ಚಳ್ಳಕೆರೆ : ದಿನವೆಲ್ಲ ದುಡಿದ ಹಣ ಮದ್ಯದ ಅಂಗಡಿಗೆ ಕೊಟ್ಟು ಕುಡಿದ ಮತ್ತಿನಲ್ಲಿ ಮನೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ಹಾಗೂ ಹೆಂಡತಿಗೆ ತೊಂದರೆ ಕೋಡುತ್ತಾರೆ ಎಂದು ಹೆಣ್ಣು ಮಕ್ಕಳು ಪರಿ ಪರಿಯಾಗಿ ಬೇಡಿಕೊಳ್ಳುವ ದೃಶ್ಯ ನಗರದ ತಾಲೂಕು ಕಛೇರಿಯ ಮುಂಭಾಗ ಕಂಡು ಬಂದಿತು.
ಹೌದು ನಿಜಕ್ಕೂ ಶೋಚನೀಯ, ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯದ ಅಂಗಡಿ ಹಾಗೂ ಮನೆಗಳಲ್ಲೆ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದರ ಬಗ್ಗೆ ಅಧಿಕಾರಿಗಳು ತಡೆಯಲು ಮುಂದಾಗುತ್ತಿಲ,್ಲ ಸುಮಾರು 8 ರಿಂದ 9 ವರ್ಷಗಳಿಂದ ಮಾರಾಟ ಮಾಡುತ್ತಿದ್ದು ಈ ಬಗ್ಗೆ ಸಂಬAಧಿಸಿದ ಇಲಾಖೆಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವದೇ ಪ್ರಯೋಜವಾಗಿಲ್ಲ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಅಪ್ರಾಪ್ತ ಬಾಲಕರು ಮದ್ಯವಸನಿಗಳಾಗಿದ್ದಾರೆ, ಮಹಿಳೆಯರು ಕೂಲಿ ನಾಲಿಯಿಂದ ತಂದ ಹಣದಿಂದ ಗಂಡAದಿರು ಕಿತ್ತುಕೊಂಡು ಹೋಗಿ ಕುಡಿದು ದಿನ ನಿತ್ಯ ಗಲಾಟೆಗಳು ಮಾಡುತ್ತಿದ್ದು ಇದರಿಂದ ಮನೆ ಹಾಗೂ ಗ್ರಾಮದಲ್ಲಿ ಶಾಂತಿ ನೆಮ್ಮದಿ ಕದಡುತ್ತಿದೆ.
ಗ್ರಾಮೀಣ ಪ್ರದೇಶದಲ್ಲಿ ಮದ್ಯ ಮಾರಾಟ ಅಂಗಡಿ ಮಾಲಿಕರೇ ಗ್ರಾಮಗಳಿಗೆ ಬೈಕ್‌ಗಳಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ. ಕೂಡಲೆ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಗ್ರಾಮದ ಮುಖಂಡರಾದ ಇಂದ್ರಮ್ಮ, ಶಾರದಮ್ಮ, ಮಂಜಮ್ಮ, ನವೀನ್ ರೆಡ್ಡಿ, ಗಂಗಮ್ಮ, ಲಕ್ಷಿö್ಮÃ, ಮಾರುತಿ, ರತ್ನಮ್ಮ, ಮಲ್ಲಮ್ಮ, ಸೇರಿದಂತೆ ಸುಮಾರು 70ಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನೆಯಲ್ಲಿ ಪಾಳ್ಗೊಂಡಿದ್ದರು.