ಚಳ್ಳಕೆರೆ : ಚಳ್ಳಕೆರೆ ತಾಲೂಕಿನ ನೂತನ ತಹಶೀಲ್ದಾರ್ ಆಗಿ ರೇಹಾನ್ ಪಾಷಾ ಅಧಿಕಾರವನ್ನು ಇಂದು ಸ್ವೀಕಾರ ಮಾಡಿದರು.
ಚಳ್ಳಕೆರೆ ತಾಲೂಕು ಕಚೇರಿಯ ತಹಶೀಲ್ದಾರ್ ಎನ್.ರಘುಮೂರ್ತಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಬಳ್ಳಾರಿ ಪುರಸಭಾ ಉಪತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸಿ ಚಳ್ಳಕೆರೆ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್ ಆಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದಾರೆ.
ನಂತರ ನೇತಾಜಿ ಸ್ನೇಹ ಬಳಗದ ಅಧ್ಯಕ್ಷ ನೇತಾಜಿ ಪ್ರಸನ್ನ ಮತ್ತು ಕಾರ್ಯದರ್ಶಿಗಳಾದ ಆರ್.ಪ್ರಸನ್ನಕುಮಾರ್ ಮತ್ತು ನಿರ್ದೇಶಕರಾದ ಫರೀದ್‌ಖಾನ್ ನೂತನ ತಹಶೀಲ್ದಾರ್ ರೇಹಾನ್ ಪಾಷಾಗೆ ಸ್ವಾಗತ ಕೋರಿದರು