ಚಳ್ಳಕೆರೆ : ಕ್ರೀಡೆ, ವಿಜ್ಞಾನ, ಶೈಕ್ಷಣಿಕ ಕ್ಷೇತ್ರದಲ್ಲಿ ಚಳ್ಳಕೆರೆ ನಗರದ ಹಲವಾರು ಸಾಧನೆ ಮಾಡಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀ ಮಟ್ಟದಲ್ಲಿ ಇಲ್ಲಿನ ಮಕ್ಕಳು ಗುರುತಿಸಿಕೊಂಡು ಬಯಲು ಸೀಮೆ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲವೆಂಬುವುದು ತೋರಿಸಿದ್ದಾರೆ. ಈ ಭಾಗದ ಜನರಲ್ಲಿ ಶಿಕ್ಷಣದ ಜಾಗೃತಿ ಮೂಡಿರುವುದು ಸಂತಸ ವಿಷಯವೆಂದು ಜಾಮೀಯ ಮಸೀದಿಯ ಆಡಳಿತಾಧಿಕಾರಿ ರಹಮತ್‌ವುಲ್ಲಾ ಹೇಳಿದರು. .
ಅವರು, ನಗರದ ನ್ಯಾಷನಲ್ ಪಬ್ಲಿಕ್ ಶಾಲೆ ಆವರಣದಲ್ಲಿ ಸೋಮವಾರ ನಡೆದ 2022-23ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕತೆಯ ಶಿಕ್ಷಣದಲ್ಲಿ ಮಕ್ಕಳಿಗೆ ಕಲಿಯುವ ಆಸಕ್ತಿ ಹೆಚ್ಚಿದೆ. ಅದರಕ್ಕೆ ಪೂರಕವಾಗಿ ಶಿಕ್ಷಕರೂ ಸಹ ತಯಾರಿ ನಡೆಸಬೇಕಿದೆ. ನಗರದ ವಾಣಿಜ್ಯೋದ್ಯಮದಲ್ಲಿ ಮಾತ್ರವಲ್ಲದೆ, ವಿಜ್ಞಾನ ಕ್ಷೇತ್ರದಲ್ಲೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀ ಮಟ್ಟದಲ್ಲಿ ಸ್ಥಾನ ಪಡೆದಿದೆ. ಅದಕ್ಕೆ ಪೂರಕವಾದ ಶಿಕ್ಷಣವನ್ನು ಮಕ್ಕಳಿಗೆ ಒದಗಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಗೆ ಮಕ್ಕಳು ನಿರಂತರ ಅಭ್ಯಾಸ ಅಗತ್ಯವೆಂದರು.
ಅಲ್ಪಸಂಖ್ಯಾತ ಘಟಕದ ರಾಜ್ಯಸಂಘಟನಾ ಕಾರ್ಯದರ್ಶಿ ಬಿ.ಫರೀದ್‌ಖಾನ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ನ್ಯಾಷನಲ್ ಪಬ್ಲಿಕ್ ಶಾಲೆಯ ಮಕ್ಕಳು ಕ್ರೀಡೆ, ಶಿಕ್ಷಣ, ಮನೋರಂಜ ಕಾರ್ಯಕ್ರಮಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಶಿಕ್ಷಣಕ್ಕೆ ಪೂರಕವಾದ ವಾತಾವಣವನ್ನು ನಮ್ಮ ಶಾಲೆಯಲ್ಲಿ ನಿರ್ಮಾಣ ಮಾಡಲಾಗಿದೆ. ಶಿಕ್ಷಣ ಕ್ಷೇತ್ರವಲ್ಲದೆ, ಕ್ರೀಡೆಯಲ್ಲೂ ವಿದ್ಯಾರ್ಥಿಗಳ ಆಸಕ್ತಿಗೆ ಪೂರಕವಾದ ಶಿಕ್ಷಣ ನೀಡುವ ಮೂಲಕ ಮಕ್ಕಳ ಸಾಧನೆಗೆ ಕೈಜೋಡಿಸಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಮುತುವಲ್ಲಿ ಅತಿಕೂರ್ ರೆಹಮಾನ್, ನಿವೃತ್ತ ಆರೋಗ್ಯ ನಿರೀಕ್ಷಕ ಮೊಹಬೂಬ್ ಸುಬಾನಿ, ಅಲ್ಪಸಂಖ್ಯಾತ ತಾಲ್ಲೂಕು ಅದ್ಯಕ್ಷ ಅನ್ವರ್ ಮಾಸ್ಟರ್, ಸಿ.ಆರ್.ಅಲ್ಲಾಭಕ್ಷಿ, ಡಿಎಂಎಸ್.ಜಾಫರ್, ಮೊಹಮ್ಮದ್ ಅನೀಸ್, ಅರ್ಷದ್ಆಲಂ, ಲಾಲ್ಸಾಬ್, ಸೋಹೆಲ್, ಡಾ.ಇರ್ಫಾನ ಮುಂತಾದವರು ಉಪಸ್ಥಿತರಿದ್ದರು.

ಪೋಟೋ ಚಳ್ಳಕೆರೆ ನಗರದ ನ್ಯಾಷನಲ್ ಪಬ್ಲಿಕ್ ಶಾಲೆ ಆವರಣದಲ್ಲಿ ಸೋಮವಾರ ನಡೆದ 2022-23ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭವನ್ನು ಜಾಮೀಯ ಮಸೀದಿಯ ಆಡಳಿತಾಧಿಕಾರಿ ರಹಮತ್ವುಲ್ಲಾ ಉದ್ಘಾಟಿಸಿದರು

About The Author

Namma Challakere Local News
error: Content is protected !!