ಚಳ್ಳಕೆರೆ : ರಾಜ್ಯದಲ್ಲಿ ಯಾವುದೇ ಸರಕಾರ ಇರಲಿ ಆದರೆ ಅಡುಗೆ ಸಹಾಯಕರಿಗೆ ಕನಿಷ್ಠ ವೇತನ ನೀಡಬೇಕು ಎಂದು ಶಾಸಕ ಟಿ.ರಘುಮೂರ್ತಿ ರಾಜ್ಯ ಸರಕಾರಕ್ಕೆ ಪರೋಕ್ಷವಾಗಿ ಟಾಂಗ್ ನೀಡಿದರು.
ಅವರು ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಮಧ್ಯಾಹ್ನ ಬಿಸಿಯೂಟ ಅಡುಗೆ ತಯಾರಕರ ಕಾರ್ಯಕರ್ತರಿಗೆ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಚಳ್ಳಕೆರೆ ಕ್ಷೇತ್ರದಲ್ಲಿ ಮೂರನೇ ಬಾರಿಗೆ ನಾನೇ ಶಾಸಕ ಹಾಗುತ್ತೆನೆ ನಿಮ್ಮ ಕನಿಷ್ಠ ವೇತನಕ್ಕೆ ಗ್ರೀನ್ ಸಿಗ್ನಲ್ ಕೋಡುವೆ, ನಮ್ಮ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣೆವೆ ನಿಮ್ಮ ಬೇಡಿಕೆಗೆ ನ್ಯಾಯ ದೊರಕಿಸಲಾಗುವುದು,
ಒಂದು ವೇಳೆ ಈಗೀನ ಸರಕಾರ ಕನಿಷ್ಠ ವೇತನ ಈಗಲೇ ಘೋಷಣೆ ಮಾಡಲಿ ಎಂದು ಪರೋಕ್ಷವಾಗಿ ಚಾಟಿ ಬೀಸಿದರು.
ಬಿಸಿಯೂಟ ತಯಾರಿಕೆಯಲ್ಲಿ ಗುಣಮಟ್ಟ ಮತ್ತು ಸ್ವಚ್ಛತೆಯಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷವಹಿಸದೆ ಅಡುವೆ ತಯಾರು ಮಾಡುವಾಗ ಕೈಗಳು ಹಾಗೂ ಅಡುಗೆ ಮಾಡುವ ಕೊಠಡಿ, ಪಾತ್ರೆಗಳನ್ನು ಸ್ವಚ್ಚತೆ ಇಡಬೇಕ. ಗ್ಯಾಸ್ ಸಿಲೆಂಡರ್ ಬಳಕೆ ಮಾಡುವಾಗ ತುಂಬಾ ಎಚ್ಚರವಹಿಸಬೇಕು ಎಂದರು.
ಬಿಇಒ ಕೆ.ಎಸ್.ಸುರೇಶ್ ಮಾತನಾಡಿ ಶಾಲೆಗೆ ಬರುವ ಆಹಾರ ಪಡಿತರಗಳ ಗುಣಮಟ್ಟ ಪರಿಶೀಲಿಸಿ, ಗುಣಮಟ್ಟ ಖಾತರಿ ಪಡಿಸಬೇಕು. ಆಹಾರ ಪದಾರ್ಥಗಳು, ತರಕಾರಿಗಳನ್ನು ಬಳಸಿಕೊಳ್ಳುವ ಮುನ್ನ ಅವುಗಳ ಸ್ವಚ್ಛತೆಗೆ ಮಹತ್ವ ನೀಡಿ, ಗುಣಮಟ್ಟ ಪರಿಶೀಲಿಸಿದ ಬಳಿಕವೇ ಬಳಸಬೇಕು, ಅಡುಗೆ ಸಿಬ್ಬಂದಿ ಒಂದು ಕ್ಷಣ ಕರ್ತವ್ಯದಲ್ಲಿ ಲೋಪವೆಸಗಿದರೆ, ಅದರ ಪರಿಣಾಮ ವಿದ್ಯಾರ್ಥಿಗಳ ಮೇಲೆ ಬೀರುವುದರಿಂದ ಜಾಗ್ರತೆ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಯೋಗ್ಯ ಇಲಾಖೆ ತಿಪ್ಪೇಸ್ವಾಮಿ ಅಡುಗೆ ತಯಾರಿಕ ಸಿಬ್ಬಂದಿಗಳು ತಮ್ಮ ಕೈಗಳನ್ನು ಯಾವ ರೀತಿ ಸ್ವಚ್ಚತೆ ಮಾಡಿಕೊಳ್ಳ ಬೇಕು ಎಂದು ತರಬೇತಿ ನೀಡಿದರೆ. ಅಗ್ನಿಶಾಮಕ ದಳದ ಅಧಿಕಾರಿ ಅಗ್ನಿ ದುರಂತಗಳು ಸಂಭವಿಸದAತೆ ಮತ್ತು ಸಂಭವಿಸಿದಾಗ ಕೈಗೊಳ್ಳಬೇಕಾದ ತುರ್ತು ಕಾರ್ಯಗಳ ಬಗ್ಗೆ ಪ್ರತ್ಯಕ್ಷತೆ ತೋರಿಸುವ ಮೂಲಕ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಕಾರ್ಮಿಕ ಸಂಘಟನೆಯ ಮುಖಂಡರಾದ ಸಿ.ವೈ.ಶಿವರುದ್ರಪ್ಪ, ದೊಡ್ಡ ಉಳ್ಳಾರ್ತಿ ಕರಿಯಣ್ಣ, ಹೆಚ್.ಎಸ್.ಸೈಯಾದ್, ಅಕ್ಷರದಾಸೋಹ ಸಹಯಾಕ ನಿರ್ದೇಶಕ ತಿಪ್ಪೇಸ್ವಾಮಿ ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳ, ಸದಸ್ಯರಾದ ರಮೇಶ್ಗೌಡ, ಇಂದ್ರೇಶ್. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಲಿಂಗಪ್ಪ, ಕಾರ್ಯದರ್ಶಿ ಎಸ್.ಟಿ,ತಿಪ್ಪೇಸ್ವಾಮಿ ಇತರರಿದ್ದರು.