ಚಳ್ಳಕೆರೆ : 74ನೇ ಗಣರಾಜ್ಯೋತ್ಸವದ ಅಂಗವಾಗಿ ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಮೈದಾನದಲ್ಲಿ ದೇಶದ ಸಂಸತ್ ಭವನವನ್ನು ರಂಗೋಲಿ ಮೂಲಕ ಚಿತ್ರಿಸಿರುವುದಕ್ಕೆ ಕಂದಾಯ ಇಲಾಕೆ ತಹಶೀಲ್ದಾರ್ ಎನ್.ರಘುಮರ‍್ತಿ, ಶಾಸಕ ಟಿ.ರಘುಮರ‍್ತಿ ಮೆಚ್ಚುಗೆ ವ್ಯಕ್ತಪಸಿಡಿಸದರು.
ನಗರದಲ್ಲಿ ರಂಗೋಲಿ ಮೂಲಕ ಈಡೀ ದೇಶದ ಸಂಸತ್ ಭವನವನ್ನು ಬಿಡಿಸುವ ಮೂಲಕ ಎಲ್ಲಾರ ಗಮನ ಸೆಳೆದ ಎಸ್ ಗೌರಿಪ್ರೀಯ, ಮಾತನಾಡಿ, ಈಡೀ ನಮ್ಮ ದೇಶಕ್ಕೆ ಸಂವಿಧಾನ ರೂಪಿಸಿದ ಅಂಬೇಡ್ಕರ್ ಆಶಯದಂತೆ ನಮ್ಮ ಪ್ರಜಾಪ್ರಭುತ್ವದ ಸದು ಉದ್ದೇಶದಿಂದ ಸಂಸತ್ ಭವನವನ್ನು ಇಲ್ಲಿನ ಎಲ್ಲಾ ಶಾಲಾ ಕಾಲೇಜು ಮಕ್ಕಳಿಗೆ ಮನವರಿಕೆಯಾಗಲಿ ಎಂಬ ಸದು ಉದ್ದೇಶದಿಂದ ಇಲ್ಲಿ ರಂಗೋಲಿ ಮೂಲಕ ಚಿತ್ರಿಸಿದೆ ಎಂದರು.
ಇನ್ನೂ ಈ ರಂಗೋಲಿ ಚಿತ್ತಾರಕ್ಕೆ ಪುಷ್ಟಿ ತುಂಬಿದ ಶಿಕ್ಷಕಿ ಸರಸ್ಪತಿ, ಹಾಗೂ ಎಂ.ಸುಮಾ, ಅಮೃತಲಕ್ಷಿö್ಮ, ಇತರರು ಪಾಲ್ಗೋಡಿದ್ದರು.