ಚಳ್ಳಕೆರೆ : ವೇದ ಚಿತ್ರದ ಪ್ರೋಮೋಷನ್ ಗೆ ಆಗಮಿಸಿದ ಚಿತ್ರನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ರವರು ಇಂದು ನಗರದ ಬೆಸ್ಕ್ಂ ಸಮೀಪದ ಅಭಿಮಾನಿಗಳೆ ರೂಪಿಸಿದ ಪುನಿತ್ ರಾಜ್‌ಕುಮಾರ್ ವೃತ್ತದಲ್ಲಿ ಸಾವಿರಾರು ಅಭಿಮಾನಿಗಳ ಆಯೋಜಿಸಿದ್ದ ವೇದ ಚಿತ್ರದ ರೋಡೊ ಶೋ ನಡೆಸಿದರು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಾಗೂ ಅಪಾರ ಅಭಿಮಾನಿ ಬಳಗ ವೃಂಧ ಸಾಥ್ ನೀಡುವ ಮೂಲಕ ಬೃಹತ್ ಗಾತ್ರದ ಹೂವಿನ ಹಾರವನ್ನು ಕ್ರೇನ್ ಮೂಲಕ ನೆಚ್ಚಿನ ನಟನಿಗೆ ಹಾಕುವ ಮೂಲಕ, ಎರಡು ಕಡೆಯಿಂದ ಜೆಸಿಬಿಗಳಿಂದ ಹೂವಿನ ಸುರಿಮಳೆ ಗೈದರು ಈಗೇ ನಗರದ ಅಂಬೇಡ್ಕರ್ ವೃತ್ತ, ನೆಹರು ವೃತ್ತದ ಮೂಲಕ ಸಾವಿರಾರು ಅಭಿಮಾನಿಗಳದತ್ತ ಶಿವರಾಜ್ ಕುಮಾರ್ ಹಾಗೂ ಚಿತ್ರತಂಡ ಕೈ ಬೀಸಿ ಮುಂದೆ ಸಾಗಿತು.
ನಂತರ ನಗರದ ರಾಮಕೃಷ್ಣ ಚಿತ್ರಮಂದಿರಕ್ಕೆ ತೆರಳಿ ವೇದ ಸಿನಿಮಾವನ್ನು ಕೆಲ ಕಾಳ ವೀಕ್ಷಣೆ ಮಾಡಿದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಪತ್ನಿ ಗೀತಾ ಹಾಗೂ ಚಿತ್ರ ತಂಡ ಮತ್ತೆ ಅಭಿಮಾನಿಗಳತ್ತ ಕೈಬೀಸಿ ಬಳ್ಳಾರಿಗೆ ನಿರ್ಗಮಿಸಿದರು.
ಆದರೆ ನಿರೀಕ್ಷೆ ಮೀರಿದ ಅಭಿಮಾನಿಗಳ ದಂಡು ಬಂದಿದ್ದರಿAದ ಪೊಲೀಸ್ ಇಲಾಖೆ ಬಂದೋ ಬಸ್ತ್ ನೀಡುವ ಸಲುವಾಗಿ ಲಘು ಲಾಠಿ ಪ್ರಹಾರ ಮಾಡಲಾಯಿತು, ಇನ್ನೂ ಚದುರಿದ ಅಭಿಮಾನಿಗ ಬಿದ್ನೋ ಎದ್ನೋ ಎಂದು ಓಡಿ ಹೋದರು, ಅದರೂ ನೆಚ್ಚಿನ ನಟನ ಸೆಲ್ಪಿಗಾಗಿ ಮುಗಿಬಿದ್ದ ಅಭಿಮಾನಿಗಳ ದೃಶ್ಯ ಕಂಡು ಬಂದಿತು.
ಇದೇ ಸಂಧರ್ಭದಲ್ಲಿ ಆಯೋಜಕರಾದ ಚೇತನ್ ಕುಮಾರ್(ಕುಮ್ಮಿ) ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಕಾಂತರಾಜ್, ಬಸವರಾಜ್, ಆರ್.ಪ್ರಸನ್ನಕುಮಾರ್, ಕೃಷ್ಣಮೂರ್ತಿ, ಸುರೇಶ್, ವೆಂಕಟಪ್ಪ, ಡಿ.ಚಂದ್ರು, ಉಮೇಶ್ ಚಂದ್ರು ಬ್ಯಾನಜಿ, ಏಕಾಂತ್, ಪ್ರವೀಣ್, ಗಾಂಧಿನಗರದ ಯುವ ಮುಖಂಡ ಎಲ್.ಸಿದ್ದು, ರಾಜು, ದರ್ಶನ್, ತಿಪ್ಪೆಸ್ವಾಮಿ, ಆರ್ದಶರಾಜ್, ಮುಸೇಬಿ, ವೀರೇಶ್, ಅಪಾರ ಅಭಿಮಾನಿ ಬಳಗ ನೆರೆದಿತ್ತು,
ತೆರೆದ ವಾಹನದಲ್ಲಿ ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುರ್ಮೂ ಚಲನ ಚಿತ್ರನಟ ಡಾ. ಶಿವರಾಜ್‌ಕುಮಾರ್ ರನ್ನು ಆತ್ಮಿಯವಾಗಿ ಸ್ವಾಗತಿಸಿ ಪೇಟ ತೊಡಿಸಿ, ನಂತರ ಮಾತನಾಡಿದ ಅವರು 125ನೇ ವೇದ ಸಿನಿಮಾ ಸಂಭ್ರಮಾಚರಣೆಯಲ್ಲಿ ಡಾ.ಶಿವರಾಜ್ ಕುಮಾರ್ ಹಾಗೂ ಚಿತ್ರ ತಂಡದೊAದಿಗೆ ನಮ್ಮ ನಗರಕ್ಕೆ ಅಗಮಿಸಿರುವುದು ಸಂತಸ ತಂದಿದೆ ಎಂದು ಶಾಸಕ ಟಿ.ರಘುಮೂರ್ತಿ ಅಭಿಮಾನದ ನುಡಿಗಳನ್ನು ಹಾಡಿದರು.
ಇದೇ ವೇಳೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಾತನಾಡಿ ನಿಮ್ಮ ಅಭಿಮಾನದ ಸಂತಸ ನನ್ನನ್ನು ಹಿಮ್ಮಡಿಗೊಳಿಸಿದೆ, ನನ್ನ 125ನೇ ವೇದ ಚಿತ್ರವನ್ನು ಎ.ಹರ್ಷ ನಿರ್ದೇಶನ ಮಾಡಿದ್ದು, ವೇದ ಚಿತ್ರ ಮೂರನೇ ವಾರದ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಕ್ಕೆ ಕರ್ನಾಟಕ ಅಲ್ಲದೆ ತಮಿಳುನಾಡು, ಮುಂಬೈನಲ್ಲಿ ಒಳ್ಳೆ ಪ್ರತಿಕ್ರಿಯೆ ಸಿಗುತ್ತಿದೆ ಇದು ನಮಗೆ ತುಂಬಾ ಖುಷಿ ತಂದು ಕೊಟ್ಟಿದೆ. ಎಲ್ಲಾರೂ ಸಿಮಿಮಾ ಥೇಟರ್ ಹೋಗಿ ವೀಕ್ಷಣೆ ಮಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರೋತ್ಸಹ ನೀಡಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿ ದೇವರುಗಳು ಸೇರಿರುವುದು ನನಗೆ ತುಂಬಾ ಸಂತೋಷ ತಂದಿದೆ, ನಿಮ್ಮ ಅಭಿಮಾನ ಎಂದಿಗೂ ಜೀವಂತವಾಗಿರಲಿ ಎಂದರು.