ಮನುಷ್ಯನ ಜೀವ ಅತ್ಯಮೂಲ್ಯವಾದದ್ದು, ಕಳೆದುಕೊಂಡರೆ ಮತ್ತೆ ಸಿಗಲಾರದು..! ಶ್ರೀಮಾದರ ಚೆನ್ನಯ್ಯ ಸ್ವಾಮೀಜಿ
ಚಳ್ಳಕೆರೆ : ಮನುಷ್ಯನ ಜೀವ ಅತ್ಯಮೂಲ್ಯವಾದದ್ದು ಒಂದು ವೇಳೆ ಕಳೆದುಕೊಂಡರೆ ಮತ್ತೆ ಸಿಗಲಾರದು ಇರುವಷ್ಟು ದಿನ ಜಾಗ್ರತೆಯಿಂದ ಕಾಪಾಡಿಕೊಳ್ಳಬೇಕು ಎಂದು ಶ್ರೀ ಮಾದರ ಗುರು ಪೀಠದ ಶ್ರೀಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜೀಗಳು ಆರ್ಶಿವಚನ ನೀಡಿದರು.
ಅವರು ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಉದ್ಘಾಟನೆ ನೆರೆವೆರಿಸಿ ಆಶೀವಚನ ನೀಡಿದ ಸ್ವಾಮೀಜೀಗಳು, ನಾವು ಸಮಾಜಕ್ಕೋಸ್ಕರ ಬದುಕಿದರೆ ನಾವು ಕಾಲವಾದ ನಂತರವೂ ಕೂಡ ಸಮಾಜ ನಮ್ಮನ್ನು ಜೀವಂತವಾಗಿರಿಸುತ್ತದೆ, ಆದ್ದರಿಂದ ಯುವಕರು ರಸ್ತೆ ಸುರಕ್ಷತೆಯ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು, ಕಾಲೇಜಿನ ಹಂದತದಲ್ಲಿ ನಿಮ್ಮ ಜೀವನದ ಹಿಡಿತವನ್ನು ನೀವು ಹರಿಯಬೇಕು, ನಿಮ್ಮ ತಂದೆ ತಾಯಿಗಳ ಕನಸು ನನಸು ಮಾಡುವ ಈ ಹಂತದಲ್ಲಿ ನಮ್ಮ ಬದುಕನ್ನು ಹಸನುಗೊಳಿಸಬೇಕು, ಪ್ರತಿಯೊಬ್ಬರು ಜೀವನದ ಅಮೂಲ್ಯವನ್ನು ತಿಳಿದುಕೊಳ್ಳಬೇಕು ಎಂದರು.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿದ ಅವರು, ನಮ್ಮ ದೇಶ ಎಲ್ಲಾ ರಂಗಗಳಲ್ಲಿ ಬದಲಾವಣೆ ಆಗಬೇಕಾದರೆ ಇಂದಿನ ಯುವಕರು ತಮ್ಮನ್ನು ತಾವು ಪೂರ್ಣ ಪ್ರಮಾಣದಲ್ಲಿ ಸಮಾಜಕ್ಕೋಸ್ಕರ ಸಮರ್ಪಿಸಿಕೊಳ್ಳುವ ಅನಿವಾರ್ಯತೆ ಮತ್ತು ಅಗತ್ಯತೆ ಇದೆ, ಚಳ್ಳಕೆರೆ ತಾಲೂಕಿನಲ್ಲಿ ಸಂಜೀವಿನಿ ಜೀವರಕ್ಷಕ ಟ್ರಸ್ಟ್ ವತಿಯಿಂದ ಆಯೋಜಿಸಿರುವಂತಹ ಈ ಕಾರ್ಯಕ್ರಮ ಸಮಾಜಕ್ಕೆ ಅತ್ಯಂತ ಉಪಯುಕ್ತವಾಗಿದೆ ಇದರ ಮುಖಾಂತರ ಪ್ರತಿದಿನ ನಡೆಯುತ್ತಿರುವ ಅಪಘಾತಗಳನ್ನು ನಿಯಂತ್ರಿಸಬಹುದು ಯುವಕರಿಗೆ ಹೆಚ್ಚು ಹೆಚ್ಚು ಜಾಗೃತೆ ಮೂಡಿಸಬಹುದು, ಹಾಗೆಯೇ ಇಲ್ಲಿ ನೆರೆದಿರುವಂತಹ ಎಲ್ಲ ಯುವಕರು ಕೂಡ ಒಂದು ಸಂಕಲ್ಪ ಮಾಡಿ ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳೋಣ ಎಂದರು.
ಸಮಾರAಭದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ ಪ್ರತಿದಿನ ಅದೇಷ್ಟು ಅಪಘಾತಗಳು ಸಂಭವಿಸುತ್ತವೆ ಇದಕ್ಕೆ ಜಾಗ್ರತೆ ಇಲ್ಲದೆ ಇರುವುದು ಪ್ರಮುಖ ಕಾರಣವಾಗಿದೆ, ಯುವಕರು ಹೆಚ್ಚು ಹೆಚ್ಚು ಇಂಥ ಕಾರ್ಯಕ್ರಮಗಳನ್ನು ಜಾಗೃತಾ ತರಬೇತಿಗಳನ್ನು ಆಯೋಜಿಸುವದರ ಮುಖಾಂತರ ಸಮಾಜ ಸೇವೆಯನ್ನು ಮೆರೆಯಬೇಕು ಎಂದು ಹೇಳಿದರು.
ಮತ್ತು ಈ ಸಂಕಲ್ಪದ ಮುಖಾಂತರ ಈಡೀ ತಾಲೂಕಿನ ವ್ಯಾಪ್ತಿಯಲ್ಲಿ ಯಾವುದೇ ಅಪಘಾತಗಳು ಸಂಭವಿಸದ ರೀತಿಯಲ್ಲಿ ನಾವು ನಮ್ಮ ಕುಟುಂಬ ಮತ್ತು ನಮ್ಮ ನೆರೆಹೊರೆಯವರಿಗೂ ಕೂಡ ಜಾಗೃತಿಯನ್ನು ಮೂಡಿಸುತ್ತೇವೆಂಬ ದೀಕ್ಷೆಯನ್ನು ಪಡೆಯೋಣವೆಂದು ಹೇಳಿದರು.
ಪೊಲೀಸ್ ಸಬ್ ಇನ್ಸೆಪೆಕ್ಟೆರ್ ಕೆ.ಸತೀಶ್‌ನಾಯ್ಕ ಮಾತನಾಡಿ, ದೈನಂದಿನ ಚಟುವಟಿಕೆಗಳು ಪ್ರಾರಂಭವಾಗುವುದು ರಸ್ತೆ ಬಳಕೆಯಿಂದ ಅಂತಹ ರಸ್ತೆ ಬಳಕೆಯನ್ನು ನಾವು ಸೂಕ್ಷö್ಮವಾಗಿ ಹರಿಯಬೇಕು, ರಸ್ತೆಯನ್ನು ಅಂಲಬಿಸಿರುವ ನಾವುಗಳು ರಸ್ತೆ ನಿಯಮಗಳನ್ನು ಹಾಗೂ ವಾಹನ ಚಲಾಯಿಸುವ ಪ್ರತಿಯೊಂದು ಹಂತಗಳನ್ನು ನಾವು ಮನಗಾಣಬೇಕು, ಕೇವಲ ಮೋಜು ಮಸ್ತಿಗೆ ಕಾಲೇಜಿಗೆ ಬೈಕ್ ರೈಡ್ ಮಾಡುವುದು ಸರಿಯಲ್ಲ, ನಮ್ಮ ತಂದೆತಾಯಿಗಳ ಉದ್ದೇಶವನ್ನು ಈಡೇರಿಸಬೇಕು, ಆದ್ದರಿಂದ ರಸ್ತೆಗೆ ಬರುವಾಗ ಜಾಗೃತಿಯಿಂದ ಇರಬೇಕು ಎಂದರು.
ಇದೇ ಸಂದರ್ಭದಲ್ಲಿ ಸಂಜೀವಿನಿ ಟ್ರಸ್ಟ್ನ ರಾಜ್ಯ ಪ್ರದಾನ ಕಾರ್ಯದರ್ಶಿ ಸೌಮ್ಯ ಮಂಜುನಾಥ್, ಜಿಲ್ಲಾಧ್ಯಕ್ಷರ ರಂಗಸ್ವಾಮಿ, ಮಾಜಿ ತಾಪಂ.ಸದಸ್ಯ ಸಮರ್ಥರಾಯ್, ದೈಹಿಕ ಶಿಕ್ಷಕರಾದ ವೇಳೂರು, ಗ್ರಾಪಂ.ಅಧ್ಯಕ್ಷ ಕಾಟಮಲಿಂಗಯ್ಯ, ಕೃಷ್ಣ ಕಲ್ಲಹಳ್ಳಿ, ವರುಣ್, ಕಾಟೇಶ್, ಶಿವಣ್ಣ, ಶರತ್, ಸುರೇಶ್, ಪ್ರೇಮ್ ಕುಮಾರ್, ಮಂಜುನಾಥ್, ಟ್ರಸ್ಟ್ನ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.