ಚಳ್ಳಕೆರೆ : ನಮ್ಮ ದೇಶದ ಭವಿಷ್ಯ ನಮ್ಮ ಬೆರಳ ತುದಿಯಲ್ಲಿದೆ, ದೇಶದ ಪ್ರಗತಿಗೆ ಮತದಾನ ಅಸ್ತçವಾಗಿದೆ, ಆದ್ದರಿಂದ ಮತದಾನವನ್ನು ಅತ್ಯಂತ ಜವಾಬ್ದಾರಿಯಿಂದ ಚಲಾಯಿಸಬೇಕು ಎಂದು ಹಿರಿಯ ಸಿವಿಲ್ ಮತ್ತು ಜೆಎಂಎಪ್‌ಸಿ ನ್ಯಾಯದೀಶರಾದ ರೇಷ್ಮಾ ಕಲಕಪ್ಪ ಗೋಣಿ ಹೇಳಿದರು.
ನಗರದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ರಾಷ್ಟಿçÃಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು, ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶ ಇದ್ದರೆ ಅದು ಭಾರತ ಮಾತ್ರ, ಆದ್ದರಿಂದ ದೇಶದ ಭಧ್ರ ಬುನಾದಿಗೆ ಪಣತೊಡಬೇಕು, ಎಂದು ಕಿವಿಮಾತು ಹೇಳಿದರು.
ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಪ್‌ಸಿ ನ್ಯಾಯದೀಶರಾದ ಗಾಯಿತ್ರಿ ಎಸ್.ಕಾಟೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನ ಒಂದು ವ್ಯವಸ್ಥೆ ಇಂತಹ ವ್ಯವಸ್ಥೆಯಲ್ಲಿ ಎಲ್ಲಾರು ತಪ್ಪದೆ ಮತದಾನ ಮಾಡಬೇಕು ಎಂದರು.
ತಹಶಿಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಮನುಷ್ಯನ ಹಸಿವು ನೀಗಿಸಲು ಅನ್ನ ಎಷ್ಟು ಮುಖ್ಯವೋ ಅಧೇ ರೀತಿ ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಷ್ಟೆ ಮುಖ್ಯ ಆದ್ದರಿಂದ ಚುನಾವಣೆ ಗುರುತಿನ ಚೀಟಿ ಸಹಾಯದಿಂದ ಸರಕಾರದ ಹತ್ತು ಹಲವು ಸೌಲಭ್ಯಗಳನ್ನು ಪಡೆದರೂ ಸಹ ಚುನಾವಣೆ ಸಂದರ್ಭದಲ್ಲಿ ಮತಚಾಲಾಯಿಸಲು ಆಶಕ್ತಿತೋರಬೇಕು, ದೇಶದ ಪ್ರಜಾಪ್ರಭುತ್ವ ಉಳಿಸಲು ಮತದಾನ ಮಾಡುವಂತೆ ತಿಳಿಸಿದರು.
ಬಿಇಒ ಕೆ.ಎಸ್.ಸುರೇಶ್ ಮಾತನಾಡಿ, ಹೊಸದಾಗಿ ಮತದಾನ ಮಾಡುವ ಯುವ ಪೀಳಿಗೆ ಅತ್ಯಂತ ಜಾಗರೂ ಕತೆಯಿಂದ ಉತ್ತಮವಾದ ವ್ಯಕ್ತಿಯನ್ನು ಆಯ್ಕೆ ಮಾಡುವ ಮೂಲಕ ಪ್ರಜಾಪ್ರಭುತ್ವದ ನಿಲುವಿಗೆ ಕಾರಣರಾಗಿ, ವಿದ್ಯಾವಂತ ಯುವಕರೆ ಇಂದು ಮತದಾನದಿಂದ ಹಿಂದೆ ಸರಿಯುತ್ತಿದ್ದಾರೆ ಆದ್ದರಿಂದ ಒಂದು ದಿನ ಮತದಾನಹಕ್ಕಿನಿಂದ ದೂರ ಸರಿದರೆ ಮುಂದೆ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ದೂರ ಉಳಿಯಬೇಕಾಗುತ್ತದೆ ಎಂದರು.
ಇದೇ ಸಂಧರ್ಭದಲ್ಲಿ ಚುಣಾವಣೆ ಶಾಖೆಯಿಂದ ಯುವ ಮತದಾರರ ಗುರುತಿನ ಚೀಟಿಯನ್ನು ಯುವ ಮತದಾರರಿಗೆ ಹಸ್ತಾಂತರ ಮಾಡಿದರು.
ಈ ಸಂಧರ್ಭದಲ್ಲಿ ಇಓ.ಹೊನ್ನಯ್ಯ, ಪೌರಾಯುಕ್ತ ಸಿ.ಚಂದ್ರಪ್ಪ, ವಕೀಲರ ಸಂಘದ ಅಧ್ಯಕ್ಷ ಜಿ.ಎಂ.ಆನAದಪ್ಪ, ತಾಪಂ.ಸಹಾಯಕ ನಿದೇರ್ಶಕ ಸಂತೋಶ್ ಕುಮಾರ್, ಸಂಪತ್ ಕುಮಾರ್, ಉಪನ್ಯಾಸಕ ನರಸಿಂಹಮೂರ್ತಿ, ಚುನಾವಣೆ ಶಾಖೆಯ ಶಿರಸ್ತೆದಾರ್ ಶಕುಂತಲಾ, ಪ್ರಕಾಶ್, ಓಬಳೇಶ್, ರುಕ್ಮೀಣಿ, ಉಪನ್ಯಾಸಕ ತಿಪ್ಪೆಸ್ವಾಮಿ, ಶಿಕ್ಷಕ ವೆಂಕಟೇಶ್, ಇತರರು ಇದ್ದರು.
ಫೊಟೊ, ಚಳ್ಳಕೆರೆ ನಗರದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ರಾಷ್ಟಿçÃಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಗುರುತಿ ಚೀಟಿ ನೀಡಲಾಯಿತು.

About The Author

Namma Challakere Local News
error: Content is protected !!