ಅಕ್ರಮ ಮದ್ಯ ಮಾರಾಟ ..! ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಆರೋಪಿ ವಶಕ್ಕೆ : ಸಾರ್ವಜನಿಕರಿಂದ ಅಬಕಾರಿ ಇಲಾಖೆಗೆ ಪ್ರಶಂಸೆ…!!

ಚಳ್ಳಕೆರೆ : ಅಕ್ರಮ ಮದ್ಯ ಮಾರಾಟದಿಂದ ಸಂಸಾರಗಳು ಬೀದಿ ಪಾಲುಗುತ್ತಿವೆ, ನಮ್ಮ ತಾಳಿ ಭಾಗ್ಯ ಉಳಿಸಿ ಎಂದು ನಮ್ಮ ಚಳ್ಳಕೆರೆ ವೆಬ್ ನ್ಯೂಸ್ ಸುದ್ದಿ ಪ್ರಕಟಿಸಿದ ಹಿನ್ನಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಅಬಕಾರಿ ಇಲಾಖೆ ಸಿಬ್ಬಂದಿ ಅತೀ ಶೀಘ್ರದಲ್ಲಿ ಅಕ್ರಮವಾಗಿ ಮದ್ಯ ಸಾಗಟ ಮಾಡುವವನನ್ನು ವಶಕ್ಕೆ ಪಡೆದಿದ್ದಾರೆ.

ಹೌದು ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮಸ್ಥರು ಹಾಗೂ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಮತ್ತು ಗ್ರಾಮದ ಪಂಚಾಯಿತಿ ಸದಸ್ಯರು ನೀಡಿರುವ ದೂರಿನ ಮೇರೆಗೆ ಚಳ್ಳಕೆರೆ ತಾಲ್ಲೂಕು ತಳಕು ಹೋಬಳಿಗೆ ಸೇರಿದ ಬೇಡರೆಡ್ಡಿಹಳ್ಳಿ ಗ್ರಾಮದ ಬಸ್ ನಿಲ್ದಾಣದಿಂದ ಬಂಜಗೆರೆ ಗ್ರಾಮಕ್ಕೆ ಹೋಗುವ ರಸ್ತೆ ಪಕ್ಕದಲ್ಲಿರುವ ಮಂಜುನಾಥ ತಂದೆ ಪಾಲಯ್ಯ ಇವರಿಗೆ ಸೇರಿದ ದ್ವಿಚಕ್ರ ವಾಹನ ಸಂಖ್ಯೆ-ಕೆ.ಎ- 16 ವೈ -9957 ಹೀರೋ ಸ್ಪ್ಲೆಂಡರ್ ಪ್ರೊ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಮಾರಾಟದ ಉದ್ದೇಶದಿಂದ 5.400 ಲೀಟರ್ ಮಧ್ಯವನ್ನು ಹೊಂದಿರುವುದು ಕಂಡುಬಂದ ಮೇರೆಗೆ ಆರೋಪಿ ಮತ್ತು ದ್ವಿಚಕ್ರ ವಾಹನವನ್ನು ಜಪ್ತಿಪಡಿಸಿಕೊಂಡು ಆರೋಪಿತನಿಗೆ ಸಿ ಆರ್ ಪಿ ಸಿ 1973 ರ ಕಲಂ 41(ಎ) ರಿತ್ಯಾ ಆರೋಪಿತನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿ ಬಿಡುಗಡೆ ಮಾಡಲಾಯಿತು.

ಅಬಕಾರಿ ಉಪ ಆಯುಕ್ತರು ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ರವರ ಮಾರ್ಗದರ್ಶನದ ಮೇರೆಗೆ ಹಾಗೂ ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪ ವಿಭಾಗ ರವರ ಮತ್ತು ಅಬಕಾರಿ ನಿರೀಕ್ಷಕರು ಚಳ್ಳಕೆರೆ ವಲಯ ರವರ ನಿರ್ದೇಶನದಂತೆ ಕೆಲವೇ ಗಂಟೆಗಳಲ್ಲಿ ಯಶಸ್ವಿ ಕಾರ್ಯಚರಣೆ ನಡೆಸಿದ್ದಾರೆ.

ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿ, ಮಹಜರ್ ಕ್ರಮದೊಂದಿಗೆ ಮಾಲನ್ನು ವಶಪಡಿಸಿಕೊಂಡು ಪ್ರಥಮ ವರ್ತಮಾನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಹಾಗೂ ಹಿಂದೆಯೂ ನೀಡಿದ್ದ ಸದರಿ ದೂರಿನ ಮೇರೆಗೆ ಸದರಿ ಗ್ರಾಮದಲ್ಲಿ ಸೇಂದಿಯನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಪ್ರತ್ಯೇಕ ಘೋರ ಪ್ರಕರಣಗಳಲ್ಲಿ ಇಬ್ಬರು ಆರೋಪಿಗಳನ್ನು ಮತ್ತು ಎರಡು ದ್ವಿಚಕ್ರ ವಾಹನಗಳನ್ನು ಮತ್ತು 115 ಲೀಟರ್ ಸೇಂದಿಯನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿರುತ್ತದೆ.

ಬೇಡರೆಡ್ಡಿಹಳ್ಳಿ ಗ್ರಾಮಸ್ಥರು ಮತ್ತು ಗ್ರಾಮದ ಪಂಚಾಯಿತಿ ಸದಸ್ಯರು ಮಹಿಳಾ ಸ್ತ್ರೀ ಶಕ್ತಿ ಸಂಘದವರ ದೂರಿಗೆ ಸಂಬಂದಿಸಿದಂತೆ ಕ್ರಮ ಕೈಗೊಂಡಿದ್ದು ಇನ್ನು ಮುಂದೆಯೂ ಕೂಡ ಅಬಕಾರಿ ಅಕ್ರಮಗಳು ಕಂಡುಬಂದಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

About The Author

Namma Challakere Local News
error: Content is protected !!