ಚಳ್ಳಕೆರೆ: ಅನೇಕ ವರ್ಷಗಳಿಂದ ತುಳಿತಕ್ಕೆ ಹೊಳಗಾದ, ಹಾಗೂ ಶೋಷಿತ ವರ್ಗಕ್ಕೆ ಸೇರಿದ ಸವಿತಾ ಸಮಾಜ ಇಂದು ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ, ಪರಿವರ್ತನೆಯಾಗುವ ಸಂಕಲ್ಪ ಮಾಡಬೇಕು ಎಂದು ಸಮಾಜದ ತಾಲೂಕು ಅಧ್ಯಕ್ಷ ರಾಜು ಹೇಳಿದ್ದಾರೆ.
ಅವರು ನಗರದ ತಹಶಿಲ್ದಾರ್ ಕಛೇರಿ ಸಭಾಂಗಣದಲ್ಲಿ ರಾಷ್ಟೀಯ ಹ್ಬಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತವತಿಯಿಂದ ಸವಿತಾ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ತಳ ಸಮುದಾಯದವರು ಸ್ಥಿರವಾಗಿ ನಿಲ್ಲಬೇಕಾದರೆ, ಇಂತಹ ಮಹಾನಿಯರ ಜಯಂತಿಯನ್ನು ಆಚರಿಸುವುದರ ಮೂಲಕ ಸರ್ಕಾರವು ಸಮುದಾಯವನ್ನು ಮೇಲೆತ್ತುವ ಕೆಲಸ ಮಾಡಬೇಕಾಗಿದೆ ಎಂದರು.
ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಆರ್.ಪ್ರಸನ್ನಕುಮಾರ್ ಮಾತನಾಡಿ, ಸಮುದಾಯದ ನಾಯಕರು ಪ್ರತಿಯೋಬ್ಬ ಸಮುದಾಯದ ಕುಂದು ಕೊರೆತೆಗಳನ್ನು ಹಾಗು ಕಷ್ಟಸುಖದಲ್ಲಿ ಬಾಗಿಯಾಗುದವುದರ ಮೂಲಕ ಸಮುದಾಯದವರನ್ನು ಮೇಲೆತ್ತುವ ಕೆಲಸ ಮಾಡಿದಾಗ ಮಾತ್ರ ಪರಿಪೂರ್ಣವಾಗಿ ಹೋರ ಹೊಮ್ಮುತ್ತಾರೆ. ಸಾಮಾಜಿಕ ಪರಿವರ್ತಿನೆಯಲ್ಲಿ ಕ್ರಾಂತಿ ಹುಟ್ಟು ಹಾಕಿ ಮಹನೀಯರು ಜಾತ್ಯತೀತ ನಿಮಾರ್ಣಕ್ಕೆ ಹೋರಾಟ ಮಾಡಿದ ಮಹನಿಯರಲ್ಲಿ ಸವಿತ ಮಹಿರ್ಷಿಯ ಒಬ್ಬರಾಗಿದ್ದರು ಎಂದರು.
ಮಹಾದೇವ ವಿಶ್ವಕರ್ಮ ವಿದ್ಯಾಸಂಸ್ಥೆ ಕಾರ್ಯದರ್ಶಿ ಸರಸ್ಪತಿ ಮಾತನಾಡಿ, ಹಿಂದಿನ ಕಾಲದಲ್ಲಿ ಋಷಿ ಮುನಿಗಳು ಯಜ್ಙಯಾಗಾದಿಗಳನ್ನು ಮಾಡುವಾಗ ಮಹಿರ್ಷಿಗಳು, ಸಹ ಭಾಗವಹಿಸುತ್ತಿದರು. ಪವಿತ್ರವಾದ ಸಮುದಾಯವೆಂದರೆ ಸವಿತ ಸಮುದಾಯ. ಸವಿತ ಸಮುದಾಯದವರು ಮಧುವೆ ಕಾರ್ಯಕ್ರಮದಲ್ಲಿ ಮಂಗಳವಾದ್ಯ ನುಡಿಸೋದು, ಚಿಕ್ಕ ಮಕ್ಕಳಿಗೆ ಚೌರ(ತಲೆಕುದಲು) ತಗಿಸೋದಕ್ಕೆ, ಹಳ್ಳಿಯಲ್ಲಿ ಹಲವು ಖಾಯಿಲೆಗಳಿಗೆ ಮದ್ದುಕೋಡೊದಕ್ಕೆ ಹಲವಾರ ಮಂಗಳ ಕಾರ್ಯಕ್ರಮದಲ್ಲಿ ನಮ್ಮ ಸಮುದಾಯ ಕಡ್ಡಾಯವಾಗಿ ಕೆಲಸ ಮಾಡುತ್ತಿದ್ದು. ಈ ಸಮುದಾಯವನ್ನು ಮುಖ್ಯವಾಹಿನಿಗೆ ಬರಬೇಕಿದೆ ಈ ಸಮುದಾಯ ಮುಖ್ಯವಾಗಿ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಆದ್ದರಿಂದ ಮುಖ್ಯವಾಗಿ ಶಿಕ್ಷಣಬೇಕು ಎಂದರು.
ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸಮಕ್ಕ, ಸಮಾಜದ ಮುಂಚುಣಿ ಘಟಕರಾದ ನಾಗರಾಜ್, (ಸ್ಟೆöÊಲೀಶ್ ನಾಗ) ಗೀತಾ, ತ್ರಿವೇಣಿ, ಹಿನ್ನೆಲೆ ಗಾಯಕ ಮುತ್ತುರಾಜ್, ಶಿರಸ್ತೆದಾರ್ ಗೀರಿಶ್, ಶ್ರೀನಿವಾಸ್, ಇತರರು ಇದ್ದರು.
ಪೋಟೋ, ಚಳ್ಳಕೆರೆ ನಗರದ ತಹಶೀಲ್ದಾರ್ ಸಭಾಂಗಣದಲ್ಲಿ ರಾಷ್ಟೀಯ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತ ವತಿಯಿಂದ ಸವಿತಾ ಮಹಿರ್ಷಿ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಿದರು.