ಹಟ್ಟಿಮಲ್ಲಪ್ಪ ನಾಯಕ ಸಮಾಧಿಯ ಕಲ್ಲುಗಳು ಭೂಗÀಳ್ಳರ ಪಾಲು : ಪಟೇಲ್ ಜಿ.ತಿಪ್ಪೇಸ್ವಾಮಿ ಆರೋಪ
ಚಳ್ಳಕೆರೆ : ಹಟ್ಟಿ ಮಲ್ಲಪ್ಪ ನಾಯಕರ ಸಮಾಧಿ ಕಲ್ಲುಗಳನ್ನು ಭೂ ಕಳ್ಳರು ಕಿತ್ತು ಮಾರುವ ಮೊದಲೇ ಸಮುದಾಯದ ಮುಖಂಡರು ಯುವಕರು ಜಾಗೃತರಾಗಬೇಕು ಎಂದು ಪಟೇಲ್ ಜಿ.ತಿಪ್ಪೇಸ್ವಾಮಿ ಹೇಳಿದ್ದಾರೆ.
ಅವರು ನಾಯಕನಹಟ್ಟಿಯ ಹಟ್ಟಿಸ್ಮಾರಕ ಸಂರಕ್ಷಣೆ ವೇದಿಕೆ ವತಿಯಿಂದ ಆಯೋಜಿಸಿದ್ದ ಹಟ್ಟಿ ಮಲ್ಲಪ್ಪ ನಾಯಕ ಸಮಾಧಿಗಳನ್ನು ವೀಕ್ಷಿಸಿ ಹಟ್ಟಿ ಮಲ್ಲಪ್ಪ ಸಮಾಧಿಗೆ ಪೂಜಿ ಸಲ್ಲಿಸಿ ದೊರೆಗಳ ಹಟ್ಟಿಯಲ್ಲಿ ಆಯೋಜಿಸಿದ್ದ ನಾಯಕ ಸಮುದಾಯದ ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,
ನಾಯಕನಹಟ್ಟಿಯ ನಾಯಕ ಜನಾಂಗಕ್ಕೆ ಮೂರು ಕಟ್ಟೆಮನೆ ನಾಯಕನಹಟ್ಟಿ, ನನ್ನಿವಾಳ ಹಾಗೂ ಗೋನೂರು, ಶ್ರೇಷ್ಠವಾದ ಕಟ್ಟೆ ಮನೆ ಎಂದರೆ ನಾಯಕನಹಟ್ಟಿ ಅತಿ ಹೆಚ್ಚು ಪಾಳಿಗಾರರು ಇದ್ದಾರೆ ಹಟ್ಟಿ ಮಲ್ಲಪ್ಪ ನಾಯಕ ಆಳ್ವಿಕೆಯಲ್ಲಿ ಈ ಭಾಗದ ಜನರಿಗೆ ಜನಸಾಮಾನ್ಯರಿಗೆ ನ್ಯಾಯ ಕೊಡಿಸುವಂತೆ ಏಕೈಕ ನಾಯಕ ಹಟ್ಟಿ ಮಲ್ಲಪ್ಪ ನಾಯಕ, ಇವರು ಐದು ಕೆರೆಗಳಂದರೆ ಹಿರೇಕೆರೆ, ಚಿಕ್ಕಕೆರೆ, ರಾಮಸಾಗರ ಕೆರೆ, ರೇಖಲಗೆರೆ ಕೆರೆ ಭೀಮನಕೆರೆ, ಐದು ಪುರುಗಳೆಂದರೆ ಗೌರಿಪುರ, ಕುದಾಪುರ, ಗಿಡ್ಡಾಪುರ, ಮಹದೇವಪುರ, ಕಾಶಿಪುರ, ಹೀಗೆ ಸಾಕಷ್ಟು ಅಭಿವೃದ್ಧಿಯನ್ನ ಮಾಡಿ ತನ್ನದೇ ಆದ ಇತಿಹಾಸವನ್ನು ಹೊಂದಿದ ನಮ್ಮ ನಾಯಕ ಜನಾಂಗದ ಹಟ್ಟಿ ಮಲ್ಲಪ್ಪ ನಾಯಕ ಎಂದು ಪಟೇಲ್ ಜಿ ತಿಪ್ಪೇಸ್ವಾಮಿ ತಿಳಿಸಿದರು.
ಇನ್ನು ಸಭೆಯನ್ನು ಉದ್ದೇಶಿಸಿ ಡಾ ಯೋಗೇಶ್ ಬಾಬು . ಸೇರಿದಂತೆ ವಿವಿಧ ನಾಯಕ ಮುಖಂಡರು ಮಾತನಾಡಿದರು.
ಈ ಸಂದರ್ಭದಲ್ಲಿ ಶ್ರೀಧರ್‌ನಾಯಕ, ಚಿನ್ನಯ್ಯ, ಕಾಕಸೂರಯ್ಯ, ಜಯಲಕ್ಷ್ಮಿ, ಓಬಣ್ಣ, ಎನ್ ಮಹಾಂತಣ್ಣ, ಬೋರಯ್ಯ, ರಂಗಸ್ವಾಮಿ, ರುದ್ರಮುನಿ, ಪಿಎನ್.ಮುತ್ತಯ್ಯ, ಪಿಡಿಒ ವೀರನಾಯಕ, ಎಸ್ ಬಸವರಾಜ್, ಸಣ್ಣಚಿತ್ತಯ್ಯ, ಟಿ.ಬಸಪ್ಪ ನಾಯಕ, ಜಿಬಿ.ಮುದಿಯಪ್ಪ, ಗ್ರಾಪಂ.ಅಧ್ಯಕ್ಷ ಡಾ.ಕಾಟಂಲಿAಗಯ್ಯ, ಜಯಣ್ಣ, ಮಲ್ಲಿಕಾರ್ಜುನ, ಶಿವ ತಿಪ್ಪೇಸ್ವಾಮಿ, ಪಾಲಯ್ಯ, ಬಿ.ಕಾಟಯ್ಯ, ತಿಪ್ಪೇಸ್ವಾಮಿ, ಬಂಗಾರಪ್ಪ, ನರಸಪ್ಪನಾಯಕ, ಗಣೇಶನಾಯಕ ,ಪ್ರಶಾಂತ, ಗೌರಿರಾಜ್ ಕುಮಾರ್ ಹೊಳಲ್ಕೆರೆ, ತಳವಾರ ತಿಪ್ಪಯ್ಯ, ಪ್ರಭುದೇವ್, ಓಬಣ್ಣ ರೇಖಲಗೆರೆ, ಸೇರಿದಂತೆ ನಾಯಕ ಸಮುದಾಯದ ಮುಖಂಡರು ಉಪಸ್ಥಿತರಿದ್ದರು