ಚಳ್ಳಕೆರೆ : ಅಧಿಕಾರ ಇಂದು ಬಂದು ಮುಂದೆ ಹೋಗುತ್ತದೆ ಆದರೆ ನಾವು ಅಧಿಕಾರದಲ್ಲಿ ಇರುವಷ್ಟು ದಿನ ಸಾರ್ವಜನಿಕರ ಸೇವೆ ಯಾವ ರೀತಿಯಲ್ಲಿ ಮಾಡಿದ್ದೆವೆ ಎಂಬುದು ಮಾತ್ರ ತಿಳಿಯುತ್ತದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ನಗರಸಭೆ ಸಭಾಂಗಣದಲ್ಲಿ ನೂತನವಾಗಿ ಆಯ್ಕೆಗೊಂಡ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರರವರನ್ನು ಸನ್ಮಾನಿಸಿ, ನಂತರ ಕಛೇರಿಯ ಪೂಜಾ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು, ರಾಜಾಕರಣ ಎಂಬುದು ನಿಂತ ನೀರಲ್ಲ ಸದಾ ಹರಿಯುವ ನದಿಯಂತೆ ಅದನ್ನು ನಾವು ಎಷ್ಟರ ಮಟ್ಟಿಗೆ ಬಳಸಿಕೊಳ್ಳುತ್ತೆವೆ ಎಂಬುದು ಮಾತ್ರ ಒಬ್ಬ ರಾಜಾಕರಣಿ ಹರಿಯಬೇಕು, ಆದ್ದರಿಂದ ಹುದ್ದೆ ಅಲಂಕರಿಸಿದ ರಾಘವೇಂದ್ರ ಸಾರ್ವಜನಿರಕರ ಸೇವೆಗೆ ನಿರಂತರ ಸಂಪರ್ಕದಲ್ಲಿ ಇರುವುದರ ಮೂಲಕ ತಮ್ಮ ನಿಷ್ಠೆ ತೋರಬೇಕು ಎಂದರು.
ಇನ್ನೂ ನೂತನವಾಗಿ ಅಧಿಕಾರ ಸ್ವೀಕರಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜೆ.ರಾಘವೇAದ್ರ ಮಾತನಾಡಿ, ಈಗಾಗಲೇ ಜನರ ಒಡನಾಡಿಯಾಗಿ ನಿರಂತರ ಸಾರ್ವಜನಿಕರ ಸೇವೆಯಲ್ಲಿ ಇದ್ದೆನೆ ಇನ್ನೂ ಮುಂದಿನ ದಿನಗಳಲ್ಲಿ ಇನ್ನೂ ಅತ್ಯುತ್ತಮ್ಮ ಸೇವೆ ಸಲ್ಲಿಸುವುದರ ಮೂಲಕ ನಗರಸಭೆ ಮೇಲಸ್ಥರಕ್ಕೆ ಕೊಂಡುಯ್ಯುಲು ಪ್ರಮಾಣಿಕ ಪ್ರಯತ್ನ ಮಾಡುತ್ತೆನೆ ಎಂದರು.
ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷ ಸುಮಕ್ಕ, ಉಪಾಧ್ಯಕ್ಷೆ ಮಂಜುಳಾ,ರಮೇಶ್ ಗೌಡ, ಮಲ್ಲಿಕಾರ್ಜುನ, ಕವಿತಾ, ಸುಮಾ, ಜೈತುನ್‌ಬಿ, ಸುಜತಾ, ಪೌರಾಯುಕ್ತ ಸಿ.ಚಂದ್ರಪ್ಪ, ಪಟ್ಟಣ ಪಂಚಾಯಿತಿ ಪೌರಾಯುಕ್ತೆ ಟಿ.ಲೀಲಾವತಿ, ಎಂ.ಜೆ.ಕುಮಾರ್ ಸಾರ್ವಜನಿಕರು, ಅಧಿಕಾರಿ ಸಿಬ್ಬಂದಿ ವರ್ಗ, ಕುಟುಂಬದ ವರ್ಗ ಈಗೇ ಅಪಾರ ಅಭಿಮಾನಿ ಬಳಗ ಶುಭಾ ಕೋರಿದರು.

About The Author

Namma Challakere Local News
error: Content is protected !!