ಚಳ್ಳಕೆರೆ : ಕಳೆದ ಬಾರಿ ಕೊವಿಡ್ ಕಾರಣಾಂತರಗಳಿAದ ಗಣ ರಾಜ್ಯೋತ್ಸವನ್ನು ಸರಳವಾಗಿ ಆಚರಿಸಿದ್ದೆವೆ ಇನ್ನೂ ಈ ಬಾರಿ ಕೊವಿಡ್ ನಮ್ಮನ್ನು ಬಿಟ್ಟು ಸಂಪೂರ್ಣವಾಗಿ ಹೊಗಿಲ್ಲ ಆದ್ದರಿಂದ ಗಣ ರಾಜ್ಯೋತ್ಸವನ್ನು ಸರಳವಾಗಿ ಅರ್ಥಗರ್ಭಿತವಾಗಿ ಗೌರವ ಪೂರ್ವಕವಾಗಿ ಆಚರಿಸೊಣ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಗಣರಾಜ್ಯೋತ್ಸವ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು, ನಾಡಿನ ಗಣ್ಯರಿಗೆ ಹಾಗೂ ಸಂವಿಧಾನ ಅಂಗಿಕರಿಸಿದ ದಿನವನ್ನು ನಾವು ಗೌರವ ಪೂರ್ವಕವಾಗಿ ಆಚರಿಸಬೇಕು, ಸ್ಥಳೀಯ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ಜ.26ರಂದು ನಡೆಯುವ ಗಣರಾಜ್ಯೋತ್ಸ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ವಿವಿಧ ವಲಯಗಳ ಗಣ್ಯರಿಗೆ ಸನ್ಮಾನ ಮಾಡಲಾಗುವುದು, ಇನ್ನೂ ಕಾರ್ಯಕ್ರಮದಲ್ಲಿ ಕಳೆದ ಬಾರಿ ಇದ್ದಂತಹ ಕಾರ್ಯಕ್ರಮಗಳಲ್ಲಿ ಹೆಚ್ಚಿನದಾಗಿ ಅರ್ಥವತ್ತಾಗಿ ಇರುವ ಕಾರ್ಯಕ್ರಮಗಳನ್ನು ನೀಡಲು ಶಿಕ್ಷಣ ಇಲಾಖೆಗೆ ಸಹಕಾರ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಭಾಗವಹಿಸುವ ಮೂಲಕ ಯಶಶ್ವಿಗೊಳಿಸಬೇಕು ಎಂದರು.
ಈದೇ ಸಂಧರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ದಯಾನಂದ್, ಎಸ್ಟಿ ಇಲಾಖೆ ಅಧಿಕಾರಿ ಸುಧಾಗೋಗಾವಿ, ಬಿಸಿಎಂ ಅಧಿಕಾರಿ ದಿವಾಕರ್, ತೊಟಗಾರಿಕೆ ಇಲಾಖೆ ಅಧಿಕಾರಿ ವಿರುಪಾಕ್ಷಪ್ಪ, ಪಶು ಇಲಾಕೆ ಡಾ.ರೇವಣ್ಣ, ನಗರಸಭೆ ಅಧಿಕಾರಿ ಲಿಂಗರಾಜ್, ಪರಿಸರ ಇಂಜಿನಿಯಾರ್ ನರೇಂದ್ರಬಾಬು, ಸಿಡಿಪಿಓ ಕೃಷ್ಣ, ಅಬಕಾರಿ ತಿಪ್ಪೆಸ್ವಾಮಿ, ರೈತ ಸಂಘದ ರಾಜ್ಯಾಧ್ಯಕ್ಷ ಸೊಮಗುದ್ದು ರಂಗಸ್ವಾಮಿ, ಇತರ ಸಾರ್ವಜನಿಕರು ಭಾಗಹಿಸಿದ್ದರು.