ಚಳ್ಳಕೆರೆ : ರಾಜ್ಯ ಸರಕಾರ ಕಾರ್ಮಿಕರ ಹಿತ ದೃಷ್ಠಿಯಿಂದ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮೀಕರಿಗೆ ನಗರದತ್ತ ದಾವಿಸಿ ಜೀವನ ನಿರ್ವಾಣೆಗೆ ಅನುಕೂಲವಾಗಲು ಉಚಿತ ಸಾರಿಗೆ ಬಸ್ ಪಾಸ್ ನೀಡಿರುವುದು ಸಂತಸ ತಂದಿದೆ ಎಂದು ಕಾರ್ಮಿಕ ಅಧಿಕಾರಿ ಕುಸುಮ ಹೇಳಿದ್ದಾರೆ.
ಅವರು ನಗರದಲ್ಲಿ ಕಟ್ಟಡ ಕಾರ್ಮಿಕರಿಗೆ ಕಳೆದ ವರ್ಷ ನೊಂದಾಯಿತ ಫಲಾನುಭವಿಗಳಿಗೆ ಉಚಿತ ಬಸ್‌ಪಾಸ್ ವಿತರಣೆ ಮಾಡಿ ಮಾತನಾಡಿದರು, ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿತ ಎಲ್ಲಾ ವರ್ಗದ ಕಾರ್ಮಿಕರು ಆನ್‌ಲೈನ್‌ನಲ್ಲಿ ಅರ್ಜಿ ಪಡೆದು ಮೂಲ ದಾಖಲಾತಿಗಳನ್ನು ನೀಡಿ ಬಸ್ ಪಾಸ್ ಪಡೆಯಬಹುದು ಅದರಂತೆ ಕಳೆವ ವರ್ಷ ಸುಮಾರು ಕಾರ್ಮಿಕರು ಅರ್ಜಿ ನೀಡಿದ ಎಲ್ಲಾ ಫಲಾನುಭವಿಗಳಿಗೆ ಇಂದು ಉಚಿತ ಬಸ್ ಪಾಸ್ ನೀಡಿಲಾಗಿದೆ ಎಂದರು.
ಇದೇ ಸಂಧರ್ಭದಲ್ಲಿ ಕರ್ನಾಟಕ ಒನ್ ವ್ಯವಸ್ಥಾಪಕರಾದ ಪುರುಷೋತ್ತಮ ಜಿ ಸಿ, ಎಸ್ ಎಲ್ ವಿ ಸಂಸ್ಥೆಯ ಅಧ್ಯಕ್ಷರಾದ ಸರಸ್ವತಿ ಕೆ, ಚಿರಂಜಿವಿ, ರಮೇಶ್, ಬಸವರಾಜ್, ಉಮೇಶ್, ಇತರರು ಪಾಲ್ಗೋಂಡಿದ್ದರು.