ಚಳ್ಳಕೆರೆ : ನಗರದ ಸ್ವಚ್ಚತೆಗೆ ಹಗಲು ಇರಳು ಎನ್ನದೆ ದುಡಿಯುವ ಪೌರಕಾರ್ಮಿಕರ ಸಂಕಷ್ಟಕ್ಕೆ ಅಧಿಕಾರಿಗಳು ಕ್ರಮವಹಿಸಬೇಕು ಆದರೆ ಚಳ್ಳಕೆರೆ ನಗರಸಭೆಯಲ್ಲಿ ಬೇರೆಯಾಗಿದೆ,
ಹೌದು ಕಳೆದ ವಾರ ರಾಜ್ಯಾಧ್ಯಾಂತ ಸರಕಾರ ನಗರ ಪಟ್ಟಣಗಳಲ್ಲಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರ ಖಾಯಂಗೆ ನೌಕರಿಗೆ ರಾಜ್ಯದ ಎಲ್ಲಾ ಜಿಲ್ಲಾ ತಾಲೂಕು ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ನೇಮಕಾತಿ ಹಾಗಿದೆ, ಆದರೆ ಚಳ್ಳಕೆರೆ ನಗರಸಭೆ ಮಾತ್ರ ಕೈ ಬಿಟ್ಟಿದೆ ಇದಕ್ಕೆ ಕಾರಣ ನಮ್ಮ ನಗರಸಭೆ ಅಧಿಕಾರಿಗಳ ವೈಪಲ್ಯವೇ ಎಂಬುದು ತೋಚದಾಗಿದೆ ಎಂದು ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ನ್ಯಾಯ ಸಮ್ಮತವಾದ ಕಾನೂನು ಪ್ರಕಾರ ತಮ್ಮ ಹಕ್ಕು ಚಲಾಯಿಸಿದರೆ ಹೊರ ಗುತ್ತಿದೆ ಆಧಾರದ ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕುವ ಪರಿಪಾಟ ನಗರಸಭೆಯಲ್ಲಿ ಇದೆ, ಆದ್ದರಿಂದ ಈ ಕೂಡಲೇ ಕಾನೂನಾತ್ಮಕ ನೇರ ನೇಮಕಾತಿಯಿಂದ ಖಾಯಂ ನೌಕರಿಗೆ ನಮ್ಮನ್ನು ಅನುಮೋದಿಸಲು ಸರಕಾರಕ್ಕೆ ಪತ್ರ ರವಾನೆ ಮಾಡಬೇಕು ಎಂದು ಜ.16ರಂದು ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಪೌರಕಾರ್ಮಿಕರು ಒಟ್ಟಾಗಿ ಬಂದು ಮನವಿ ಸಲ್ಲಿಸಿದರು.
ಚಳ್ಳಕೆರೆಯ ನಗರಸಭೆಯ ಸ್ಥಳೀಯ ಸಂಸ್ಥೆಯ ಹೊರಗುತ್ತಿಗೆ ಪೌರಕಾರ್ಮಿಕರು/ವಾಹನಚಾಲಕರು/ಲೋಡರ್ಸ್/ಕ್ಲೀನರ್ಸ್ ಮತ್ತು ಇನ್ನು ಇತರೆ ಸ್ವಚ್ಛತಾ ಕಾರ್ಮಿಕರು ಚಳ್ಳಕೆರೆ ನಗರಸಭೆಯಲ್ಲಿರುವ ಇನ್ನೂ ಇತರೆ ಸ್ವಚ್ಛತಾ ಕಾರ್ಮಿಕರ ಹುದ್ದೆಯ ಮಾಹಿತಿಯನ್ನು ಸರ್ಕಾರಕ್ಕೆ ಈ ಕೂಡಲೆ ನೀಡಬೇಕೆಂದು ಈಗಾಗಲೆ ಹೊರಡಿಸಿರುವ ಅಧಿಸೂಚನೆಯಲ್ಲಿ ನಮ್ಮ ಚಳ್ಳಕೆರೆ ನಗರಸಭೆಯ ಹುದ್ದೆಗಳ ವಿವರ ನಮೂದಿಸುವಂತೆ ಕ್ರಮ ವಹಿಸುವುದು ವಿಳಂಬ ಅಥವಾ ತಾತ್ಸಾರ ಮಾಡಿದ್ದಲ್ಲಿ ಕರ್ತವ್ಯ ಲೋಪ ಆರೋಪ ಮಾಡಿ ನ್ಯಾಯಾಲಯದಲ್ಲಿ ಮೊಕದ್ದಮೆ ಮಾಡಲಾಗುವುದು ಎಚ್ಚರಿಕೆ ನೀಡಿದ್ದಾರೆ.
ಸಭೆಯಲ್ಲಿ ಧ್ವನಿ ಎತ್ತದ ಸದಸ್ಯರು :
ಇನ್ನೂ ವಾರ್ಡ್ ಸಮಸ್ಯೆ ಬಗ್ಗೆ ಮಾತ್ರ ಟೆಬಲ್ ಗುತ್ತಿ ಧ್ವನಿ ಎತ್ತುವ ಸದಸ್ಯರು ಇವರ ನ್ಯಾಯಕ್ಕೆ ಯಾರೂ ಕೂಡ ಸಮ್ಮತಿ ನೀಡುವುದಿಲ್ಲ ಅಧಿಕಾರಿಗಳ ಉಡಾಫೆ ಮೌಖಿಕ ಉತ್ತರ ಪಡೆದು ಮೌನವಹಿಸುತ್ತಾರೆ, ಮುಂದಿನ ವಿಷಯ ಓದಿ ಎನ್ನುತ್ತಾರೆ, ನಗರ ಸ್ವಚ್ಚತೆಗೆ, ಚರಂಡಿ ಸ್ವಚ್ಚತೆಗೆ ನಾವು ಬೇಕು ಆದರೆ ನಮ್ಮ ಕಷ್ಟಗಳನ್ನು ಸದಸ್ಯರು ಕೇಳದೆ ಇರುವುದು ವಿಪರ್ಯಾಸ ಎಂದು ಹೆಸರು ಹೇಳದ ಪೌರಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಹಣ ವಸೂಲಿ :
ಇನ್ನೂ ಪ್ರತಿ ವರ್ಷ ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ ಪೌರಕಾರ್ಮಿಕರು ಮರು ನೇಮಕಾತಿ ಮಾಡುಕೊಳ್ಳುವ ಸಂಧರ್ಭದಲ್ಲಿ ಗುತ್ತಿಗೆದಾರರು ತಮ್ಮ ಕೂಲಿ ಹಣದಲ್ಲಿ ವಂತಿಕೆ ಕೇಳುವುದು ಬಹಿರಂಗವಾಗಿದೆ, ಒಂದು ವೇಳೆ ಈ ಹಣ ಕೊಡದಿದ್ದಾರೆ, ಮತ್ತೆ ಕೆಲಸ ಬಿಡಿಸುವ ಅಸ್ತç ಬಳಕೆ ಮಾಡುತ್ತಾರೆ ಇನ್ನೂ ಪ್ರತಿ ತಿಂಗಳು ಕೂಡ ಸರಿಯಾದ ಮೊತ್ತ ಪಾವತಿ ಮಾಡದೆ ನಿರ್ಲಕ್ಷö್ಯ ವಹಿಸುತ್ತಾರೆ ಇದರಿಂದ ಮನನೊಂದ ಪೌರಕಾರ್ಮಿಕರು ಹೊರಗುತ್ತಿಗೆ ತೆಗೆದು ಖಾಯಂ ಪೌರಕಾರ್ಮಿಕರನ್ನಾಗಿ ಮಾಡಿ ಎಂದು ಮನವಿ ನೀಡುತ್ತಾ ಬಂದಿದ್ದಾರೆ.

ಬಾಕ್ಸ್ ಮಾಡಿ :
ನಗರದಲ್ಲಿ ನಗರಸಭೆ ವ್ಯಾಪ್ತಿಯಲ್ಲಿ 90 ಜನ ಪೌರಕಾರ್ಮಿಕರು ,ಸಹಾಯಕರು, ಲೋರ‍್ಸ್, ಕ್ಲಿರ‍್ಸ್ ಅವಶ್ಯಕ್ತೆ ಇದ್ದು ಹಾಲಿ 19 ಜನ ಖಾರ್ಯ, 24 ಜನ ನೇರ ವಾವತಿ, 37 ಜನ ಹೊರಗುತ್ತಿಗೆ, ಅಡಿಯಲ್ಲಿ ಒಟ್ಟು 80 ಜನ ಕಾರ್ಯನಿರ್ವಹಿಸುತ್ತಿದ್ದಾರೆ, ಇದರಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಹಲವು ಪೌರಕಾರ್ಮಿಕರು ಕೋರ್ಟ್ ಮೊರೆ ಹೊಗಿದ್ದಾರೆ ಆದ್ದರಿಂದ ಸರಕಾರ ಯಾವುದೇ ನಗರಸಭೆಯಲ್ಲಿ ಪ್ರಕರಣ ದಾವೆ ಹುಡಿದ್ದಾರೆ, ಅಂತಹ ನಗರಸಭೆಗಳನ್ನು ಪರಿಗಣಿಸುವುದಿಲ್ಲ ಆದ್ದರಿಂದ ನ್ಯಾಯಾಲಯದಲ್ಲಿ ದಾವೆ ಹೂಡಿದ ಪ್ರಕಣಗಳನ್ನು ಸ್ಥೀರಿಕರಣಗೊಳಿಸಬೇಕು ಇಲ್ಲವಾದರೆ ಹಿಂಪಡೆದು ಎಲ್ಲಾರೂ ಖಾಯಂ ನೌಕರಿಗೆ ಅರ್ಹತೆ ಪಡೆಯಲು ಸಹಕರಿಸಬೇಕು–ಸಿ.ಚಂದ್ರಪ್ಪ, ಪೌರಾಯುಕ್ತ ಚಳ್ಳಕೆರೆ

About The Author

Namma Challakere Local News
error: Content is protected !!