ಚಳ್ಳಕೆರೆ : ತುರುವನೂರು ಹೋಬಳಿಯ ಕೂನಬೇವು ಗ್ರಾಮದ ಶ್ರೀ ಕುಕ್ಕಡೆಶ್ವರಿ ದೇವಿಯ ಜಾತ್ರಾ ಮಹೋತ್ಸವದಲ್ಲಿ ಶಾಸಕ ಟಿ.ರಘುಮೂರ್ತಿ ಪಾಲ್ಗೊಂಡು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
ನಂತರ ಶ್ರೀದೇವಿ ಚರಿತ್ರೆ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೃತಿಯನ್ನು ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬುರೆಡ್ಡಿ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಂಗಸ್ವಾಮಿ, ಸದಸ್ಯರುಗಳು ಮತ್ತು ಮುಖಂಡರುಗಳಾದ ಶಿವಪುತ್ರ, ಮಲ್ಲೇಶ್, ಮಹಾಂತೇಶ್, ವಿಜಯ್, ಕುಮಾರ್, ರಾಜಣ್ಣ, ಮಲ್ಲಿಕಾರ್ಜುನ್, ಸುಚೇಂದ್ರಪ್ಪ, ದಯಾನಂದ, ಸತೀಶ್, ಗೌಡ್ರು ಪ್ರಕಾಶ್, ಓಬಣ್ಣ, ಮಹಾಂತೇಶ್, ತಿಪ್ಪೇಸ್ವಾಮಿ, ಚಂದ್ರಪ್ಪ, ಜಗದೀಶ್, ಮುಖಂಡರು, ಕಾರ್ಯಕರ್ತರು, ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.