ಫೆ.6 ರಂದು ಪ್ರಜಾಧ್ವನಿ ಕಾರ್ಯಕ್ರಮ ಸ್ಥಳ ಪರೀಶೀಲನೆ ನಡೆಸಿದ ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಕಾಂಗ್ರೇಸ್ ಪಕ್ಷದಿಂದ ರಾಜ್ಯದ ಜನರಿಗೆ ಪಕ್ಷದ ಸಾಧನೆಗಳನ್ನು ಅರಿವು ಮೂಡಿಸುವ ಮೂಲಕ ಇಡೀ ರಾಜ್ಯಾಧ್ಯಾಂತ ಪ್ರಜಾಧ್ವನಿ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸ್ಥಳಿಯ ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢ ಶಾಲಾ ಆವರಣದಲ್ಲಿ ಫೆ.6ರಂದು ನಡೆಯುವ ಕಾರ್ಯಕ್ರಮದ ರೂಪರೇಷಿ ಪರಿಶೀಲನೆ ನಡೆಸಿ ಮಾಧ್ಯಮದೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್, ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪ್ರಜಾಧ್ವನಿಯ ಆಶಯವನ್ನು ಜನರಿಗೆ ತಿಳಿಸಲಾಗುತ್ತದೆ.
ಫೆ.6ರಂದು ಚಿತ್ರದುರ್ಗ ಜಿಲ್ಲೆಗೆ ಆಗಮಿಸುವ ಪ್ರಜಾಧ್ವನಿ ಕಾರ್ಯಕ್ರಮದ ವರಿಷ್ಠರು ಅಂದು ಹಿರಿಯೂರು, ಚಳ್ಳಕೆರೆ ಚಿತ್ರದುರ್ಗ ಹಾಗೂ ಮೊಳಕಾಲ್ಮುರು ಕ್ಷೇತ್ರಗಳಿಗೆ ಬೇಟಿ ನೀಡಲಿದ್ದಾರೆ.
ಫೆ.6 ರಂದು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದಲ್ಲಿ ಅಂದು ನಮ್ಮ ಆಡಳಿತ ಅವಧಿಯ ಹತ್ತು ವರ್ಷದ ಸಾಧನೆ ಬಗ್ಗೆ ವ್ಯಕ್ತಪಡಿಸಿಲಾಗುವುದು, ಆದ್ದರಿಂದ ಈಡೀ ಕಾಂಗ್ರೆಸ್ ಪಕ್ಷದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಕರೆ ನೀಡಿದ್ದಾರೆ.
ಇದೇ ಸಂಧರ್ಭದಲ್ಲಿ ನೂತನ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ವೀರಭದ್ರಯ್ಯ, ಶಶಿಧರ್, ಜಿಪಂ.ಮಾಜಿ ಸದಸ್ಯ ಬಾಬುರೆಡ್ಡಿ, ನಗರಸಭೆ ಸದಸ್ಯ ರಾಘವೇಂದ್ರ, ರಮೇಶ್, ವೈ.ಪ್ರಕಾಶ್, ಇತರರು ಇದ್ದರು.