ವನ್ಯ ಜೀವಿಗಳ ರಕ್ಷಣೆಗೆ ಬೀದಿ ನಾಟಕ ಪ್ರದರ್ಶನ
ಚಳ್ಳಕೆರೆ ತಾಲೂಕಿನ ಗಡಿ ಗ್ರಾಮವಾದ ಕಲಮರಹಳ್ಳಿ ಗ್ರಾಮದಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಚಿತ್ರದುರ್ಗ ಹಾಗೂ ತಾಲೂಕು ಪ್ರಾದೇಶಿಕ ಅರಣ್ಯ ವಲಯ ಚಳ್ಳಕೆರೆ ಹಾಗೂ ಸುಪ್ರಿಯಾ ಸಾಂಸ್ಕೃತಿಕ ಮತ್ತು ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಕಲಾತಂಡ ಹಾಗೂ ಬೆಳಗೆರೆ ಗ್ರಾಮಪಂಚಾಯಿತಿ ಇವರ ವತಿಯಿಂದ ಕಾಡು ಸಂರಕ್ಷಣೆ ಮತ್ತು ಬೆಂಕಿ ಅನಾಹುತಗಳ ತಪ್ಪಿಸುವ ವನ್ಯಜೀವಿಗಳ ರಕ್ಷಣೆ ಕುರಿತು ಜನ ಜಾಗೃತಿ ಬೀದಿ ನಾಟಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಈ ಮಧು ನೆರವೇರಿಸಿ ಮಾತನಾಡಿದ ಅವರು
ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿರುತ್ತದೆ ಅದರಲ್ಲೂ ಅರಣ್ಯ ಮುಖ್ಯವಾಗಿ ಬೆಳೆಸಬೇಕು ಅರಣ್ಯದಿಂದ ನಮಗೆ ಸಾಕಷ್ಟು ಅನುಕೂಲಗಳಿವೆ ಜೊತೆಗೆ ಪ್ರಾಣಿಗಳ ರಕ್ಷಣೆ ಪ್ರತಿಯೊಬ್ಬರು ಜವಾಬ್ದಾರಿ ಇರುತ್ತದೆ ಕಾಡು ಮಾಯವಾಗಿ ಕಾಡಿನ ಪ್ರಾಣಿಗಳು ನಾಡಿನತ್ತ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಅದರಂತೆ ತಾಲೂಕಿನ ಬೆಳಗೆರೆ ಪಂಚಾಯಿತಿ ವ್ಯಾಪ್ತಿಯ ಗೊರ್ಲತ್ತು ಕಾಲಮರನಹಳ್ಳಿ ಹುಲಿಕುಂಟೆ ಬೋವಿ ಕಾಲೋನಿ, ಹಾಗೂ ಸುತ್ತಮುತ್ತಲಿನ ಕುರಚಲು ಪ್ರದೇಶಗಳಲ್ಲಿ ವನ್ಯಜೀವಿಗಳಾದ ನವಿಲು ಕಾಡು ಮೊಲ, ಹಾಗೂ ಕೃಷ್ಣ ಮೃಗ, ಕೌಜುಗದ ಪಕ್ಷಿ, ಸಂಬಾರ ಕಾಗೆ ಇನ್ನು ಹಲವು ವನ್ಯ ಜೀವಿಗಳಿದ್ದು ನಮಗೆಲ್ಲಾ ಸಂತಸ ತಂದಿದೆ ಎಂದರು.
ಇನ್ನೂ ಶಿಕ್ಷಕ ಎಸ್.ಜಗದೀಶ ಮಾತನಾಡಿ, ಆದರೆ ಈ ವನ್ಯ ಜೀವಗಳನ್ನು ಕೆಲವರು ಬೇಟಿಯಾಡಿ ಪ್ರಾಣಿಗಳನ್ನು ಕೊಲ್ಲುತ್ತಿದ್ದಾರೆ. ಇದರಿಂದ ವನ್ಯಜೀವಿಗಳ ಸಂತತಿ ಕಡಿಮೆಯಾಗುತ್ತದೆ. ಇಂದು ಬೆಳಗೆರೆ ಗ್ರಾಮಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಬೀದಿ ನಾಟಕದ ಮೂಲಕ ಈ ಜಾಗೃತಿ ಕಾರ್ಯಕ್ರಮ ತುಂಬಾ ಉಪಯುಕ್ತ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಎಲ್ ತಿಪ್ಪೇಸ್ವಾಮಿ, ವೈ.ರಂಗಸ್ವಾಮಿ, ಲಕ್ಷ್ಮಿದೇವಿ, ಮಂಜುನಾಥ್ ಹಾಗೂ ಕಲಾತಂಡದವರು ಗ್ರಾಮಸ್ಥರು ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

About The Author

Namma Challakere Local News
error: Content is protected !!