾವತಿ 3683.00ಲಕ್ಷ, ಅಸಾಮಾನ್ಯ ಖಾತೆ ಪಾವತಿ 1369.00ಲಕ್ಷ, 2023-24ನೇ ಸಾಲಿನ ನಗರಸಭೆ ಕರಡು ಆಯವ್ಯಯ ಒಟ್ಟು ಪಾವತಿಯ ಮೊತ್ತ 7137.50ಲಕ್ಷ, 2023-24ನೇ ಸಾಲಿನ ನಗರಸಭೆ ಕರಡು ಆಯವ್ಯಯ ಉಳಿತಾಯ ಮೊತ್ತ ರೂ 74.51 ಲಕ್ಷಗಳಾಗಿವೆ ಎಂದು ತಿಳಿಸಿದರು.

ಇನ್ನೂ ಸಭೆಯಲ್ಲಿ ವಿರೋಧ ಪಕ್ಷದ ಜೆಡಿಎಸ್ ಸದಸ್ಯರಾದ ಎಂ ಜಯಣ್ಣ, ವಿವೈ.ಪ್ರಮೋದ್ ಪಾರ್ಕ್ ಗಳ ನಿರ್ವಹಣೆ ಬಗ್ಗೆ ಹಾಗೂ ಹಣ ಮಂಜೂರಿನ ಬಗ್ಗೆ ಸ್ಮಶಾನಗಳ ನಿರ್ವಹಣೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಹಣ ಮಂಜೂರು ಮಾಡಿದರೆ ಸಾಲದು ಹಣದ ಸಮರ್ಪಕ ಬಳಕೆ ಮಾಡಿಕೊಂಡು ನಗರದ ಅಭಿವೃದ್ಧಿ ಕೈಗೊಳ್ಳಬೇಕು ಆದರೆ ನಗರಸಭೆ ಅಧಿಕಾರಿಗಳು ಯಾವುದೇ ಕೆಲಸ ಮಾಡದೆ ನುಣುಚಿಕೊಳ್ಳುತ್ತಿದ್ದಾರೆ ಪುರಸಭೆಯ ಅವಧಿಯಲ್ಲಿ ಮಾಡಲಾದ ನಗರದ ದ್ವಾರ ಬಾಗಿಲುಗಳಿಗೆ ನಗರಸಭೆ ಆಗಿ ಪರಿವರ್ತನೆಗೊಂಡಾಗ ಸರಿಯಾಗಿ ಹೆಸರು ಬರೆಸದೆ ಕೇವಲ ಎರಡು ಅಕ್ಷರಗಳನ್ನು ಬದಲಿಸಿ ಅಸಡ್ಡೆ ತೋರಿ ದುಂದು ವೆಚ್ಚ ಮಾಡಿದ್ದಾರೆ. ಎಂದು ವಿವೈ.ಪ್ರಮೋದ್ ಆರೋಪಿಸಿದರು.

ನಗರಸಭೆ ಪೌರಾಯುಕ್ತ ಎಂ.ಚAದ್ರಪ್ಪ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಮಾಹಿತಿ ನೀಡಿದರು ನಗರಸಭೆ ಅಧ್ಯಕ್ಷೆ ಸುಮಕ್ಕ ಮುಂದಿನ ದಿನಗಳಲ್ಲಿ ಪಕ್ಷಭೇದ ಮರೆತು ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿಕೊಂಡು ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು

ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ ಅಂಜಿನಪ್ಪ ಉಪಾಧ್ಯಕ್ಷೆ ಮಂಜುಳಾ ಪ್ರಸನ್ನಕುಮಾರ್ ಪೌರಾಯುಕ್ತ ಸಿ ಚಂದ್ರಪ್ಪ, ಸದಸ್ಯರಾದ ವೈಪ್ರಕಾಶ್, ರುದ್ರನಾಯಕ, ಮಲ್ಲಿಕಾರ್ಜುನ, ಕವಿತಾ, ಬೋರಯ್ಯ, ಜೈತುಂಬಿ, ನಾಗವೇಣಮ್ಮ, ವೀರೇಶ್, ಇಂದ್ರೇಶ್, ವಿಶುಕುಮಾರ್ ವೀರಭದ್ರಪ್ಪ ಸೇರಿದಂತೆ ಹಲವರು ಹಾಗೂ ನಗರಸಭೆ ಸಿಬ್ಬಂದಿ ವರ್ಗ ಹಾಜರಿದ್ದರು.

ಬಾಕ್ಸ್ ಮಾಡಿ :
1.ನಗರಸಭೆಯ ಎಲ್ಲಾ ಹಂತದ ಆಯಾಮಗಳನ್ನು ಗಮನದ್ದಿಲ್ಲಿಟ್ಟುಕೊಂಡು 2023-24ರ ಉಳಿತಾಯದ ಬಜೆಟ್ ಅನ್ನು ಮಂಡಿಸಲಾಗಿದ್ದು ಜನರ ಕಲ್ಯಾಣಕ್ಕಾಗಿ ಉತ್ತಮ ಬಜೆಟ್ ಮಂಡಿಸಲಾಗಿದೆ ನಗರದ ಅಭಿವೃದ್ಧಿ ನಮ್ಮ ಗುರಿಯಾಗಿದೆ.—1.ಸುಮಕ್ಕ ಅಂಜಿನಪ್ಪ ನಗರಸಭೆ ಅಧ್ಯಕ್ಷೆ

2.ಇಂದು ಮಂಡಿಸಿರುವ ಬಜೆಟ್ ಜನಪರವಾದ ಹಾಗೂ ಅಭಿವೃದ್ದಿಪರವಾದ ಬಜೆಟ್ ಹಾಗಿದೆ, ಇನ್ನೂ ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗಿದೆ, ಹಾಗೂ ಬಯಲು ಸೀಮೆಯ ಪಾರ್ಕ್ಗಳಿಗೆ ಆಧ್ಯತೆ ನೀಡಲಾಗಿದೆ.—.ಎಂ.ಜೆ.ರಾಘವೇAದ್ರ, ಸ್ಥಾಯಿ ಸಮಿತಿ ಅಧ್ಯಕ್ಷ

  1. ಈ ಬಜೆಟ್ ನಗರಕ್ಕೆ ಮಾರಕವಾಗಿದೆ ಇದರಿಂದ ಸಾರ್ವಜನಿಕರು ಏನನ್ನು ನಿರೀಕ್ಷೆ ಮಾಡಲಾಗದೆ ಇದೊಂದು ನಿರಾಶಾದಾಯಕ ಬಜೆಟ್ ಆಗಿದ್ದು ಇದು ನಗರದ ಅಭಿವೃದ್ಧಿಗೆ ಪೂರಕವಾಗಿಲ್ಲ, ಹಲವು ವರ್ಗಗಳನ್ನು ಕಡೆಗಣಿಸಿದ ಬಜೆಟ್ ಇದಾಗಿದೆ.–ಎಂ.ಜಯಣ್ಣ ನಗರಸಭೆ ಸದಸ್ಯ
  2. ಈ ಬಜೆಟ್‌ನಲ್ಲಿ ಯಾವುದೇ ಆಶಾದಾಯಕವಾದ ಅಂಶಗಳು ಒಳಗೊಂಡಿಲ್ಲ, ಇದರಿಂದ ಯಾವುದೇ ಅನುಕೂಲವಾಗುವುದಿಲ್ಲ, ಇದೊಂದು ಪೂರ್ವಗ್ರಹ ಪೀಡಿತ ಬಜೆಟ್ ಹಾಗಿದೆ, ಶಿಕ್ಷಣ, ಆರೋಗ್ಯ, ಒಳಗೊಂಡಿಲ್ಲದ್ದ ಈ ಬಜೆಟ್ ಅಭಿವೃದ್ದಿಗೆ ಪೂರಕವಾಗಿಲ್ಲ.—.ವಿವೈ ಪ್ರಮೋದ್ ಜೆಡಿಎಸ್ ಸದಸ್ಯ

About The Author

Namma Challakere Local News
error: Content is protected !!