ಚಳ್ಳಕೆರೆ : ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಜನಪರ ಆಡಳಿತ ನಡೆಸುವ ಸರಕಾರಗಳು ಡಬಲ್ ಇಂಜಿನ ಮೂಲಕ ಹಲವು ಯೋಜನೆಗಳು ಇಂದು ಸಾರ್ವಜನಿಕರಿಗೆ ವರದಾನವಾಗಿವೆ, ಆದ್ದರಿಂದ ಮುಂಬರುವ ಚುನಾವಣೆಗೆ ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷದಿಂದ ಮುಖಂಡರು ಪಕ್ಷವನ್ನು ತೊರೆದು ಕಮಲದತ್ತ ಮುಖ ಮಾಡಿದ್ದಾರೆ ಎಂದು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಆಂಕಾಕ್ಷಿ ಅನಿಲ್ ಕುಮಾರ್ ಹೇಳಿದ್ದಾರೆ.
ಅವರು ತಾಲೂಕಿನ ತುರುವನೂರು ಗ್ರಾಮದಲ್ಲಿ ಆರು ಬೂತ್ ಗಳಲ್ಲಿ ವಿಜಯ ಸಂಕಲ್ಪ ಅಭಿಯಾನದ ಸದಸ್ಯತ್ವ ನೋಂದಣಿ ಹಾಗೂ ಮನೆ ಮನೆಗಳಿಗೆ ಕರಪತ್ರ, ಸ್ಟಿಕರ್ ಅಂಟಿಸುವ ಹಾಗೂ ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡಿಸಲಾಯಿತು..
ಈ ಸಂದರ್ಭದಲ್ಲಿ ವಿಸ್ತಾರಕರಾದ ರಾಜಣ್ಣ, ಪ್ರಧಾನ ಕಾರ್ಯದರ್ಶಿಯಾದ ಶಶಿಧರ್‌ರೆಡ್ಡಿ, ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಸದಸ್ಯ ಆರ್.ಮಂಜುನಾಥ್, ಸಾಮಾಜಿಕ ಜಾಲತಾಣದ ಸಂಚಾಲಕÀ ರಮೇಶ, ವರುಣ್, ಪ್ರಕಾಶ್ ,ಮಹಾಂತೇಶ, ಗಿರೀಶ್, ದಯಾನಂದ, ತಿಪ್ಪೇಸ್ವಾಮಿ ,ಮಂಜುನಾಥ, ತಿಪ್ಪೇಸ್ವಾಮಿ, ರಾಜು, ರಘು , ಹಾಗೂ ಸ್ಥಳೀಯ ಭೂತ್ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.