ಚಳ್ಳಕೆರೆ : ತಾಲೂಕಿನ ಪುರ್ಲಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಆಚರಿಸುವ ಕ್ಯಾತಪ್ಪ ದೇವರ ಜಾತ್ರಾ ಕಳಸಾರೋಣ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು,
ಸುಮಾರು ಒಂಬ್ಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರ ಆಗಮಿಸುತ್ತಾರೆ. ಇನ್ನೂ ಇದೇ ಜನವರಿ 9ರಂದು ನಡೆಯುವ ಕಳಸ ಕೀಳುವ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುವ ನೀರಿಕ್ಷೆಯಿದೆ.
ಇನ್ನೂ ತಾಲೂಕಿನ ತಹಶೀಲ್ದಾರ್ ಎನ್.ರಘುಮೂರ್ತಿ ಭಾಗವಹಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಾರತೀಯರ ಭವ್ಯ ಸಂಸ್ಕೃತಿಗೆ ಚಿತ್ರದುರ್ಗ ಜನತೆಯ ಕೊಡುಗೆ ಅಪಾರವಾಗಿದೆ ಅದರಲ್ಲೂ ಮುಖ್ಯವಾಗಿ ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಮತ್ತು ವ್ಯಾಸ ನಾಯಕರ ಆಚಾರ ವಿಚಾರಗಳು ಉಡುಗೆ ತೊಡುಗೆಗಳು ಸಂಪ್ರದಾಯಗಳು ಪೂಜಾ ವಿಧಿ ವಿಧಾನಗಳು ದೇಶಿಯ ಸಂಸ್ಕೃತಿಯನ್ನು ಶ್ರೀಮಂತ ಗೊಳಿಸಿವೆ ಎಂದು ಹೇಳಿದರು.
ಇದೇ ತಿಂಗಳು 9ರ ವರೆಗೆ ನಡೆಯುವ ಈ ಜಾತ್ರೆ ಅತ್ಯಂತ ವಿಶಿಷ್ಟ ಪೂರ್ಣವಾದದ್ದು ಎಲ್ಲ ಭಕ್ತಾದಿಗಳು ಕೂಡ ತಮ್ಮ ಮೈ ಮತ್ತು ಮನಗಳನ್ನು ಅಂತಕರಣದಿAದ ಶುದ್ದಿ ಮಾಡಿಕೊಂಡು ನಿರಂತರ ಉಪವಾಸದಿಂದ ಮೈಲಿಗೆ ಸೋಕಿಸದೆ ಮಡಿಯಿಂದ ವ್ರತಗಳನ್ನಾಚಾರಿಸಿಕೊಂಡು ಈ ಪವಿತ್ರ ಕಾರ್ಯಮಾಡುತ್ತಾರೆ.
ರಾಜ್ಯದ ತುಮಕೂರು ಚಿತ್ರದುರ್ಗ ಮತ್ತು ಬಳ್ಳಾರಿ ಹಾಗೂ ಆಂಧ್ರದ ಭಾಗದಿಂದಲೂ ಕೂಡ ಈ ದೇವಸ್ಥಾನದ ಗುಡೇಕಟ್ಟೆ ಯವರು ಬರುತ್ತಾರೆ ಈ ಎಲ್ಲಾ ಭಕ್ತಾದಿಗಳು ಕೂಡ ಆದಷ್ಟು ಶುಚಿತ್ವ ಮತ್ತು ಆರೋಗ್ಯದ ಕಡೆ ಗಮನ ಕೊಡಬೇಕು ಕೋವಿಡ್ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕು ಸಂಸ್ಕೃತಿ ಉಳಿಸುವುದರ ಜೊತೆಗೆ ಶೈಕ್ಷಣಿಕ ಆರ್ಥಿಕ ಸ್ವಾವಲಂಬನೆ ಕಂದುಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಹಲವು ಜನಪ್ರತಿನಿಧಿಗಳು ಹಾಗೂ ಕಾಡುಗೋಲ್ಲ ಸಮಾಜದ ಅಧ್ಯಕ್ಷರಾದ ಬೂದಿಹಳ್ಳಿ ರಾಜು, ಹೊನ್ನೂರ್ ಗೋವಿಂದಪ್ಪ, ಖಜಾಂಚಿ ಕಾಂತರಾಜು, ಸಾವಿರಾರು ಬಕ್ತಾದಿಗಳು ಉಪಸ್ಥಿತರಿದ್ದರು