ಚಿತ್ರದುರ್ಗ: ಚುನಾವಣೆ ಪರಿಷ್ಕರಣೆ ಸಮಯದಲ್ಲಿ ಬಿಎಲ್ ಓ ಗಳು ಉತ್ತಮವಾಗಿ ಕೆಲಸವನ್ನು ಮಾಡಿದ್ದರಿಂದ ಅಚ್ಚುಕಟ್ಟಾಗಿ ಪೂರ್ಣಗೊಳ್ಳಲು ಸಹಕಾರಿ ಆಯಿತು ಎಂದು ಉಪ ವಿಭಾಗಧಿಕಾರಿ ಚಂದ್ರಯ್ಯ  ಹೇಳಿದರು.

ನಗರದ ತಾಲೂಕು ಪಂಚಾಯತ ಸಭಾಂಗಣದಲ್ಲಿ  ಚಿತ್ರದುರ್ಗ ತಾಲೂಕಿನ  ಚುನಾವಣಾ  ಮತದಾರರ ಪರಿಷ್ಕರಣೆ ವೇಳೆ ಕೆಲಸ ಮಾಡಿದ ಎಲ್ಲಾ ಬಿಎಲ್ಓ ಮತ್ತು  ಸೂಪರ್ ವೈಸರ್ ಅವರಿಗೆ ಸನ್ಮಾನಿಸಿ ಮಾತನಾಡಿದರು.

ಮತದಾರರ ಪರಿಷ್ಕರಣೆಯಲ್ಲಿ ಸುಮಾರು 158 ಬಿಎಲ್ಓ ಗಳು 30 ಜನ ಸುಪರ್ ವೈಸರ್ ಅವರು ಇಬ್ಬರು ಉಪ ತಹಶೀಲ್ದಾರ್ ಮತ್ತು ಇಬ್ಬರು  ಆರ್ಐ ಗಳು,ನಾಲ್ಕು ವಿಎ ಗಳು  ಕೆಲಸ ನಿರ್ವಹಿಸಿದ್ದಾರೆ. ಚಿತ್ರದುರ್ಗ ತಾಲೂಕಿನಾದ್ಯಂತ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಕೆಲಸ ಮಾಡಿದ್ದು ಹೀಗೆ ಅವರ ಕೆಲಸ ಮುಂದುವರೆಯಲಿ ಎಂದರು.

ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ಮಾತನಾಡಿ ಚುನಾವಣೆ ಮತದಾರರ ಪರಿಷ್ಕರಣೆ ವೇಳೆ ಎಲ್ಲಾ ಸಿಬ್ಬಂದಿಗಳು ಕಾರ್ಯ ಶ್ಲಾಘನೀಯವಾಗಿದೆ. ಹಗಲಿರುಳು ಎನ್ನದೇ ಸೈನಿಕರಂತೆ ಕೆಲಸ ಮಾಡಿದ್ದಾರೆ. ಪ್ರತಿ ಮನೆ ಮನೆಗೆ ತೆರಳಿ ಮಾಹಿತಿ ಪಡೆಯುವ ಮೂಲಕ ಮತದಾರರ ಪಟ್ಟಿ  ಖಾತ್ರಿ ಮಾಡಿಕೊಂಡಿದ್ದಾರೆ.. ಶಿಕ್ಷಕರು , ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು, ನಮ್ಮ ಇಲಾಖೆ ಸಿಬ್ಬಂದಿಗಳು ಸೇರಿ ಕೆಲಸ ನಿರ್ವಹಣೆ ಮಾಡಿ  ಯಶಸ್ವಿಯಾಗಿದ್ದಾರೆ.  ಯಾವುದೇ ಒಂದು ಕೆಲಸ ಪೂರ್ಣವಾಗಲು  ಒಗ್ಗಟ್ಟಿನಿಂದ ಶ್ರಮಿಸಿದರೆ ಮಾತ್ರ ಗೆಲುವು ಕಾಣಬಹುದು. ಮುಂದಿನ ದಿನದಲ್ಲಿ ಇನ್ನು ಹೆಚ್ಚಿನ ಚುನಾವಣಾ ಕೆಲಸ ಇದ್ದು ಮುಂದಿನ ದಿನದಲ್ಲಿ  ಇದೇ ರೀತಿಯಲ್ಲಿ ಎಲ್ಲಾರೂ ಕೆಲಸ ಮಾಡಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ಸತ್ಯನಾರಾಯಣ ಅವರಿಗೆ ಸನ್ಮಾನ:ಚಿತ್ರದುರ್ಗ ತಹಶೀಲ್ದಾರ್ ಹುದ್ದೆಯಿಂದ ಉಪ ವಿಭಾಗಧಿಕಾರಿ ಹುದ್ದೆಗೆ ಬಡ್ತಿ ಪಡೆದ ತಹಶೀಲ್ದಾರ್ ಜಿ‌.ಹೆಚ್.ಸತ್ಯನಾರಾಯಣ ಅವರಿಗೆ ಬಿಎಲ್ಓ ಮತ್ತು ಶಿಕ್ಷಣ ಇಲಾಖೆಯಿಂದ ಸನ್ಮಾನಿಸಲಾಯಿತು‌

ಈ ಸಂದರ್ಭದಲ್ಲಿ ಬಿಇಓ ತಿಪ್ಪೇಸ್ವಾಮಿ, ಅಕ್ಷರ ದಾಸೋಹದ ಹುಲುಕುಂಟರಾಯಪ್ಪ,  ಚುನಾವಣಾ ಶೀರಸ್ತಾರ್  ಅನ್ನಪೂರ್ಣಮ್ಮ,  ಕಚೇರಿಯ ಶ್ರೀಶೈಲಪ್ಪ  ಇದ್ದರು‌.

About The Author

Namma Challakere Local News
error: Content is protected !!