ಚಳ್ಳಕೆರೆ : ಕಳೆದ ವಾರ ಚಳ್ಳಕೆರೆ ತಾಲೂಕಿನ ಚೆನ್ನಮ್ಮನಾಗತಿಹಳ್ಳಿ ವ್ಯಾಪ್ತಿಯ ವಸಲು ದಿಬ್ಬದ ಬಳಿ ಅದ್ದೂರಿಯಾಗಿ ಜರುಗಿದ ಕ್ಯಾತಪ್ಪನ ಪರೀಶಿಗೆ ತನುಮನ ಧನ ಅರ್ಪಿಸಿದ ಬಿಜೆಪಿ ಮುಖಂಡ ಸೂರನಹಳ್ಳಿ ಶ್ರೀನಿವಾಸ್‌ಗೆ ಗೊಲ್ಲ ಸಮುದಾಯದಿಂದ ಅಭಿನಂದನೆ
ಚನ್ನಮ್ಮನಾಗತಿಹಳ್ಳಿ ಗೊಲ್ಲರ ಆರಾಧ್ಯದೈವ ಕ್ಯಾತೆ ದೇವರ ಒಕ್ಕಲಿನ ಎಲ್ಲಾ ಯಜಮಾನರು, ಪೂಜಾರಪ್ಪ, ಕಾಡು ಗೊಲ್ಲರ ಮುಖಂಡರು, ಜನಾಂಗದ ಎಲ್ಲಾ ಗ್ರಾಮಸ್ಥರು ಒಟ್ಟಿಗೆ ಸೇರಿ ಚಳ್ಳಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ದಂಪತಿಗೆ ತುಂಬು ಉಡುಗೊರೆ ಕೊಡುವುದರ ಮೂಲಕ ಅತ್ಯಂತ ಆತ್ಮೀಯವಾಗಿ ಸತ್ಕರಿಸಿ ಪ್ರಸಾದವನ್ನು ನೀಡಿ ಗೌರವಿಸಿದರು…
ಈ ಸಂದರ್ಭದಲ್ಲಿ ಕ್ಯಾತೆ ದೇವರ ಗುಡಿಕಟ್ಟಿನ ಎಲ್ಲಾ ಗೌಡರುಗಳು, ಪೂಜಾರಪ್ಪ, ಯಜಮಾನರುಗಳು, ಮತ್ತು ಕಾಡುಗೊಲ್ಲರ ಮುಖಂಡರುಗಳು, ಈ ವಿಶೇಷ ಸಂದರ್ಭದಕ್ಕೆ ಸಾಕ್ಷಿಯಾಗಿದ್ದರು…