ಚಳ್ಳಕೆರೆ : ನಾಯಕನಹಟ್ಟಿಯಲ್ಲಿ ೨೦ ವರ್ಷಗಳ ನಂತರ ತಾಲ್ಲೂಕು ಮಟ್ಟದಲ್ಲಿ ಜಿಲ್ಲಾ ಸಮ್ಮೇಳ ಜ.೨೧ ಮತ್ತು ೨೨ ರಂದು ೧೬ ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯಲಿದೆ ಈಗಾಗಲೆ ಸ್ವಾಗತ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಿಲಾಗಿದೆ ಎಂದು ಜಿಲ್ಲಾಧ್ಯಾಕ್ಷ ಕೆ.ಎಂ.ಶಿವಸ್ವಾಮಿ ಹೇಳಿದ್ದಾರೆ.
ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಅರ್ಹರು ಬಹಳ ಜನರಿರುತ್ತಾರೆ ಅದರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಕಷ್ಟ ಆದರೆ
ಜಿಲ್ಲೆಯಲ್ಲಿ ವಾಸ ಮಾಡುವ ಹಾಗೂ ಹಿರಿಯ ಸಾಹಿತಿ ಮರಿಕುಂಟೆ ತಿಪ್ಪೇಸ್ವಾಮಿಯವರನ್ನು ಜಿಲ್ಲಾ ಕಸಾಪ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ೧೬ ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಶ್ರೀಗುರು ತಿಪ್ಪೇರುದ್ರಸ್ವಾಮಿ ಪುಣ್ಯ ಕ್ಷೇತ್ರ ನಾಯಕನಹಟ್ಟಿಯಲ್ಲಿ ಜ.21 ಮತ್ತು 22 ರಂದು ೧೬ ನೇ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನ ನಡೆಯಲಿದ್ದು ಕರ್ನಾಟಕ ಹಾಗೂ ಆಂದ್ರ ಪ್ರದೇಶಗಳ ನಡುವೆ ತೆಲಗು , ಕನ್ನಡ ಭಾಷೆಇರುವುದರಿಂದ ಮಾತೃ ಭಾಷೆ , ಧರ್ಮವನ್ನು ಉಳಿಸಿಲು ಪುಣ್ಯ ಕ್ಷೇತ್ರದಲ್ಲಿ ಜಿಲ್ಲಾ ಸಮ್ಮೇಳಣ ನಡೆಸಲು ರಾಜ್ಯಸಮಿತಿ, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರ ಒಪ್ಪಿಗೆ ಮೇರೆಗೆ ನಾಯನಹಟ್ಟಿಯಲ್ಲಿ ಎರಡು ದಿನಗಳ ಕಾಲ ಸಮ್ಮೇಣದ ಅಧ್ಯಕ್ಷ ಸಾಹಿತಿ ಮರಿಕುಂಟೆತಿಪ್ಪೇಸ್ವಾಮಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಜನವರಿ ೦೬ ರಿಂದ ಮೂರು ದಿನಗಳ ಕಾಲ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಬಳಿಕ ಜಿಲ್ಲಾ ಸಮ್ಮೇಳನಗಳು ಆರಂಭವಾಗಲಿವೆ ಎಂದರು.
ತಾಲೂಕು ಅಧ್ಯಕ್ಷ ಜಿ.ಟಿ. ವೀರಭದ್ರಪ್ಪ ಮಾತನಾಡಿ ಅಜೀವ ಸದಸ್ಯತ್ವ ಹಾಗೂ ಸದಸ್ಯತ್ವವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವ ಮೂಲಕ ಕನ್ನಡ ಸಾಹಿತ್ಯ ಪರಿಷತ್ ಅಭಿವೃದ್ಧಿಗೆ ಕೈ ಜೋಡಿಸ ಬೇಕು.
ಸಮ್ಮೇಳನಕ್ಕೆ ಹಾಜರಾಗುವ ಎಲ್ಲಾ ಇಲಾಖೆ ಅಧಿಕಾರಿಗಳಿಗೆ, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ೨೦೦ ರೂ. ಪ್ರತಿನಿಧಿ ಶುಲ್ಕ ಪಾವತಿಸಲು ಅವಕಾಶವಿದೆ.
ಪ್ರತಿನಿಧಿಗಳಿಗೆ ಬ್ಯಾಗ್, ಪ್ಯಾಡ್ಪೆನ್, ಬ್ಯಾಡ್ಜ್ ನೀಡಲಾಗುತ್ತದೆ ಎಂದು ತಿಳಿಸಿದರು.
ಈದೇ ಸಂಧರ್ಭದಲ್ಲಿ ದಯಾನಂದ, ಚಿತ್ತಯ್ಯ, ಮುತ್ತುರಾಜ್, ಮಲ್ಲೆಶ್ ಪ್ಪ, ಇತರರು ಹಾಜರಿದ್ದರು.