ಚಳ್ಳಕೆರೆ : ಶ್ರೀ ಸಿದ್ದಾರಮೇಶ್ವರ ಶರಣರು ಕಾಯಕ ಯೋಗಿ ಅವರು ಇಂದಿನ ಆಧುನಿಕ ಜಗತ್ತಿಗೆ ಪ್ರೇರಣೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ ಶ್ರೀ ಸಿದ್ದರಾಮೇಶ್ವರ ಜಯಂತಿಯಲ್ಲಿ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಇಂದಿನ ಆಧುನಿಕ ಜಗತ್ತಿನಲ್ಲಿ ತುಂಬಾ ಕೆಟ್ಟ ಪರಿಸ್ಥಿತಿ ಕಾಣಬಹುದು, ಆದರೂ 2018 ರಲ್ಲಿ ಇದ್ದ ಕಾಂಗ್ರೇಸ್ ಸರಕಾರ ಪ್ರತಿಯೊಂದು ಸಮುದಾಯದ ಶರಣರನ್ನು, ಮಹಾತ್ಮರನ್ನು ಗುರುತಿಸುವ ಮಹತ್ವದ ಕಾರ್ಯ ಮಾಡಿದೆ, ಕಾಯಕ ಯೋಗಿ ಸಿದ್ದರಾಮೇಶ್ವರ ಹಾದಿಯಲ್ಲಿ ಸಾಗೋಣ, ಅದರಂತೆ ಚಳ್ಳಕೆರೆ ಕ್ಷೇತ್ರದಲ್ಲಿ ಸುಮಾರು 350 ಕ್ಕೂ ಹೆಚ್ಚು ಜಾತಿವಾರು ಸಮುದಾಯ ಭವನಗಳನ್ನು ಕಟ್ಟಿಸಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದೆವೆ ಅದರಂತೆ ನನ್ನ ಮುಂದಿನ ಪರಿಶ್ರಮ ಇದ್ದರೆ, ಮುಂದಿನ ವರ್ಷ ಶಾಸಕನಾಗಿ ಸಿದ್ದರಾಮೇಶ್ವರ ಜಯಂತಿ ಪಾಲ್ಗೊಳ್ಳುವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶಿಲ್ದಾರ್ ಎನ್ ರಘುಮೂರ್ತಿ, ಸುಮಾರು12ನೇ ಶತಮಾನದ ವಚನಕಾರರ ಸಾಲಿನಲ್ಲಿ ಬರುವ ಶ್ರೀ ಸಿದ್ದರಾಮರವರು ಕೆರೆ ಕಟ್ಟೆಗೆ ನೀರಾವರಿಗೆ ಹೆಚ್ಚಿನ ಮಹತ್ವ ನೀಡಿದರು, ಅದೇ ರೀತಿಯಲ್ಲಿ ಅವರು ಈಡೀ ಜಗತ್ತಿನಲ್ಲಿ ಸುಮಾರು ಆರು ಸಾವಿರ ವಚನಗಳನ್ನು ಹಾಡಿದ್ದರು ಎಂದು ನೆನೆದರು.
ಸಮಾಜದ ಅನಿಲ್ ಕುಮಾರ್ ಮಾತನಾಡಿ, 1152 ಜನಿಸಿದ್ದರು ಎಂದು ಪ್ರತಿತಿ ಇದೆ, ಅಂದಿನ ಕಾಲದಲ್ಲಿ ಈಡೀ ಜಗತ್ತಿಗೆ ಜ್ಞಾನದ ಊರಣದ ಬುತ್ತಿ ನೀಡಿದ ಮಹಾನ್ ಚೇತನ ಇವರಾಗಿದ್ದರು, ಇನ್ನೂ ಇವರು ಹುಟ್ಟಿನಿಂದ ಸುಮಾರು ಆರು ವರ್ಷಗಳ ಕಾಲ ಮಾತನಾಡಿರಲಿಲ್ಲ ಎಂದು ಪುರಾಣಗುಳು ಹೇಳುತ್ತಿವೆ. ವಚನಕಾರರ ಸಾಲಿನಲ್ಲಿ ಬರುವ ಇವರು ಆರು ಸಾವಿರಕ್ಕೂ ಹೆಚ್ಚಿನ ವಚನಗಳನ್ನು ಬರೆದಿದ್ದಾರೆ ಎಂದರು.
ರಾಜ್ಯ ರೈತ ಸಂಘದ ಅಖಂಡ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಮಾತನಾಡಿ, ಈ ದೇಶಕ್ಕೆ ಮೊಟ್ಟಮೊದಲ ಹೋರಾಟದ ಹಾದಿಯನ್ನು ಕೊಟ್ಟ ಬಸವಣ್ಣನವರ ವ್ಯಕ್ತಿತ್ವದಲ್ಲಿ ಸಿದ್ದರಾಮೇಶ್ವರ ಒಬ್ಬರು,ಬಸವಣ್ಣ ಮತ ಸ್ಥಾಪಕರು ಅಲ್ಲ, ಇಂದಿನ ಪರಿಸ್ಥಿತಿಯಲ್ಲಿ ಸ್ವಾಮೀಜಿಗಳನ್ನು ಜಾತಿಗೆ ಸೀಮಿತಿಗೊಳಿಸಿದ್ದಾರೆ, ಆದ್ದರಿಂದ ಸಮಾಜ ಸುಧಾರಕರನ್ನು ಜಾತಿಗೆ ಸೀಮಿತ ಗೊಳಿಸಬೇಡಿ, ಅಂದಿನ ಕಾಲದಿಂದ ಇಂದಿನವರೆಗೂ ಜಾತಿ ವ್ಯವಸ್ಥೆಗೆ ಮೂಲ ಮಂತ್ರ ಮಕ್ಕಳಿಗೆ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಪ್ರಗತಿ ಕಾಣಲು ಸಾಧ್ಯ ಎಂದರು.
ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಮಾತನಾಡಿ, ಕಲ್ಲು ಕುಟ್ಟುವ ನಮ್ಮಕುಲ ಕಸುಬಿನ ಜೊತೆಗೆ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ನಮ್ಮ ಮಕ್ಕಳ ಭವಿಷ್ಯವನ್ನು ಕೊಡಿಸೊಣ ಎಂದರು.
ಸಮುದಾಯದ ಮುಖಂಡ ವೆಂಕಟಪ್ಪ, ಮಾತನಾಡಿದರು,
ಈದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ಮಂಜುಳಾ, ರೈತ ಮುಖಂಡ ಕೆ.ಪಿ.ಭೂತಯ್ಯ, ಸೊಮಗುದ್ದು ರಂಗಸ್ವಾಮಿ, ಮಾಜಿ ತಾಪಂ ಸದಸ್ಯ ಆಂಜನೇಯ, ಸಾಮಾಜಿಕ ಕಾರ್ಯಕರ್ತ ಸೈಯದ್, ವೆಂಕಟಪ್ಪ, ಜಗದೀಶ್ , ತಿಪ್ಪೇಸ್ವಾಮಿ, ಜಯಣ್ಣ, ಕರಿಕೆರೆ ರಂಗಸ್ವಾಮಿ, ಇತರರು ಇದ್ದರು.