ಚಳ್ಳಕೆರೆ : ತಾಂತ್ರಿಕ ಶಿಕ್ಷಣ ವೈದ್ಯಕೀಯ ಶಿಕ್ಷಣ ಮತ್ತು ಉನ್ನತ ಶಿಕ್ಷಣಕ್ಕಿಂತ ಮೌಲ್ಯಾ ದಾರಿತ ಶಿಕ್ಷಣ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿದ್ದು ಇಂತಹ ಶಿಕ್ಷಣವನ್ನು ಕೊಡುವುದರ ಮೂಲಕ ಗುರು ಹಿರಿಯರ ಮತ್ತು ತಂದೆ ತಾಯಿಗಳನ್ನು ಗೌರವಿಸುವಂತ ಶಿಕ್ಷಣದ ಅಗತ್ಯತೆ ಇಂದಿನ ಸಮಾಜಕ್ಕಿದೆ ಎಂದು ತಹಸೀಲ್ದಾರ್ ಎನ್.ರಘುಮೂರ್ತಿ ಹೇಳಿದರು
ಬಸವೇಶ್ವರ ವಿದ್ಯಾ ಸಂಸ್ಥೆಯವರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬಸವೇಶ್ವರ ವಿದ್ಯಾ ಸಂಸ್ಥೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಗೆ ಉನ್ನತವಾದಂತ ಸಂಸ್ಕಾರವನ್ನು ನೀಡಿದರೆ ಉನ್ನತ ಮತ್ತು ಆಧ್ಯಾತ್ಮಿಕ ಶಿಕ್ಷಣ ದೊರೆಯುತ್ತದೆ.
ವಿದ್ಯಾರ್ಥಿಗಳು ಮುಂದಿನ ಜೀವನದಲ್ಲಿ ನೈತಿಕತೆಯನ್ನು ಸಂಪಾದಿಸಿದರೆ ತಮ್ಮ ಮುಂದಿನ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾ ವೈಫಲ್ಯಗಳನ್ನು ಮೀರಿ ಹಿಂತಿರುಗಿ ನೋಡುವುದಿಲ್ಲ ಹಾಗೆಯೇ ವಿದ್ಯಾರ್ಥಿಗಳು ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಹೇಳಿದ ಹಾಗೆ ವಿದ್ಯಾರ್ಥಿಗಳು ಅಗಾಧವಾದ ಕನಸನ್ನು ಕಂಡಿರಬೇಕು ಸಣ್ಣ ಪ್ರಮಾಣದ ಗುರಿ ಅಪರಾಧವಾಗುತ್ತದೆ ಆದುದರಿಂದ ವಿದ್ಯಾರ್ಥಿಗಳು ತಮ್ಮ ನಿಶ್ಚಿತವಾದ ಗುರಿಯೊಂದಿಗೆ ಕಠಿಣ ಪರಿಶ್ರಮ ವಹಿಸಿದರೆ ಮುಂದ ಜೀವನದಲ್ಲಿ ಯಶಸ್ಸನ್ನು ಪಡೆಯುವುದು ಮತ್ತು ಸಾರ್ಥಕತೆಯನ್ನು ಕೊಂಡುಕೊಳ್ಳಬಹುದು. ಹಾಗಾಗಿ ವಿದ್ಯಾರ್ಥಿಗಳನ್ನು ಈ ವಯಸ್ಸಿನಿಂದಲೇ ಯಶಸ್ಸಿನಾದಿಗೆ ಅಣಿಗೊಳಿಸಬೇಕೆಂದು ಮನವಿ ಮಾಡಿದರು

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾತನಾಡಿ ಈ ವಿದ್ಯಾ ಸಂಸ್ಥೆಯ 250ವಿದ್ಯಾರ್ಥಿಗಳಿಗೆ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸ ಒದಗಿಸುತ್ತಿರುವುದು ಅನನ್ಯವಾಗಿದೆ ಇದರ ಮುಖಾಂತರ ಸಾಮಾಜಿಕ ಸೇವೆಯನ್ನು ಉತ್ಕೃಷ್ಟವಾಗಿ ನೀಡುತ್ತಿದ್ದು ಇದು ಪ್ರಶಂಸನೀಯ ಎಂದು ಹೇಳಿದರು
ಈದೇ ಸಂಧರ್ಭದಲ್ಲಿ ಬಸವೇಶ್ವರ ವಿದ್ಯಾ ಸಂಸ್ಥೆಯ ಅಧ್ಯಕ್ಷ ಮಂಜುನಾಥ್, ಸಂಸ್ಥೆ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!