ಚಳ್ಳಕೆರೆ : ಚಳ್ಳಕೆರೆ ಕ್ಷೇತ್ರದ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರ ನೂತನ ಪದಗ್ರಾಹಣ ಕಾರ್ಯಕ್ರಮವನ್ನು ಸ್ಥಳೀಯ ಶಾಸಕ ಟಿ.ರಘುಮೂರ್ತಿ ಉದ್ಘಾಟಿಸಿದರು.
ನಗರದ ಶಾಸಕರ ಭವನ ಆವರಣದಲ್ಲಿ ಆಯೋಜಿಸಿದ್ದ ನೂತನ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಹಾಗೂ ಪರುಶುರಾಂಪುರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಶಿಧರ್ ಪದಗ್ರಹಣ ಕಾರ್ಯಕ್ರದಮಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಕಾಂಗ್ರೇಸ್ ಪಕ್ಷ ಎನ್ನುವುದು ನಿನ್ನೆ ಮೊನ್ನೆಯದು ಅಲ್ಲ ಸ್ವಾತಂತ್ರö್ಯ ತಂದು ಕೊಟ್ಟ ಇತಿಹಾಸ ಇರುವ ಕಾಂಗ್ರೇಸ್ ಪಕ್ಷಕ್ಕೆ ಪ್ರತಿಯೊಬ್ಬರು ದುಡಿಯಬೇಕು, ಇನ್ನೂ ಮುಂಬರುವ 2023ರ ವಿಧಾನ ಸಭಾ ಚುನಾವಣೆ ಘೋಷಣೆಗೆ ಕೆಲವು ದಿನಗಳು ಭಾಕಿ ಇವೆ, ಆದ್ದರಿಂದ ಕ್ಷೇತ್ರದಲ್ಲಿ ಈಗಾಗಲೇ ಎರಡು ಬಾರಿ ಶಾಸಕರನ್ನಾಗಿ ಮಾಡಿದ ಮತದಾರರು ಮೂರನೇ ಬಾರಿಗೆ ಕಾಂಗ್ರೇಸ್ ಗೆಲುವಿಗೆ ಪ್ರತಿಯೊಬ್ಬರು ಶ್ರಮಿಸಬೇಕು, ಪಕ್ಷವನ್ನು ಕೆಳಹಂತದಿAದ ಸಂಘಟಿಸುವ ಕೆಲಸ ಇನ್ನಷ್ಟು ಚುರುಕುಗೊಳ್ಳಬೇಕು. ನೂತನ ಅಧ್ಯಕ್ಷರು ಬರುವ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸಬೇಕು’ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತಾಜ್‌ಪೀರ್ ಮಾತನಾಡಿ 2023ರ ಚುನಾವಣೆಯ ಗೆಲುವು ನಿಮ್ಮ ಮೇಲೆ ಇದೆ ಆದ್ದರಿಂದ ನೀವುಗಳು ಪಕ್ಷದ ಎಲ್ಲಾ ಪದಾಧಿಕಾರಿಗಳಿನ್ನು ವಿಶ್ವವಾಸಕ್ಕೆ ಪಡೆದು ಗೆಲುವಿಗೆ ಶ್ರಮಿಸಬೇಕು ಇನ್ನೂ ವಿಧಾನ ಸಭೆ ಚುನಾವಣೆ ಕೇವಲ ಕೆಲವೇ ತಿಂಗಳು ಬಾಕಿಯಿದ್ದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಹಾಗೂ ಸಾಧನೆಗಳ ಬಗ್ಗೆ ಬೂತ್ ಮಟ್ಟದಿಂದ ಪಕ್ಷ ಸಂಘಟನೆ ಮಾಡುವ ಮೂಲಕ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಮತದಾರರನ್ನು ಜಾಗೃತಿಮೂಡಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕು ಅಧಿಕಾರ ಶಾಶ್ವತವಲ್ಲ ಅಧಿಕಾರವಧಿಯಲ್ಲಿ ಮಾಡಿದ ಸೇವೆ ಜನರಮದಲ್ಲಿ ಉಳಿಯುತ್ತಿದೆ ಅಧ್ಯಕ್ಷ ಶಾಸ್ವತವಲ್ಲಿ ಮಾಜಿ ಶಾಸ್ವತ ಕಾರ್ಯಕರ್ಯರು ಪಕ್ಷದ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.
ಈದೇ ಸಂಧರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ಟಿ.ತಿಪ್ಪೇಸ್ವಾಮಿ. ಮಾಜಿ ಪರುಶುರಾಂಪುರ ಬ್ಲಾಕ್ ಅಧ್ಯಕ್ಷ ಕಿರಣ್ ಶಂಕರ್ ಅವರು ನೂತನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ ಹಾಗೂ ಶಶಿಧರ್ ಇವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ಈ ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳ. ಸದಸ್ಯರಾದ ಮಲ್ಲಿಕಾರ್ಜುನ. ಪ್ರಕಾಶ್, ರಮೇಶ್‌ಗೌಡ. ಮಾಜಿ ಜಿಪಂ ಸದಸ್ಯ ರವಿಕುಮಾರ್. ಸೇರಿದಂತೆ ನಗರಸಭೆ ಸದಸ್ಯರು. ಕಾರ್ಯಕರ್ತರು. ಮುಖಂಡರು ಉಪಸ್ಥಿತರಿದ್ದರು.