ಚಳ್ಳಕೆರೆ : ಇಂದು ನಾವು ನೀವು ಇಲ್ಲಿ ಸೇರಿದ್ದೆವೆ ಎಂದರೆ ಅದು ಅಂಬೇಡ್ಕರ್ ಕೊಟ್ಟ ಸಂವಿಧಾನದಿAದ ಮಾತ್ರ ಆದ್ದರಿಂದ ನಮ್ಮ ಹಕ್ಕು ಮೀಸಲಾತಿ ಪಡೆಯಲು ಹೋರಾಟ ಮಾಡೋಣ ಎಂದು ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು.
ಅವರು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲೆ ಆವರಣದಲ್ಲಿ ಒಲೆಯ ಹಾಗೂ ಮಾದಿಗರ ಐಕ್ಯತಾ ಸಮಾವೇಶ ಕಾರ್ಯಕ್ರದಮದಲ್ಲಿ ಭಾಗವಹಿಸಿ ಮಾತನಾಡಿದರು, ರಾಜ್ಯದಲ್ಲಿ ಆರು ಸಮುದಾಯಗಳಿಗೆ ನಿಜವಾದ ಮೀಸಲಾತಿ ಅಗ್ಯತವಾಗಿದೆ, ಒಳ ಮೀಸಲಾತಿ ಮುಂದಿಟ್ಟುಕೊAಡು ಆಳುವ ಸರಕಾರಗಳು ಸಮುದಾಯದ ಮಧ್ಯೆ ಕಂದಕವನ್ನುAಟು ಮಾಡುತ್ತಿವೆ, ಇನ್ನೂ ಜನ ಸಂಖ್ಯೆ ಅನುಗುಣವಾಗಿ ಮೀಸಲಾತಿ ಮಾಡಿ, ಈಡೀ ಭಾರತ ದೇಶದ ಇತಿಹಾಸದಲ್ಲಿ ಕೇವಲ 3ರಷ್ಟು ಸಮುದಾಯಕ್ಕೆ 10ರಷ್ಟು ಮೀಸಲಾತಿ, ನೀಡಿದ್ದಾರೆ, ಆದರೆ ಇದಕ್ಕೆ ಯಾರೂ ಕೂಡ ಅರ್ಜಿ ಹಾಕಿಲ್ಲ ಆದರೆ ಕಳೆದ ಮೂವತ್ತು ವರ್ಷಗಳಿಂದ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿವೆ ನಮಗೆ ಮೀಸಲಾತಿ ನೀಡಿಲ್ಲ, ಅಂಬೇಡ್ಕರ್ ಆಶಯದಂತೆ ಸ್ವಾಭಿಮಾನದ ಸೂಜಿಗಳಾಗಬೇಕು ಸ್ವಾರ್ಥದ ಕತ್ತರಿಯಾಗಬಾರದು ಎಂದರು.

ಇನ್ನೂ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಮೀಸಲಾತಿ ಕೂಗು ನಿಮ್ಮ ನ್ಯಾಯಯುತ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ, ನಿಮ್ಮ ಬೇಡಿಕೆಗಳನ್ನು ಅಂದಿನ ಅಂಬೇಡ್ಕರ್ ರೂಪಿಸಿದ ಸಂವಿಧಾನದ ಆಶಯಗಳಡಿಯಲ್ಲಿ ಬರುತ್ತದೆ ಆದ್ದರಿಂದ ಒಳ ಮೀಸಲಾತಿ ಜಾರಿಗೆ ಎರಡು ಸಮುದಾಯದ ಹಕ್ಕು ಪಡೆಯುವ ರೀತಿಯಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮುಂದೆ ಬನ್ನಿ ಎಂದರು.
ಇನ್ನೂ ಶ್ರೀ ಹರಳಯ್ಯ ಸ್ವಾಮೀಜೀ ಮಾತನಾಡಿ, ನಮ್ಮ ಹಕ್ಕು ನಾವು ಪಡೆಯಲು ಸರಕಾರಕ್ಕೆ ಒತ್ತಡ ತಂದರು ಕಾಲ ಮುಂದುಡುತ್ತಿದ್ದಾರೆ, ಇದರಿಂದ ಮುಂದಿನ ದಿನಗಳಲ್ಲಿ ಮತಗಳನ್ನು ಮೌಲ್ಯಮಾಡೊಣ ನಮ್ಮ ಮುಂದೆ ಆಳುವ ಸರಕಾರಗಳು ತಲೆ ಬಾಗಬೇಕು, ಆದರೆ ಕೆಲವು ಸಮುದಾಯಗಳು ಮೀಸಲಾತಿ ಹಕ್ಕಿಗಾಗಿ ಮಾತ್ರ ನಾವು ಕೂಡ ಎಸ್ಸಿ ಎನ್ನುತ್ತಾರೆ ಆದರೆ ಇದುವರೆಗೆ ನಮ್ಮ ಕೆಳ ಜಾತಿಗಳನ್ನು ಈಗಲೂ ಕೂಡ ಶೋಷಣೆ ಮಾಡುತ್ತಿವೆ ಎಂದರು.

ಇನ್ನೂ ಛೆಲುವಾದಿ ರಾಜ್ಯಾಧ್ಯಕ್ಷ ಕೆ.ಶಿವರಾಮ್ ಮಾತನಾಡಿ, ಮಾದಿಗ ಮತ್ತು ಒಲೆಯ ಎರಡು ಸಮುದಾಯಗಳು ಸಂಘಟಿತರಾದರೆ ನಮ್ಮ ಹೋರಾಟದ ಗುರಿ ತಲುಪುತ್ತೆವೆ, ಆದ್ದರಿಂದ ಈಡೀ ರಾಜ್ಯದಲ್ಲಿ ಸು.1 ಕೋಟಿ 8ಲಕ್ಷ ಜನ ಸಂಖ್ಯೆ ಇರುವ ಸಮುದಾಯಗಳಲ್ಲಿ ಹೊಲೆಯ ಹಾಗೂ ಮಾದಿಗ 75ಲಕ್ಷ ಜನರು ಇದ್ದಾರೆ, ಆದರೆ ನಮ್ಮ ಅಧಿಕಾರ ಮಾತ್ರ ಇಲ್ಲ, ಸುಮಾರು 17 ವರ್ಷಗಳ ಕಾಲ ಒಳ ಮೀಸಲಾತಿ ಸತತ ಪ್ರಯತ್ನ ನಡೆಯುತ್ತಿದೆ ಎಂದರು.

ಮಾದಿಗ ದಂಡೋರದ ರಾಜ್ಯಾಧ್ಯಾಕ್ಷ ನರಸಪ್ಪ, ಮಾಜಿ ಸಚಿವ ಹೆಚ್.ಆಂಜನೇಯ, ಮಾಜಿ ನಗರಸಭಾ ಸದಸ್ಯ ಎಂ.ಶಿವಮೂರ್ತಿ, ಕೆ.ಟಿ.ಕುಮಾರ್‌ಸ್ವಾಮಿ, ಮಾತನಾಡಿದರು.
ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸದಸ್ಯ ಕೆ.ವೀರಭದ್ರಯ್ಯ, ಚಳ್ಳಕೆರೆಪ್ಪ, ಕೆ.ಟಿ.ಕುಮಾರಸ್ವಾಮಿ, ಎಂ.ರವೀಶ್‌ಕುಮಾರ್, ಜೆಡಿಎಸ್ ಅಧ್ಯಕ್ಷ ಪಿ.ತಿಪ್ಪೆಸ್ವಾಮಿ, ಜಿಪಂ.ಮಾಜಿ ಸದಸ್ಯ ಬಿ.ಪಿ.ಪ್ರಕಾಶ್‌ಮೂರ್ತಿ, ನರಂಸಿAಹರಾಜು, ತಾಪಂ.ಮಾಜಿ ಸದಸ್ಯ ಹೆಚ್.ಸಮರ್ಥರಾಯ್, ವಕೀಲರಾದ ಬಿ.ಪಾಪಣ್ಣ, ಇಂದ್ರೇಶ್, ಭೀಮಣ್ಣ, ವಿಜಯ್‌ಕುಮಾರ್, ಚಂದ್ರು, ವೀರವೀಭದ್ರ, ಹೊನ್ನುರಾಸ್ವಾಮಿ, ತಿಪ್ಪೆರುದ್ರಪ್ಪ, ಇತರರು ಇದ್ದರು.

Namma Challakere Local News
error: Content is protected !!