ಚಳ್ಳಕೆರೆ : ನಗರದ ಸಂತೆ ಮಾರುಕಟ್ಟೆ ಆವರಣದಲ್ಲಿ ನಗರಸಭೆಯ 30ಲಕ್ಷ ರೂಗಳ ಅನುದಾನದಲ್ಲಿ ಖರೀದಿಸಿರುವ ನೆಲಹಾಸು ಅಳವಡಿಸುವ ಕಾಮಗಾರಿಗೆ ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿ ಮಾತನಾಡಿದರು.
ನಗರದಲ್ಲಿ ಸಂತೆ ಮಾರುಕಟ್ಟೆ ಬದಲಾಯಿಸಿದ ಸಂಧರ್ಭದಲ್ಲಿ ನನ್ನ ಬಗ್ಗೆ ತುಂಬಾ ವಿರೋಧ ವ್ಯಕ್ತಪಡಿಸಿದ್ದ ಎಲ್ಲಾ ಸರ್ವಾಜನಿಕರು ಇಂದು ಸಂತಸ ವ್ಯಕ್ತಪಡಿಸಿದ್ದಾರೆ, ಇದಕ್ಕೆ ಕಾರಣ ಹೈಟೆಕ್ ಬಸ್ ನಿಲ್ದಾಣ ಹಾಗೂ ಸುಸಜ್ಜಿತವಾದ ಸಂತೆ ಮಾರುಕಟ್ಟೆಗೆ ಕಾಯಕಲ್ಪ ಕಲ್ಪಿಸಿರುವುದು ಮೆಚ್ಚುಗೆಗೆ ಕಾರಣವಾಗಿದೆ, ಆದ್ದರಿಂದ ಪ್ರಸ್ತುತ ನಗರಸಭೆ ಅನುದಾನದಲ್ಲಿ ಸು30ಲಕ್ಷ ವೆಚ್ಚದಲ್ಲಿ ಇಡೀ ಮೈದಾನ ನೆಲಹಾಸು ಮೂಲಕ ಸ್ವಚ್ಚತೆಗೆ ಪ್ರಮುಖ್ಯತೆ ನೀಡಿದೆ ಆದ್ದರಿಂದ ಇನ್ನೂ ಹೆಚ್ಚಿನ ಅನುದಾನ ಅವಶ್ಯವಾಗಿದ್ದಾರೆ. ಮುಂದಿನ ದಿನಗಳಲ್ಲಿ ಸರಿಹೊಂದಿಸುವೆ ಎಂದರು.
ಇದೇ ಸಂಧರ್ಭದಲ್ಲಿ ಪೌರಾಯುಕ್ತ ಸಿ.ಚಂದ್ರಪ್ಪ, ಅಧ್ಯಕ್ಷೆ ಸುಮಕ್ಕ ಅಂಜನಪ್ಪ, ಉಪಾಧ್ಯಕ್ಷೆ ಮಂಜುಳಾ ಆರ್ ಪ್ರಸನ್ನ ಕುಮಾರ್, ಸದಸ್ಯರುಗಳಾದ ಜೈತುಂಬಿಮಾಲೀಕ ಸಾಬ್, ಸುಮಾಭರಮಯ್ಯ, ಕವಿತಾ ಬೋರಯ್ಯ, ವೀರಭದ್ರಯ್ಯ, ರಮೇಶ್‌ಗೌಡ, ಚಳ್ಳಕೆರಪ್ಪ, ವಿಶ್ವಕರ್ಮ ರಾಜ್ಯ ಅಧ್ಯಕ್ಷರಾದ ಆರ್.ಪ್ರಸನ್ನಕುಮಾರ್, ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ಖಾದರ್, ಮುಖಂಡರುಗಳಾದ ಬೋರಣ್ಣ, ಅಂಜಿನಪ್ಪ ಹಾಗೂ ನಗರಸಭೆ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಸಂತೆ ಮಾರುಕಟ್ಟೆಯ ಅಂಗಡಿ ಮಾಲೀಕರುಗಳು ಉಪಸ್ಥಿತರಿದ್ದರು.