ಚಳ್ಳಕೆರೆ : ಸ್ವರಾಜ್ಯದ ಪರಿಕಲ್ಪನೆಯನ್ನು ಜನಸಮಾನ್ಯರಲ್ಲಿ ಮೂಡಿಸಿ ಎಲ್ಲಾ ಯುವಜನರಲ್ಲಿ ಸ್ಪೂರ್ತಿ ತುಂಬಿದ ಮಹಾನ್ ಯುಗಪುರುಷರು ಬುಧ್ದ, ಬಸವ ಡಾ.ಬಿಆರ್.ಅಂಬೇಡ್ಕರ್ ಈಗೇ ಅನೇಕ ಮಂದಿ ತಮ್ಮ ಪ್ರಾಣವನ್ನು ಪಣಕಿಟ್ಟು ನಮಗೆ ಸ್ವಾತಂತ್ರö್ಯವನ್ನು ತಂದು ಜನ ಸಾಮಾನ್ಯರ ಏಳಿಗೆಗೆ ಕಾನೂನುಗಳ ತಂದು ಕೊಟ್ಟ ಸುದಿನ ಈ ಗಣರಾಜ್ಯೋತ್ಸವವಾಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ಅವರು ನಗರದ ಬಿಎಂಜಿಹೆಚ್‌ಎಸ್ ಬಯಲು ರಂಗಮAದಿರ ಆವರಣದಲ್ಲಿ ಹಮ್ಮಿಕೊಂಡಿದ್ದ 74ನೇ ಗಣರಾಜ್ಯೋತ್ಸವ ದಿನಾಚÀರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ಅವರು, ಇಡೀ ಜಗತ್ತಿನಲ್ಲಿಯೇ ಅತ್ಯುತ್ತಮವಾದ ಪ್ರಜಾಪ್ರಭುತ್ವ ರಾಷ್ಟçವೆಂಬ ಹೆಮ್ಮೆಯ ದೇಶ ಭಾರತ ಮಹಾ ಮಾನವತಾವಾದಿ ಸಮತೆಯ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಸಮಿತಿಯ ಭಾರತದಂತಹ ಬಹು ಸಂಸ್ಕೃತಿಯ ಬೃಹತ್ ದೇಶಕ್ಕೆ ನಿತ್ಯ ನೂತನವೂ, ಸತ್ಯ ಚೇತನವಾದ ಸ್ವಾತಂತ್ರö್ಯ ಹೋರಾಟಗಾರರ ಕನಸುಗಳನ್ನು ಬಿತ್ತಿ ಜನಮಾನಸಕ್ಕೆ ನೀಡಿದ ಸ್ಪೂರ್ತಿ ಈ 74ನೇ ಗಣರಾಜ್ಯೋತ್ಸವಕ್ಕೆ ಸಿಕ್ಕ ಪ್ರತಿಫಲವಾಗಿದೆ ಎಂದರು.
ಕಳೆದ ಹತ್ತು ವರ್ಷಗಳಲ್ಲಿ ಬಯಲು ಸೀಮೆಯನ್ನು ಹಸಿರುಕರಣದತ್ತಾ ಮಾಡಲು ಕ್ಷೇತ್ರದ ಜನರ ಸಹಕಾರ ತುಂಬಾ ಮುಖ್ಯ ಅಂತಹ ಅವಕಾಶ ಕೊಟ್ಟ ಮತದಾರರಿಗೆ ನಾನು ಸದಾ ಋಣಿಯಾಗಿರುತ್ತೆನೆ, ವಿರೋಧ ಪಕ್ಷದ ಶಾಸಕನಾದ ನನಗೆ ಅಭಿವೃದ್ದಿಗೆ ಶಾಸಕರು, ಮಂತ್ರಿಗಳು ಕೈಜೋಡಿಸಿದ್ದಾರೆ ಎಂದು ಗಣರಾಜ್ಯೋತ್ಸವದಲ್ಲಿ ವಿರೋಧ ಪಕ್ಷದ ನಾಯಕರನ್ನು ಶಾಸಕ ಟಿ.ರಘುಮೂರ್ತಿ ಪರೋಕ್ಷಗಿ ಅಭಿನಂದಿಸಿದರು.
ಬಯಲು ಸೀಮಗೆ ಶಾಶ್ವತವಾದ ತುಂಗಭದ್ರಾ ಹಿನ್ನಿರು ಯೋಜನೆ ನಮ್ಮ ಪಕ್ಷದ ಅವಧಿಯಲ್ಲಿ ಮಾಡಿದ ಈ ಯೋಜನೆಗಳು ಇಂದಿನ ಸರಕಾರ ಪ್ರಗತಿ ಕಾಣಿಸಿದೆ, ಅದರಂತೆ ಕ್ಷೇತ್ರದಲ್ಲಿ ಸಾವಿರಾರು ಮನೆಗಳನ್ನು ಬಡಜನರಿಗೆ ಮಂಜೂರು ಮಾಡಿಸಿದೆ, ತದ ನಂತರ ಕ್ಷೇತ್ರದಲ್ಲಿ ಅಕ್ರಮವಾಗಿ ಸಾಗಟವಾಗುತ್ತಿದ್ದ ಮರಳನ್ನು ತಡೆದು ಸಂಪೂರ್ಣವಾಗಿ ನಿಲ್ಲಿಸಿದ್ದೆನೆ, ಜೊತೆಗೆ ಪ್ರತಿ ಗ್ರಾಮಗಳಲ್ಲಿ ಮಧ್ಯ ಮಾರಾಟ ಅಂಗಡಿಗಳನ್ನು ತೆರೆಯದಂತೆ ಕಡಿವಾಣ ಹಾಕಿದ್ದೆನೆ ಕಳೆದ ಹತ್ತು ವರ್ಷಗಳಲ್ಲಿ ಹೊಸ ಬಾರ್‌ಗೆ ಅವಕಾಶ ನೀಡಿಲ್ಲ, ಇದರಿಂದ ಕೆಲವು ಪ್ರಕರಣಗಳು ಕೂಡ ನನ್ನ ಮೇಲೆ ಈಗಲೂ ಇವೆ, ತುರುವನೂರು ಭಾಗದಲ್ಲಿ ಅಕ್ರಮವಾಗಿ ಸುಂಕ ವಸೂಲಿ ಮಾಡುವ ಕೆಲವು ದಂದೆಕೋರನ್ನು ಮಟ್ಟ ಹಾಕಲಾಗಿದೆ, ಈಗೇ ಅಭಿವೃದ್ಧಿ ಪೂರಕವಾಗಿ ಕೆಲಸವನ್ನು ಮಾಡಲು ರಾಜಾಕೀಯ ಶÀಕ್ತಿ ನೀಡಿದ ಮತದಾರರು ಮುಂದಿನ ಮೂರನೇ ಬಾರಿಗೆ ಶಾಸಕನಾಗಲು ನಿಮ್ಮನ್ನು ಬಯಸುತ್ತೆನೆ ಎಂದು ತಮ್ಮ ಹಿಂಗಿತ ವ್ಯಕ್ತಪಡಿಸಿದರು.
ಇನ್ನೂ ತಾಲ್ಲೂಕಿನ ದಂಢಾಧಿಕಾರಿಗಳಾದ ತಹಶೀಲ್ದಾರ್ ಎನ್.ರಘುಮೂರ್ತಿ ಧ್ವಜಾರೋಹಣ ನೆರೆವೆರಿಸಿ ನಂತರ ಮಾತನಾಡಿದ ಅವರು, ಇಂದಿಗೆ ಸರಿ ಸುಮಾರು ರಾಜ್ಯಗಳ ವಿಭಾಗವಾಗಿ ಹಲವು ದಶಕಗಳು ಕಳೆದವು ಆದರೂ ತಮ್ಮ ತ್ಮಮ ಪ್ರಾಂತ್ಯಗಳಲ್ಲಿ ರಾಜ್ಯವಾರು ವಿಂಗಡಣೆ ಮಾಡಲು ಜನ ಸಾಮಾನ್ಯರ ಕೂಗಿಗೆ ಧ್ವನಿಯಾಗಿ ಅಂದು ಕಟ್ಟಿ ಕೊಂಡ ಗಣಗಳೆ ಇಂದು ಆಚರಣೆ ಮಾಡುತ್ತಿದ್ದೆವೆ. ಅಹಿಂಸಾ ಮಾರ್ಗದ ಹಾದಿಯಲ್ಲಿ ಈಡೀ ದೇಶದ ಜನತೆಯನ್ನೂ ಓಗ್ಗೂಡಿಸಿ ತಮ್ಮ ಜನತೆಯ ನೆಮ್ಮದಿಗಾಗಿ ರಾತ್ರಿ ಎನ್ನದೆ ಇರಳು ಎನ್ನದೆ ಅವಿರತಾವಾಗಿ ಹೋರಾಟಮಾಡಿ ಉದಾತ್ತ ಚಿಂತನೆಗಳೊAದಿಗೆ ವಿಶ್ವ ಬ್ರಾತೃತ್ವ ಹಾಗೂ ಶಾಂತಿ ಮತ್ತು ಸಹ ಬಾಳ್ವೆಯನ್ನು ಸಂಕೇತಿಸುವ ದಿನ ಈ ಸುಧಿನವಾಗಿದೆ.
ಗಣರಾಜ್ಯೋತ್ಸವ ದಿನ ಸಾಂಸ್ಕçತಿಕ ಗೀತೆಗಳ ಮೂಲಕ ದೇಶಕ್ಕಾಗಿ ಮಡಿದ ವೀರರ ಚರಿತ್ರೆಯನ್ನು ನಾಡಿನ ಜನತೆಗೆ ನೃತ್ಯದ ಮೂಲಕ ಹರಿವು ಮೂಡಿಸುವ ಕಾರ್ಯವಾಗಬೇಕಿದೆ, ಮಹನೀಯರ ತ್ಯಾಗ ಬಲಿದಾನಗಳ ಇತಿಹಾಸ ಅಡಕವಾಗಿರಬೇಕು, ನಾಡಿನ ಜನತೆ 74ನೇ ವರ್ಷದ ರಾಜ್ಯೋತ್ಸವದ ಸಂಭ್ರಮದ ಹಾದಿಯಲ್ಲಿ ಸರ್ಕಾರ ಉತ್ತಮವಾದ ಯೋಜನೆಗಳ ಮೂಲಕ ಬಡಜನರ ಪಾಲಿಗೆ ಆಶಾ ಕಿರಣವಾಗಿದೆ. ಹಿಂದೂಳಿದ ತಾಲ್ಲೂಕಿಗೆ ಅಣೆ ಪಟ್ಟಿಕಟ್ಟಿದ ಚಳ್ಳಕೆರೆಯಲ್ಲಿ ಜನಸಾಮಾನ್ಯರ ಸಹಕಾರದಿಂದ ಅಭಿವೃಧ್ದಿಯ ಪಥದತ್ತ ಸಾಗುತ್ತಿದೆ ಎಂದರು.
ಅAಬೇಡ್ಕರ್ ಜೀವನ ಆಧಾರಿತವಾದ ಮಹಾನಾಯಕ ಧಾರವಾಯಿ ಗೀತೆಗೆ ದೃಶ್ಯವನ್ನು ಹಾಗೂ ನಾಡಿನ ಗೌರವವನ್ನು ಸೂಚಿಸುವ ಗೀತೆಗಳನ್ನು ಶಾಲಾ ಮಕ್ಕಳು ನೃತ್ಯಗಳ ಮೂಲಕ ತೋರಿಸಿದರು.
ನಂತರ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಮಕ್ಕಳಿಗೆ ಶಾಲಾ ಕಿಟ್ ನೀಡುವ ಮೂಲಕ ಗಣರಾಜ್ಯೋತ್ಸವದ ಶುಭಾಷಯ ಕೋರಿದರು.
ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ, ನಗರಸಭಾ ಸದಸ್ಯ ಶ್ರೀನಿವಾಸ್, ಮಲ್ಲಿಕಾರ್ಜುನ, ಸುಮ, ಕವಿತಾ, ನಿರ್ಮಲಾ, ವೈ.ಪ್ರಕಾಶ್, ರಮೇಶ್‌ಗೌಡ, ಕೆ.ವೀರಭದ್ರಪ್ಪ, ನಾಮನಿದೇರ್ಶನ ಸದಸ್ಯ ಇಂದ್ರೇಶ, ಮನೋಜ್, ಜಗದಾಂಬ, ಪಾಲನೇತ್ರನಾಯಕ, ಇಓ.ಹೊನ್ನಯ್ಯ, ಬಿಇಓ ಕೆ.ಎಸ್.ಸುರೇಶ್, ಪೌರಾಯುಕ್ತ ಸಿ.ಚಂದ್ರಪ್ಪ, ಕೃಷಿ ಅಧಿಕಾರಿ. ಆರ್.ಅಶೋಕ್, ಡಿವೈಎಸ್‌ಪಿ.ರಮೇಶ್‌ಕುಮಾರ್, ಸಿಪಿಐ ಸಮಿವುಲ್ಲಾ, ಪಿಎಸ್‌ಐ. ಬವರಾಜ್, ಸತೀಶ್‌ನಾಯ್ಕ್, ತಿಮ್ಮಣ್ಣ, ಮತ್ತಿತರರು ಇದ್ದರು.
ಪೋಟೋ, 1 ಚಳ್ಳಕೆರೆ ನಗರದಲ್ಲಿ 74ನೇ ಗಣರಾಜ್ಯೋತ್ಸವ ದಿನಾಚÀರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ತಹಶೀಲ್ದಾರ್ ಎನ್.ರಘುಮೂರ್ತಿ ನೆರೆವೆರಿಸಿದರು.
ಪೋಟೋ, 2 ಗಣರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿಕೊಂಡ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿದರು.
ಪೋಟೋ, 3 ಗಣರಾಜ್ಯೋತ್ಸವದಲ್ಲಿ ವಿವಿಧ ಕೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಸನ್ಮಾನ ಮಾಡಿದರು.
ಪೋಟೋ 4 , ಗಣರಾಜ್ಯೋತ್ಸವದಲ್ಲಿ ಶಾಲಾ ಮಕ್ಕಳು ನೃತ್ಯ ಪ್ರದರ್ಶಿಸಿದರು