ಚಳ್ಳಕೆರೆ : ನಗರಸಭಾ ಸಭಾಂಗಣದಲ್ಲಿ ಅಧ್ಯಕ್ಷೆ ಸುಮಕ್ಕ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸುಮಾರು 63 ವಿಷಯಗಳನ್ನು ಪ್ರಸ್ತಾಪ ಮಾಡಿದರು, ಅದರಲ್ಲಿ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಕೆಲವು ವಿಷಯಗಳಿಗೆ ಮಾತಿನ ಚಕಮಕಿ ಕೂಡ ನಡೆಯಿತು,
ಇನ್ನೂ ಹೊಯ್ಸಳ ಬ್ಯಾಂಕ್ ಕಟ್ಟಡದ ವಿಷಯ ಚರ್ಚೆಯ ಮುನ್ನೆಲೆಗೆ ಬಂದಾಗ ಸದಸ್ಯರ ಮಧ್ಯೆ ಭಾರಿ ಚರ್ಚೆಗೆ ಗ್ರಸವಾಗಿಯಿತು, ತದ ನಂತರ ನಗರದಲ್ಲಿ ಮಹಾತ್ಮರ ವೃತ್ತಗಳ ನಾಮಕಾರಣಕ್ಕೆ ಸದಸ್ಯರ ಒಕ್ಕೂರಲು ಎದ್ದು ಕಾಣುತ್ತಿತ್ತು ಅದರಂತೆ ಇನ್ನೂ ಈಡೀ ನಗರದಲ್ಲಿ ಪ್ರತಿಯೊಂದು ರಸ್ತೆಗೂ, ಪ್ರತಿಯೊಂದು ವೃತ್ತದಲ್ಲಿ ಮಹಾತ್ಮರ ಹೆಸರುಗಳನ್ನು ನಾಮಕರಣಕ್ಕೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ಮಧ್ಯೆ ತೀವ್ರ ಪೈಪೊಟಿ ನಡೆಯಿತು.
ಅದರಲ್ಲಿ ಮಹಾತ್ಮ ಗಾಂಧಿ ವೃತ್ತದ ಹೆಸರು ಹಾಗೂ ನಾಡು ಕಂಡ ಹೆಸರಾಂತ ಪುನೀತ್ ರಾಜ್‌ಕುಮಾರ್ ವೃತ್ತದ ಹೆಸರುಗಳು ಕಳೆದ ಎರಡು ಸಭೆಯ ಸಮಯವನ್ನು ಕಸಿದುಕೊಂಡಿವೆ ಇನ್ನೂ ಮೂರನೇ ಸಭೆಯಲ್ಲಿ ತಿರ್ಮಾನ ಮಾಡಲಾಗುವುದು ಎಂದು ಅಧ್ಯಕ್ಷರು ಸಮಯ ಕೇಳಿದ್ದಾರೆ.

ಏನಿದು ಪುನಿತ್ ವೃತ್ತದ ಪ್ರಕರಣ :
ನಗರದ ಕೆಇಬಿ ಸಮೀಪದ ರಸ್ತೆಗೆ ಮಹಾತ್ಮ ಗಾಂಧಿ ವೃತ್ತಕ್ಕೆ ನಾಮಕರಣ ಮಾಡುವ ಸಲುವಾಗಿ 2012ರಲ್ಲಿ ಎಂ.ಶಿವಮೂರ್ತಿ ಎಂಬುವವರು ನಗರಸಭೆಗೆ ಅರ್ಜಿ ಸಲ್ಲಿಸಿದರು, ಅಂದಿನ ಆಡಳಿತಾಧಿಕಾರಿಗಳು ಅನುಮೋದಿಸಿ ನಂತರ ಸ್ಥಿರೀಕರಣ ಮಾಡಿದ್ದಾರೆ, ಆದರೆ ಈಗ ಪುನೀತ್ ರಾಜ್‌ಕುಮಾರ್ ವೃತ್ತಕ್ಕೆ ಅಭಿಮಾನಿಗಳು ಅರ್ಜಿ ಸಲ್ಲಿದ್ದಾರೆ, ಆದರೆ ಈಗಾಗಲೇ ಕರಾವಳಿ ಡಾಬಾ ಬಳಿ ಪುನಿತ್ ವೃತ್ತ ಅನುಮೊದಿಸಿದೆ, ಆದ್ದರಿಂದ ಪುನೀತ್ ರಾಜ್ ಕುಮಾರ್ ವೃತ್ತ ನಗರದ ಒಂದೆಡೆ ಮಾತ್ರ ಹೆಸರು ಇಡಲು ಅವಕಾಶ ಇದೆ ಆದರೆ ಮತ್ತೆ ನಾಮಕಾರಣ ಮಾಡಲು ಬರುವುದಿಲ್ಲ ಆದರೆ ಇದ್ದ ಹೆಸರು ತೆಗೆಯಬೇಕು, ಒಂದು ವೇಳೆ ಮಹಾತ್ಮ ಗಾಂಧಿ ಹೆಸರು ತೆಗೆಯಲು ಕಾನೂನು ತೊಡಕು ಈಗೇ ಪುನೀತ್ ಅಭಿಮಾಬಿಗಳ ದುರಾಸೆಗೆ ರಾಜಾಕೀಯ ಎಂಟ್ರಿ ಹಾದಿತೇ.. ಎಂಬುದು ಗೋಪ್ಯವಾದ ಸಂಗತಿ,
ಬಾಕ್ಸ್ ಮಾಡಿ :
ಮಹಾತ್ಮ ಗಾಂಧಿ ವೃತ್ತಕ್ಕೆ ಈಗಾಗಲೇ 2012ರಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಕೆಇಬಿ ಕೌಂಪೌಡ್ ಸಮೀಪದ ರಸ್ತೆಗೆ ಹೆಸರು ಇಡಲು ಅನುಮೋಧಿಸಿದೆ, ಬದಲಾಯಿಸಲು ಕಾನೂನು ತೊಡಕು ಉಂಟಾಗುತ್ತದೆ, ಇನ್ನೂ ಚಿತ್ರದುರ್ಗ ರಸ್ತೆಯ ಕರಾವಳಿ ಡಾಬಾ ಮುಂಬಾದ ರಸ್ತೆಗೆ ಸದಸ್ಯ ಹೊಯ್ಸಳ ಗೊಂವಿದರಾಜು ನೀಡಿರುವ ಮನವಿಯನ್ನು ಪರಿಗಣಿಸಿ ಅನುಮೋದಿಸಿದೆ, ಇನ್ನೂ ಪುನೀತ್ ಅಭಿಮಾನಿಗಳು ಹಾಲಿ ಮಹಾತ್ಮ ಗಾಂಧಿ ವೃತ್ತದ ಸ್ಥಿರೀಕರಣದಲ್ಲಿರುವ ಜಾಗದಲ್ಲಿ ವೃತ್ತ ಸ್ಥಾಪಿಸಲು ನೀಡಿರುವ ಮನವಿಯನ್ನು ಸಭೆಗೆ ತಂದಿದೆ..–ಸಿ.ಚAದ್ರಪ್ಪ, ಪೌರಾಯುಕ್ತರು ಚಳ್ಳಕೆರೆ

ಇದೇ ಸಭೆಯಲ್ಲಿ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರನಾಯಕ, ಸದಸ್ಯ ರಮೇಶ್ ಗೌಡ, ಕೆ.ವೀರಭದ್ರಯ್ಯ, ಮಲ್ಲಿಕಾರ್ಜುನಾ, ಕವಿತಾ, ಸುಮಾ, ಜೈತುನ್ ಬಿ, ಚಳ್ಳಕೆರೆಪ್ಪ, ಜಯಣ್ಣ, ವಿ.ವೈ ಪ್ರಮೋದ್, ಶ್ರೀನಿವಾಸ್, ಪ್ರಕಾಶ್, ನಿರ್ಮಲಾ, ಇತರ ಸದಸ್ಯರು ಪೌರಾಯುಕ್ತ ಸಿ.ಚಂದ್ರಪ್ಪ, ಕಚೇರಿ ಅಧೀಕ್ಷ ಲಿಂಗರಾಜ್, ಇಂಜಿನಿಯಾರ್ ಲೋಕೇಶ್ ಇತರ ಸಿಬ್ಬಂದಿ ಇದ್ದರು.

About The Author

Namma Challakere Local News
error: Content is protected !!