ಚಳ್ಳಕೆರೆ : ಕಾಡು ಗೊಲ್ಲ ಜನಾಂಗದ ಮುಖಂಡರು ಎಸ್‌ಟಿ ಮೀಸಲಾತಿ ಕೋರಿ ಇಂದು ನಗರದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಜನಸಂಖ್ಯೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣೆಗೆ ಮೂಲಕ ಬಿಸಿಲು ಲೆಕ್ಕಿಸದೆ ತಮ್ಮ ಮೀಸಲಾತಿ ಹಕ್ಕಿಗಾಗಿ ಹೋರಾಟ ನಡೆಸಿದರು.
ಇನ್ನೂ ಗ್ರಾಮೀಣ ಪ್ರದೇಶದಿಂದ ತಮ್ಮದೇ ಆದ ಹುಡುಗೆ ತೊಡಿಗೆಯನ್ನು ತೊಟ್ಟು ಆರಾಧ್ಯ ದೈವಗಳಾದ ಜುಜ್ಜಪ್ಪ, ಯತ್ತಪ್ಪ ಸೇರಿದಂತೆ ವಿವಿಧ ಹಾಡುಗಳನ್ನು ಹಾಡುವ ಮೂಲಕ ಪ್ರತಿಭಟನೆಯಲ್ಲಿ ಕಾಡು ಗೊಲ್ಲ ಸಂಪ್ರಾದಯಾದAತೆ ಕರಿಕಂಬಳಿ ಊರುಗೋಲು ಹಿಡಿದು ಮೀಸಲಾತಿ ಹಕ್ಕಿಗಾಗಿ ಘೋಷಣೆಗಳನ್ನು ಕೂಗುತ್ತಾ ನಗರದ ಗೊಲ್ಲರ ವಿದ್ಯಾರ್ಥಿ ನಿಲಯದಿಂದ ಹೊರಟ ಪ್ರತಿಭಟನಾ ಮೆರವಣೆಗೆ,
ವಾಲ್ಮೀಕಿ ವೃತ್ತ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ನಗರದ ಹೃದಯ ಭಾಗದ ನೆಹರು ವೃತ್ತದಲ್ಲಿ ಕರಿ ಕಂಬಳಿ ಹಾಸಿ ಉರುಳುವ ಮೂಲಕ ಮೀಸಲಾತಿಗಾಗಿ ವಿಭಿನ್ನ ಶೈಲಿಯಲ್ಲಿ ಪ್ರತಿಭಟಿಸಿದರು, ನಂತರ ತಾಲೂಕು ಕಛೇರಿಗೆ ಸಾಗಿದ ಪ್ರತಿಭಟನಕಾರರು ಕೆಲ ಕಾಲ ತಾಲೂಕು ಕಛೇರಿಯ ಆವರಣದಲ್ಲಿ ನೆರೆದು ಕಾಡು ಗೊಲ್ಲರ ಮುಖಂಡರು ತಮ್ಮ ಬೇಡಿಕೆಗಳನ್ನು ರಾಜ್ಯ ಸರಕಾರಕ್ಕೆ ರವಾನಿಸುವಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಗೆ ಮನವಿ ನೀಡಿದರು.
ಇನ್ನೂ ಕಾಡುಗೊಲ್ಲ ರಾಜ್ಯಾಧ್ಯಕ್ಷ ರಾಜಣ್ಣ ಮಾತನಾಡಿ ಈಡೀ ರಾಜ್ಯದಲ್ಲಿ ಕಾಡುಗೊಲ್ಲ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಅನಿವಾರ್ಯ ಆದ್ದರಿಂದ ನಮ್ಮನ್ನು ಆಳುವ ಸರಕಾರಗಳು ಕೇವಲ ಕಣ್ಣೋರೆಸುವ ತಂತ್ರಗಾರಿಕೆ ಬಿಟ್ಟು ಮೀಸಲಾತಿ ಹಕ್ಕನ್ನು ನ್ಯಾಯಯುತವಾಗಿ ನೀಡಬೇಕು, ಇಲ್ಲವಾದರೆ ಮುಂದಿನ ಚುನಾವಣೆಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡಿದರೂ ನಿಗಮಕ್ಕೆ ಅಧ್ಯಕ್ಷರ ನೇಮಕಾತಿ ಮಾಡಿಲ್ಲ ಅನುದಾನ ನೀಡಿ ಮತ್ತೆ ಮರುವಾಪಸ್ ಪಡೆದಿದ್ದಾರೆ, ಬುಡಕಟ್ಟು ಸಮುದಾಯದ ಗೊಲ್ಲ ಸಮುದಾಯಗಳ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದ ಸರಕಾರಗಳಿಗೆ ಈ ಬಾರಿ ಚುನಾವಣೆಯೊಳಗೆ ಘೋಷಣೆ ಮಾಡದಿದ್ದರೆ ಗೊಲ್ಲರ ಹಟ್ಟಿಗಳಲ್ಲಿ ಚುನಾವಣೆ ಬಹಿಷ್ಕರದ ನಾಮಫಲಕ ಹಾಕುವ ಮೂಲಕ ಆಡಳಿತ ಸರಕಾರಕ್ಕೆ ಟಾಂಗ್ ನೀಡಿದ್ದಾರೆ.
ಮಾಜಿ ಜಿಪಂ.ಸದಸ್ಯ ರಂಗಸ್ವಾಮಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತಿಗಿಳಿದ ಅವರು ಮೊದಲಿಗೆ ಎತ್ತಪ್ಪ ಜುಂಜಪ್ಪ ದೇವರ ಸ್ಲೋಕಗಳ ಗೀತಾಸಾರವನ್ನು ಹೇಳುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮೀಸಲಾತಿ ಹಕ್ಕು ನೀಡುವ ಭಾಗ್ಯ ಅಂಬೇಡ್ಕರ್ ನೀಡಿದ್ದಾರೆ ಆದರೆ ನಮ್ಮನ್ನಾಳುವ ಸರಕಾರಗಳು ಮಾತ್ರ ಗೊಲ್ಲರನ್ನು ಇನ್ನೂ ಹಟ್ಟಿಗಳಲ್ಲಿ ಕುರಿ ಮೇಕೆ, ದನಗಳ ಜೊತೆಗೆ ಪ್ರಾಣಿಗಳಂತೆ ಇರಲಿ ಎಂಬ ಮನೋದೋರಣೆ ಸಲ್ಲದು,
ಆದ್ದರಿಂದ ನಮ್ಮ ಹಕ್ಕು ನಮಗೆ ನೀಡಬೇಕು, ಕಾಡುಗೊಲ್ಲ ಸಮಾಜ ಬಹಳ ಹಿಂದುಳಿದ ಸಮಾಜವಾಗಿದೆ. ಸಮುದಾಯಯ ನ್ಯಾಯುತ ಬೇಡಿಕೆಯಾದ ಕಾಡುಗೊಲ್ಲ ಸಮಾಜವನ್ನು ಎಸ್‌ಟಿ ಗೆ ಸೇರಿಸುವಂತೆ ಅನೇಕ ಬಾರಿ ಹೋರಾಟ ಮಾಡಿದರೂ ಸಮುದಾಯಕ್ಕೆ ನ್ಯಾಯ ಸಿಕ್ಕಿಲ್ಲ, ಕಾಡುಗೊಲ್ಲ ಸಮಾಜಕ್ಕೆ ಎಸ್‌ಟಿ ಮೀಸಲಾತಿ ನೀಡದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಬೃಹತ್ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಜಯಮ್ಮ ಬಾಲರಾಜು, ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ, ತಾಲ್ಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್, ಕಾಡುಗೊಲ್ಲ ಗೌರವಾಧ್ಯಕ್ಷ ರಂಗಸ್ವಾಮಿ, ಸಿ.ವೀರಭದ್ರಬಾಬು, ಗದ್ದಿಗೆ ತಿಪ್ಪೆಸ್ವಾಮಿ, ಎಸ್.ರಾಜಕುಮಾರ್, ಮೀಸೆ ಮಹಾಲಿಂಗಪ್ಪ, ಜಿ.ಕೆ.ವೀರಣ್ಣ, ಕಾಂತರಾಜ್, ಕಾಟಪನಹಟ್ಟಿ ವೀರೇಶ್, ಸುರೇಶ್, ಬಾನು ವೀರೇಶ್, ಕುರುಡಿಹಳ್ಳಿ ರಾಜು, ಸೇರಿದಂತೆ ಕಾಡು ಗೊಲ್ಲ ಸಮಾಜದ ಸಾವಿರಾರರು ಜನರು ಇದ್ದರು