ನಾಯಕನಹಟ್ಟಿ:: ನಮ್ಮ ಕಾಡುಗೊಲ್ಲ ಸಮುದಾಯವು ಎಸ್ ಟಿ ಮೀಸಲಾತಿಗೆ ಅರ್ಹರಿದ್ದೇವೆ ಎಂದು ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಹೇಳಿದ್ದಾರೆ,
ಪಟ್ಟಣದ ಪ್ರವಾಸ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಬುಡಕಟ್ಟು ಸಂಸ್ಕೃತಿಯ ಆಚರಣೆಯಂತೆ ನಮ್ಮ ಕಾಡುಗೊಲ್ಲ ಸಮುದಾಯದವರು ತಾಲೂಕಿನಲ್ಲಿ ಕುರಿ ಮೇಕೆ ದನ ಸೇರಿದಂತೆ ಸಾಕಣಿಕೆಯಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದು ನಮ್ಮ ಸಮುದಾಯ ಬಹಳ ಹಿಂದುಳಿದ ನಮ್ಮ ಜೀವನ ಹಳ್ಳಿಗಳಿಂದ ಹಳ್ಳಿಗೆ ಅಲೆಮಾರಿಗಳ ತರ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಸರ್ಕಾರ ನಾವು ಎಸ್ ಟಿ ಪರಿಶಿಷ್ಟ ಪಂಗಡ ಸೇರಲು ಅರ್ಹರಿದ್ದೇವೆ ದಿನಾಂಕ 25.01.2023ನೇ ಬುಧವಾರ ಕಾಡುಗೊಲ್ಲರ ಬೃಹತ್ ಪ್ರತಿಭಟನೆಯನ್ನು ಚಳ್ಳಕೆರೆ ನಗರದಲ್ಲಿ ಏರ್ಪಡಿಸಲಾಗಿದೆ ಮಾನ್ಯ ತಹಸೀಲ್ದಾರ್ ಅವರಿಗೆ ಮನವಿ ನೀಡಲಾಗುವುದು ನಮ್ಮ ಕಾಡುಗಲ್ಲ ಸಮುದಾಯದ ಹಟ್ಟಿಗಳಿಗೆ ಭೇಟಿ ನೀಡಿ ಜನರಲ್ಲಿ ಜಾಗೃತಿ ಮೂಡಿಸಿದ್ದೇವೆ ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕೂಡಲೇ ಕಾಡುಗೊಲ್ಲ ಸಮುದಾಯದವರನ್ನು ಪರಿಶಿಷ್ಟ ಪಂಗಡ ಎಸ್ಟಿಗೆ ಸೇರಿಸುವ ಕೆಲಸವಾಗಬೇಕು ಇಲ್ಲದಿದ್ದಲ್ಲಿ ಮುಂದಿನ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಡುಗೊಲ್ಲ ಹಟ್ಟಿಗಳಲ್ಲಿ ಚುನಾವಣೆ ಬಹಿಷ್ಕಾರ ಮಾಡಲಾಗುತ್ತದೆ ಎಂದು ತಾಲೂಕು ಕಾಡುಗೊಲ್ಲರ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದೇ ವೇಳೆ ಡಿಜಿ ಗೋವಿಂದಪ್ಪ ಮಾತನಾಡಿ
ಈ ಸಂದರ್ಭದಲ್ಲಿ ಕಾಡುಗೊಲ್ಲರ ತಾಲೂಕು ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ, ಅಧ್ಯಕ್ಷ ಡಿ ಜಿ ಗೋವಿಂದಪ್ಪ ಜೋಗಿಹಟ್ಟಿ, ಜಿ ಕೆ ಈರಣ್ಣ, ಜಿ ವಿ ಕರಿಯಣ್ಣ, ನಗರಸಭಾ ಸದಸ್ಯ ಈ ವೀರೇಶ್, ಎಚ್ ಬಿ ಬಾಲರಾಜ್ ,ಎಚ್ ಬಿ ತಿಪ್ಪೇಸ್ವಾಮಿ, ಎಸ್ ವೆಂಕಟೇಶ್, ಕೆ ಜೆ ರಾಜು, ಎಚ್ ಮಹಲಿಂಗಪ್ಪ, ಕೃಷ್ಣಮೂರ್ತಿ, ಕೆ ಜಿ ಮಂಜುನಾಥ್ ,ಸಿ ಬಿ ಕೃಷ್ಣಮೂರ್ತಿ, ಪಾತಪ್ಪನ ಗುಡಿ ಸುರೇಶ್ ಸೇರಿದಂತೆ ಮುಂತಾದವರು ಇದ್ದರು