ಚಳ್ಳಕೆರೆ : ಬುಡುಕಟ್ಟು ಸಂಪ್ರಾದಾಯಗಳ ತವರೂರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಚಳ್ಳಕೆರೆಯಲ್ಲಿ ಒಂದಿಲ್ಲೊAದು ಸಂಪ್ರಾದಯಗಳು ಕಾಣ ಸಿಗುತ್ತವೆ ಅದಕ್ಕೆ ಪೂರಕವೆಂಬAತೆ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಕಳೆದ ಐನೂರು ವರ್ಷಗಳ ಹಿಂದೆ ಗ್ರಾಮದ ನಿರ್ಮಾಣದ ಹಂತದಲ್ಲಿ ಹಾಕಿದ ಬುಡ್ಡೆಕಲ್ಲು ಈಗ ಅದರ ಆಯಶ್ಸು ಮುಗಿದಿದೆ ಎಂಬ ಪ್ರತೀತಿಗೆ ಈಗ ಹೊಸ ಬುಡ್ಡೆಕಲ್ಲು ಹಾಕಿ ಶಾಂತಿ ನೆಮ್ಮದಿಗೆ ಹಸಿರು ನಿಶಾನೆ ತೋರಿದ್ದಾರೆ.
ಹೌದು ನಿಜಕ್ಕೂ ಚಳ್ಳಕೆರೆ ಬಯಲು ಸೀಮೆ ಎಂಬ ಹಣೆ ಪಟ್ಟಿ ಕಳಚಿ ಈಗ ವಿಜ್ಞಾನ ನಗರಿಯಾಗಿ ಮಾರ್ಪಟ್ಟರು ಕೂಡ ಇಲ್ಲಿನ ಆಚಾರ ವಿಚಾರಗಳು ಮಾತ್ರ ಸ್ವಲ್ಪವೂ ಬದಲಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಗ್ರಾಮದ ಸಮಸ್ತ ಸಾರ್ವಜನಿಕರು ಹೊಸ ಬುಡ್ಡೆಕಲ್ಲನ್ನು ಹಂಪೆ ಹೊಸಪೇಟೆಯ ತುಂಗಭದ್ರಾ ನದಿಯ ನೀರಲ್ಲಿ ಹರಿಯುವಂತಹ ದೈವತ್ವದ ಕಲ್ಲನ್ನು ಗ್ರಾಮಕ್ಕೆ ತಂದು ದೇವಸ್ಥಾನದಲ್ಲಿ ೨೧ ದಿನಗಳ ವರೆಗೂ ತಣ್ಣಿರೀನಲ್ಲಿ ಇರಿಸಿ, ಪ್ರತಿದಿನ ಕಾಯಿ ಹೂಗಳಿಂದ ಪೂಜೆ ಮಾಡಲಾಗುತ್ತದೆ, ನಂತರ ಐದು ದಿನಗಳ ಕಾಲ ಅಕ್ಷತೆ ಕಾಳಿನಲ್ಲಿರಿಸಿ, ನಂತರ ವಸ್ತ್ರಾಭರಣದಲ್ಲಿ ಪೂಜೆ ಮಾಡುವುದರ ಮೂಲಕ ಸಂಪ್ರಾದಯಗಳನ್ನು ಕಟ್ಟಿಕೊಡುವ ಈ ಬುಡ್ಡೆಕಲ್ಲು ಮಹತ್ವ ಪಡೆಯುತ್ತದೆ,
ನಂತರ ಗ್ರಾಮದ ಹದಿಹರೆಯದ ಹುಡುಗಿಯರು, ಮಹಿಳೆಯರು, ಈಗೇ ಸರ್ವ ಜನಾಂಗವೂ ಸೇರಿ ಹೋಮ ಹವನಗಳನ್ನು ಮಾಡುವ ಮೂಲಕ ರಾತ್ರಿಯೆಲ್ಲ ಭಜನೆ ಮಾಡಿ ಮರುದಿನ ಗ್ರಾಮದ ಪ್ರತಿಯೊಂದು ಮನೆಯಲ್ಲಿ ತುಂಬಿದ ತಣ್ಣಿರು ಬಿಂದಿಗೆಯೊAದಿಗೆ ಬುಡ್ಡೆಕಲ್ಲಿಗೆ ಜಲಅಭಿಷೇಕ ಮಾಡುವ ಮೂಲಕ ನೆರೆದ ಭಕ್ತರು ಪುನೀತರಾಗುತ್ತಾರೆ.
ನಂತರ ಗ್ರಾಮದಲ್ಲಿ ಶಾಂತಿ ಸಮೃದ್ದಿ ನೆಲೆಸಲು ಪ್ರಾರ್ಥನೆ ಮಾಡಿ ಊರಿನ ಮುಖಂಡರ ಸಮ್ಮುಖದಲ್ಲಿ ಬುಡ್ಡೆಕಲ್ಲನ್ನು ಪ್ರತಿಷ್ಠಾಪನೆ ಮಾಡಿ ಊರಿಗೆಲ್ಲರಿಗೂ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಎಂ.ಓಬಣ್ಣ, ಮೇಷ್ಟ್ರು ಈರಣ್ಣ, ವಕೀಲರಾದ ಶಶಿಕುಮಾರ್, ರುದ್ರಪ್ಪ, ಸತ್ಯನಾರಾಯಣ ಶೆಟ್ಟಿ, ಜಿಟಿ.ಮಾರಯ್ಯ, ನಾಗರಾಜ, ಚಂದ್ರಣ್ಣ, ವೆಂಕಟೇಶ ರಣಧೀರ, ಮಾರಣ್ಣ, ಬೊಮ್ಮಣ್ಣ, ಗಂಗಾಧರ ಅನೇಕರು ಉಪಸ್ಥಿತರಿದ್ದರು