ಚಳ್ಳಕೆರೆ : ಮಕ್ಕಳ ಕಲಿಕಾ ಆಸಕ್ತಿಗೆ ಅನುಗುಣವಾಗಿ ಇಂದು ನಾವು ಕಲಿಕಾ ಹಬ್ಬವನ್ನು ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಗ್ರಾಪಂ.ಅಧ್ಯಕ್ಷೆ ಉಮಾದೇವಿ ಹೇಳಿದ್ದಾರೆ.
ಅವರು ತಾಲೂಕಿನ ಘಟಪರ್ತಿ ಶಾಲೆಯಲ್ಲಿ ಎರಡು ದಿನಗಳ ಕಾಲ ಆಯೋಜಿಸಿದ್ದ ಕಲಿಕಾ ಹಬ್ಬದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಲಿಕಾ ಹಬ್ಬವನ್ನು ಮಕ್ಕಳಲ್ಲಿ ವೈಜ್ಞಾನಿಕ ತಳಹದಿಯಾಗಿ ಕಲಿಕೆಯುಂಟು ಮಾಡುತ್ತದೆ ಆದ್ದರಿಂದ ಇಲ್ಲಿ ಕಲಿತ ಪ್ರತಿಯೊಂದು ಮಗುವು ತಮ್ಮ ಶಾಲೆಗಳಲ್ಲಿ ಕಲಿಕಾ ಪೂರಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳ ಬೇಕು ಎಂದರು.
ಇನ್ನೂ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ, ಮಕ್ಕಳ ಮಾನಸೀಕ ಸಾಮಥ್ಯಕ್ಕೆ ತಕ್ಕನಾಗಿ ಕಲಿಕಾ ಹಂತಗಳನ್ನು ಕಲಿಸಬೇಕು ಆದ್ದರಿಂದ ಇಂದು ನಡೆಯುವ ಕಲಿಕಾ ಹಬ್ಬವನ್ನು ಪೋಷಕರು ಕೂಡ ಭಾಗವಹಿಸಿ ಸಂತಸ ವ್ಯಕ್ತಪಡಿಸಿರುವುದು ಶ್ಲಾಘನೀಯ ಎಂದರು.
ಮುಖ್ಯ ಶಿಕ್ಷಕ ಮಂಜುಪ್ಪ ಮಾತನಾಡಿ, ಘಟಪರ್ತಿ ಕ್ಲಸ್ಟರ್ ನ 8 ಸರ್ಕಾರಿ ಶಾಲೆಗಳಿಂದ ಒಟ್ಟು 120 ಮಕ್ಕಳು ಭಾಗವಹಿಸಿ 4 ಕಾರ್ಯಕ್ರಮಗಳಲ್ಲಿ ಮಕ್ಕಳು ವಿವಿಧ ರಚನಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ಆಸಕ್ತಿಯಿಂದ ಕಲಿಯುತ್ತಾರೆ, ಹಾಗು ತರಬೇತಿ ಪಡೆದ ಸಂಪನ್ಮೂಲ ಶಿಕ್ಷಕರು ನವೀನ್ಯತೆಯ ಚಟುವಟಿಕೆ ಮಾಡಿಸಿ ಮಕ್ಕಳಲ್ಲಿ ಹೆಚ್ಚು ಆಸಕ್ತಿ ಉಂಟು ಮಾಡುತ್ತಾರೆ ಎಂದರು.
ಈದೇ ಸಂಧರ್ಭದಲ್ಲಿ ಶಿಕ್ಷಣ ಸಂಯೋಜಕ ಮಾರುತಿ ಭಂಡಾರಿ, ತಿಪ್ಪೆಸ್ವಾಮಿ, ಪಿಡಿಓ ಹೊನ್ನುರಪ್ಪ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶಿವಣ್ಣ, ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು, ನೋಡಲ್ ಅಧಿಕಾರಿ ಚಂದ್ರಹಾಸ್, ರಾಜಣ್ಣ, ಮಂಜಪ್ಪ, ಶಿವಣ್ಣ, ಈಶ್ವರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಇತರರು ಇದ್ದರು.