ಚಳ್ಳಕೆರೆ : ಸ್ವಾತಂತ್ರ ಬಂದು 73 ವರ್ಷಗಳೇ ಕಳೆದರು ಸಹ ಜನಸಾಮಾನ್ಯರಿಗೆ ಕನಿಷ್ಟ ಪಕ್ಷ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಮ್ಮನ್ನಾಳುವ ಸರ್ಕಾರಗಳು ವಿಫಲವಾಗಿವೆ ಎಂದರೆ ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಉಳ್ಳವರಿಗೆ ಸರ್ಕಾರದ ಸೌಲಭ್ಯಗಳು ಮನೆತನಕ ಹುಡುಕಿಕೊಂಡು ಬಂದರೆ ಇಲ್ಲದವರಿಗೆ ಊರಿಂದಾಚೆ ಇರುತ್ತವೆ ಎನ್ನುವ ಹಳ್ಳಿಗರ ಮಾತಿನಂತೆ ” ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು” ಎಂಬ ಘಂಟಘೋಷಣೆಗಳು ಕೇಳುವುದಕಷ್ಟೇ ಸೀಮಿತವಾಗಿವೆ. ” ಗುಡಿಸಲು ಮುಕ್ತ ” ಗ್ರಾಮವನ್ನಾಗಿಸಲು ಪಣ ತೊಟ್ಟಂತಹ ಸರ್ಕಾರದ ಬೊಬ್ಬೆ ಹೊಡೆಯುವ ಭಾಷಣಗಳು ಜನಪ್ರತಿನಿಧಿಗಳ ಆಶ್ವಾಸನೆಗಳು ನಾವು ನೀವೆಲ್ಲರೂ ಕೇಳಿದ್ದೇವೆ.
ಹೌದು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಜಾನಂಗವನ್ನು ಕಾಣಬಹುದು
ಪಟ್ಟಣದ 5ನೇ ವಾರ್ಡಿನ ಆಂಜನೇಯ ಬಡಾವಣೆಯಲ್ಲಿ ಅಲೆಮಾರಿ – ಅರೆಅಲೆಮಾರಿ ಜನಾಂಗದ ಸುಮಾರು 40 ಮನೆಗಳಿವೆ. ಈ ಮನೆಗಳಲ್ಲಿ ಒಂದು ಮನೆಗೆ ಸರಿ ಸುಮಾರು ಐದರಿಂದ ಆರು ಜನರು ಮಕ್ಕಳು ಮರಿಗಳೊಂದಿಗೆ ವಾಸ ಮಾಡುತ್ತಿದ್ದಾರೆ. ಇಲ್ಲಿನ ರಹವಾಸಿಗಳಿಗೆ ರಸ್ತೆ ವಿದ್ಯುತ್ ಚರಂಡಿ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳೇ ಇಲ್ಲವಾಗಿದ್ದು ಇವರೆಲ್ಲ ಮೂಲಭೂತ ಸೌಕರ್ಯಗಳಿಂದ ಸಂಪೂರ್ಣ ವಂಚಿತರಾಗಿದ್ದಾರೆ ಎನ್ನಲಾಗಿದೆ.

ಹಲೆಮಾರಿ ಅರೆಹಲೆಮಾರಿ ಜನಾಂಗದವರು ಈ ಹಿಂದೆ ನಾಡಕಚೇರಿ ಪಟ್ಟಣ ಪಂಚಾಯಿತಿ ತಾಲೂಕು ಕಚೇರಿ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಎಷ್ಟೋ ಬಾರಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಮನವಿ ನೀಡಿದ್ದರೂ ಕೂಡ ಅವರ ಮನವಿಗೆ ಕಿಂಚಿತ್ತು ಬೆಲೆ ಕೊಟ್ಟಿಲ್ಲ. ನಮ್ಮ ಈ ಎರಿಯಾಗೆ ಯಾವ ಜನಪ್ರತಿನಿಧಿಗಳಾಗಲಿ ಅಧಿಕಾರಿಗಳಾಗಲಿ ತಿರುಗಿ ನೋಡಿಲ್ಲ, ಕ್ಯಾರೇ ಎಂದಿಲ್ಲ ಎನ್ನುತ್ತಾರೆ ಇಲ್ಲಿನ ಜನರು.
ಬಾಕ್ಸ್ ಮಾಡಿ :
ಸಾರ್ ನೀವೆ ನೋಡಿ ನಮಗೆ ಕರಂಟಿಲ್ಲ. ಓಡಾಟಕ್ಕೆ ರಸ್ತೆ ಇಲ್ಲ. ಪ್ರಾಣಿಗಳಿಗಿಂತ ಕನಿಷ್ಠ ಜೀವನ ನಮ್ಮದಾಗಿದೆ ಎಂದು ಇಲ್ಲಿನ ಮಹಿಳೆಯರು ಮಾಧ್ಯಮದ ಮುಂದೆ ತಮ್ಮ ನೋವು ದು:ಖ ದುಮ್ಮಾನವನ್ನ ತೋಡಿಕೊಂಡರು.

ಇದೆ ವೇಳೆ ವಿಮುಕ್ತಿ ಸಂಯೋಜಕ ಟಿ. ಮರಿಪಾಲಯ್ಯ , ಪ್ರಗತಿ ಸಮೃದ್ಧಿ ಸಹಕಾರ ಬ್ಯಾಂಕಿನ ವ್ಯವಸ್ಥಾಪಕ ಜಾಗನೂರಹಟ್ಟಿ ಎಂ.ಟಿ. ಮಂಜುನಾಥ್, ವಾರ್ಡಿನ ನಿವಾಸಿಗಳಾದ ರಾಮಣ್ಣ, ಮಾರಪ್ಪ, ದಾಸರ ತಿಪ್ಪೇಶ್, ವೆಂಕಟಮ್ಮ, ಗುಂಡಮ್ಮ, ಅಂಜಿನಿ, ಅಖಿಲೇಶ್, ರತ್ನಮ್ಮ, ರೇಣುಕಮ್ಮ, ಲಕ್ಷ್ಮಿ ದೇವಿ, ಲಕ್ಷ್ಮಣ, ಯರ್ರಿ ಸ್ವಾಮಿ, ಮಂಜುಳಾ, ಇತರರು ಇಲ್ಲಿನ ನರಕಯಾತನೆ ಹೇಗೆ ಅನುಭವಿಸುವುದ್ದಾರೆ ಎನ್ನುವುದನ್ನ ಪತ್ರಿಕೆ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟರು.

About The Author

Namma Challakere Local News
error: Content is protected !!