ಚಳ್ಳಕೆರೆ : ಅಂಬಿಗ ಚೌಡಯ್ಯ ನವರ ಅನುಭವ ಮಂಟಪಕ್ಕೆ ದಾರೆಯರಿದ ಅವರ ಜನ್ಮ ದಿನವನ್ನು ಜ.21ರಂದ ಸರಳವಾಗಿ ಜಯಂತಿ ಆಚರಿಸಲು ತೀರ್ಮಾನ ಮಾಡಲಾಗಿದೆ ಎಂದು ತಹಶಿಲ್ದಾರ್ ಎನ್.ರಘುಮೂರ್ತಿ ಹೇಳಿದ್ದಾರೆ.
ಅವರು ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ ಜಯಂತಿ ಪೂರ್ವಭಾವಿ ಸಭೆಯಲ್ಲಿ ಅಧ್ಯಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ಸಮುದಾಯದ ಪೂರ್ವಿಕರನ್ನು ನೆನೆಯುವ ಸುದೈವ ನಮ್ಮ ಮೇಲೆ ಇದೆ ಆದ್ದರಿಂದ ಜಗತ್ತಿನಲ್ಲಿ ಎಲ್ಲಾ ಸಮುದಾಯಗಳಲ್ಲಿ ಕೂಡ ಅವಿರತ ಸಾಧನೆ ಮಾಡಿದ ಹಲವರು ಇದ್ದಾರೆ ಅದ್ದರಿಂದ ಅವರ ಜಯಂತಿಗಳನ್ನು ಎಲ್ಲಾ ಸಮುದಾಯಗಳು ಸೇರಿ ಅರ್ಥವತ್ತಾಗಿ ಮಾಡಬೇಕು ಎಂದರು.
ಈದೇ ಸಂಧರ್ಭದಲ್ಲಿ ಸಮುದಾಯದ ನಾಗರಾಜ್ ಹಾಗೂ ಎಲ್ಲಾ ಮುಖಂಡರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೋಂಡಿದ್ದರು.