ಚಳ್ಳಕೆರೆ : ಗಣಿತ ಎಂಬುದು ಕಬ್ಬಣದ ಕಡಲೆಯಾಗದೆ ಮುಗ್ದ ಮಕ್ಕಳ ಮನಸ್ಸಿಗೆ ಅದು ಸರಳವಾಗಿ ಬಿಡಿಯಿಂದ ಹಿಡಿಯವರೆಗೆ ಕಲಿಕೆ ಸಾಗಲಿ ಎಂದು ಗ್ರಾಪಂ.ಅಧ್ಯಕ್ಷೆ ಉಮಾದೇವಿ ಹೇಳಿದ್ದಾರೆ.
ಅವರು ತಾಲೂಕಿನ ಘಟಪರ್ತಿ ಶಾಲೆಯಲ್ಲಿ ಆಯೋಜಿಸಿದ್ದ ಗಣಿತ ಕಲಿಕಾ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಮಕ್ಕಳು ಕೇವಲ ಪರಿಕ್ಷೆಗಾಗಿ ವ್ಯಾಸಂಗ ಮಾಡದೆ ಜ್ಞಾನದ ದೃಷ್ಠಿಯಿಂದ ಕಲಿಕಾ ಆಂದೋಲನದಲ್ಲಿ ಭಾಗಿಯಾಬೇಕು ಎಂದರು.
ಇನ್ನೂ ಪಿಡಿಓ ಹೊನ್ನುರಪ್ಪ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ತಳಹದಿಯಾಗಿ ಕಲಿಕೆಯುಂಟು ಮಾಡುತ್ತದೆ ಆದ್ದರಿಂದ ಇಲ್ಲಿ ಕಲಿತ ಪ್ರತಿಯೊಂದು ಮಗುವು ತಮ್ಮ ಶಾಲೆಗಳಲ್ಲಿ ಕಲಿಕಾ ಪೂರಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಈದೇ ಸಂಧರ್ಭದಲ್ಲಿ ಪಿಡಿಓ ಹೊನ್ನುರಪ್ಪ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶಿವಣ್ಣ, ಅಕ್ಷರ ಪೌಂಡೇಶನ್ ರಾಜಣ್ಣ, ಎಸ್‌ವಿ.ರಾಮರೆಡ್ಡಿ, ಯಲಪ್ಪ, ಪ್ರಹ್ಲಾದ್, ಮುಖ್ಯ ಶಿಕ್ಷಕ ಮಂಜಪ್ಪ, ರಾಜಣ್ಣ, ನಾಗರಾಜ್ ಇತರರು ಇದ್ದರು.

Namma Challakere Local News
error: Content is protected !!