ಕಾಡುಗೊಲ್ಲರು ಒಗ್ಗಟ್ಟಾಗದಿದ್ದರೆ ಮೀಸಲಾತಿ ದೊರೆಯುವುದಿಲ್ಲ ;ಟಿ ರವಿಕುಮಾರ್
ಚಳ್ಳಕೆರೆ: ಕಾಡುಗೊಲ್ಲ ಸಮುದಾಯವು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದೆ ಹೀಗಾಗಿ ಎಸ್ ಟಿ ಮೀಸಲಾತಿ ಪಡೆಯುವುದು ನಮ್ಮ ಧ್ಯೇಯವಾಗಬೇಕು ಎಂದು ತಾಲೂಕು ಕಾಡುಗೊಲ್ಲ ಸಂಘದ ಅಧ್ಯಕ್ಷ ಟಿ ರವಿಕುಮಾರ್ ಹೇಳಿದರು
ನಗರದ ಗೋಕುಲ ಹಾಸ್ಟೆಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾಡುಗೊಲ್ಲ ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಗೊಲ್ಲ ಸಮುದಾಯವು ಆರ್ಥಿಕವಾಗಿ ಪ್ರಬಲವಾಗಿದೆ ಎಂದು ಸರ್ಕಾರದ ಮಟ್ಟದಲ್ಲಿ ಬಿಂಬಿಸಲಾಗುತ್ತಿದೆ ಇದರಿಂದ ನಮ್ಮ ಕಾಡುಗೊಲ್ಲ ಸಮುದಾಯವು ಮೀಸಲಾತಿಯಿಂದ ವಂಚಿತವಾಗುತ್ತಿದೆ ಉತ್ತರ ಪ್ರದೇಶದ ಯಾದವ ಸಮುದಾಯವನ್ನು ಗೊಲ್ಲ ಸಮುದಾಯವೆಂದುಕೊAಡು ತಪ್ಪು ಭಾವಿಸಿ ಮೀಸಲಾತಿಯಿಂದ ಹೊರಗಿಡುವ ಹುನ್ನಾರ ನಡೆಯುತ್ತಿದೆ ಇದರಿಂದ ಮುಂದಿನ ಪೀಳಿಗೆಗೆ ಅನ್ಯಾಯವಾದಂತಾಗುತ್ತದೆ ಆದ್ದರಿಂದ ಈಗಿನಿಂದಲೇ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಕಾಡುಗೊಲ್ಲ ಸಮುದಾಯವು ಒಗ್ಗಟ್ಟಾಗದಿದ್ದರೆ ಭವಿಷ್ಯದಲ್ಲಿ ಸೌಲಭ್ಯ ಪಡೆಯುವುದು ಕಷ್ಟಕರವಾಗುತ್ತದೆ ಎಂದು ತಿಳಿಸಿದರು.
ಗದ್ದಿಗೆ ತಿಪ್ಪೇಸ್ವಾಮಿ ಮಾತನಾಡಿ ರಾಜಕೀಯ ಪಕ್ಷಗಳು ಕಾಡುಗೊಲ್ಲ ಸಮುದಾಯವನ್ನು ಕೇವಲ ಮತ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ ನಮ್ಮ ಸಮುದಾಯದ ಯಾವೊಬ್ಬ ಮುಖಂಡರಿಗೆ ಯಾವ ಪಕ್ಷವು ರಾಜಕೀಯ ಪ್ರಾತಿನಿದ್ಯ ನೀಡಿಲ್ಲ ಮುಂದಿನ ಚುನಾವಣೆಯಲ್ಲಿ ನಮ್ಮ ಸಮುದಾಯದ ಹಿತ ಕಾಯುವ ವ್ಯಕ್ತಿಗೆ ಮತ ನೀಡುವ ಒಗ್ಗಟ್ಟಿನ ಮಂತ್ರವನ್ನು ಜಪಿಸಬೇಕು ಕಾಡುಗೊಲ್ಲ ಹಟ್ಟಿಗಳಲ್ಲಿ ಬ್ಯಾನರ್ ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆಯ ಸಂದೇಶವನ್ನು ಮುಂದಿನ ದಿನಗಳಲ್ಲಿ ನೀಡಬೇಕು ತಮ್ಮ ಹಕ್ಕನ್ನು ಪಡೆಯಲು ನಾವು ಹೋರಾಡದಿದ್ದರೆ ನಮ್ಮನ್ನು ತುಳಿದು ಬೇರೆಯವರು ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಸಂದೇಹವಿಲ್ಲ ಕಾಡುಗೊಲ್ಲ ಸಮುದಾಯವು ಮುಂದಿನ ದಿನಗಳಲ್ಲಿ ಮೀಸಲಾತಿಗಾಗಿ ತಾಲೂಕು ಬಂದ್ ಮಾಡುವ ಯೋಜನೆ ರೂಪಿಸಿಕೊಂಡಿದ್ದು ತಾವೆಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು
ಈ ವೇಳೆ ಕಾಡುಗೊಲ್ಲ ಸಂಘದ ಗೌರವಾಧ್ಯಕ್ಷ ರಂಗಸ್ವಾಮಿ ಅಧ್ಯಕ್ಷ ಬೂದಿಹಳ್ಳಿ ರಾಜಣ್ಣ ಉಪಾಧ್ಯಕ್ಷ ಶಿವಮೂರ್ತಿ ಜಿಕೆ ವೀರಣ್ಣ ವೀರೇಶ್ ಬಸವರಾಜ್ ನಿಸರ್ಗ ಗೋವಿಂದರಾಜು ಗೋವಿಂದಪ್ಪ ಚಿಕ್ಕಣ್ಣ ಮೂಡಲಗಿರಿಯಪ್ಪ ಶ್ರೀಕಂಠಯ್ಯ ಮಂಜುನಾಥ ಸೇರಿದಂತೆ ಹಲವರು ಉಪಸ್ಥಿತರಿದ್ದರು