ಚಳ್ಳಕೆರೆ : ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಸಾರ್ವಜನಿಕವಾಗಿ ಚರ್ಚಿಸದೆ ಕೇಂದ್ರ ಸರ್ಕಾರಕ್ಕೆ ಏಕಮುಖವಾಗಿ ಶಿಫಾರಸ್ಸು ಮಾಡಲು ಹೊರಟಿರುವುದನ್ನು ವಿರೋಧಿಸಿ ಬೋವಿ, ಬಂಜಾರ, ಕೊರಮ ಸಮುದಾಯಗಳವತಿಂದ ಬೃಹತ್ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಎನ್.ರಘುಮೂರ್ತಿಗೆ ಮನವಿ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಿAದ ಪ್ರಮುಖ ರಸ್ತೆ ಮೂಲಕ ನೆಹರು ವೃತ್ತದಲ್ಲಿ ಪ್ರತಿಭಟನೆ ನಡೆಸಿ ಸರಕಾರದ ವಿರುದ್ದ ದಿಕ್ಕಾರ ಘೋಷಣೆಗಳನ್ನು ಕೂಗುವ ಮೂಲಕ ಅಕ್ರೋಶ ವ್ಯಕ್ತಪಡಿಸಿದರು. ಭೋವಿ, ಲಂಬಾಣಿ (ಬಂಜಾರ) ಛಲವಾದಿ, ಅಲೆಮಾರಿ ಜಾತಿಗಳಾದ ಕೊರಚ, ಕೊರಮ, ಚನ್ನದಾಸ, ಕುಳುವ, ಬುಡ್ಗಜಂಗಮ, ಸಿಳ್ಳೆಕ್ಯಾತಾಸ್, ದೊಂಬರು ಸೇರಿದಂತೆ ಪರಿಶಿಷ್ಟ ಸಮುದಾಯದ ಪ್ರತಿನಿಧಿಗಳು ಉಪಕಸಬಾದ ಪೊರಕೆಗನ್ನು ಹಿಡಿದು ಮಹಿಳೆಯರು ಪ್ರದರ್ಶನ ಮಾಡಿದರು.
ನ್ಯಾ ಎ ಜೆ ಸದಾಶಿವ ಆಯೋಗದ ವರದಿಯನ್ನು ಗುಪ್ತವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಹೊರಟಿರುವುದನ್ನು ಪ್ರಬಲವಾಗಿ ವಿರೋಧಿಸುತ್ತದೆ.
ಡಾ ಬಿ.ಆರ್.ಅಂಬೇಡ್ಕರ್ ರವರು ನಮಗೆ ಕೊಡ ಮಾಡಲ್ಪಟ್ಟ ಭಾರತದ ಸಂವಿಧಾನದ ಪ್ರಚಾರ ಕಾರ್ಯ ಮತ್ತು ಸಂರಕ್ಷಣೆಯ ಚಟುವಟಿಕೆಗಳಲ್ಲಿ ನಮ್ಮ ಸಂಘಟನೆ ಮತ್ತು ಈ ಸಮುದಾಯಗಳು ತೊಡಗಿಸಿಕೊಂಡಿವೆ. ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ ಎಲ್ಲಾ ದಮನಿತ, ವಂಚಿತ ಜನ ಸಮುದಾಯಗಳಿಗೆ ತಲುಪಲಿ ಎಂಬ ಸದಾಶಯ ನಮ್ಮದು. ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ಸಮುದಾಯಗಳ ಒಗ್ಗಟ್ಟು ಮತ್ತು ಅಭಿವೃದ್ಧಿಗಾಗಿ ಸರ್ಕಾರಗಳು ಮತ್ತಷ್ಟು ಅಗತ್ಯ ಕಾರ್ಯಕ್ರಮ ರೂಪಿಸಲಿ ಎಂದು ಆಶಿಸುತ್ತೇವೆ.
ರಾಜ್ಯದ ಪರಿಶಿಷ್ಟ ಜಾತಿಗಳ ಸ್ಥಿತಿಗತಿ, ಸರ್ಕಾರಿ ಸೌಲಭ್ಯಗಳ ಹಂಚಿಕೆ ಮತ್ತು ವಿತರಣೆಯ ಅಧ್ಯಯನದ ಉದ್ದೇಶಕ್ಕಾಗಿ 2005ರಲ್ಲಿ ಏಕ ಸದಸ್ಯ ಆಯೋಗ ರಚನೆಯಾಗಿದ್ದು ಸಂತೋಷ ತಂದಿತ್ತು. ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದ ನ್ಯಾ. ಎ.ಜೆಸದಾಶಿವರವರು ವರದಿ ಸಲ್ಲಿಸುವ ಕೆಲವು ತಿಂಗಳುಗಳವರೆಗೂ ಆಯೋಗಕ್ಕೆ ಮೂಲಭೂತ ಸೌಲಭ್ಯಗಳು, ಅಗತ್ಯ ಅನುದಾನವನ್ನು ಒದಗಿಸಿರಲಿಲ್ಲ. ಸಮಗ್ರವಾಗಿ ಅಧ್ಯಯನ ಮಾಡಬೇಕಿದ್ದ ಆಯೋಗ ಅದ್ಯಾಕೊ ಅವಸರದಲ್ಲಿ ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿತು. ಸರ್ಕಾರಿ ಆದೇಶದ ಉದ್ದೇಶ ಮತ್ತು ಸಮುದಾಯಗಳ ನಿರೀಕ್ಷೆಯಂತೆ ಆಯೋಗ ಕಾರ್ಯನಿರ್ವಹಿಸಲಿಲ್ಲ.
ಈ ಪ್ರತಿಭಟನೆಯಲ್ಲಿ ಶಿವಸಾಧು ಸ್ವಾಮೀಜಿ, ದೀನಾ ಭಗತ್ ಸ್ವಾಮೀಜಿ, ನಂದಮಸAದ್ ಸೇವಾಲಾಲ್ ಸ್ವಾಮೀಜಿ, ಎಚ್ ಆಂಜನೇಯ, ಡಾಕ್ಟರ್ ಚಂದ್ರನಾಯ್ಕ್, ಭೋವಿ ಸಮಾಜದ ಜಿಲ್ಲಾಧ್ಯಕ್ಷರು ತಿಪ್ಪೇಸ್ವಾಮಿ, ಜಗದೀಶ್, ಪುರುಷೋತ್ತಮ್ ನಾಯಕ್, ನಾಗೇಂದ್ರ ನಾಯಕ್, ಪ್ರಕಾಶ್, ರಾಮ ನಾಯಕ್, ಲಿಂಗನಾಯಕ್, ಗೋವಿಂದನಾಯಕ್, ರಾಜನಾಯಕ್, ರಾಮಸ್ವಾಮಿ ನಾಯಕ್, ಮಹಾಂತೇಶ್, ಆನಂದ, ತುಳಜಾ ನಾಯಕ, ಹಾಗೂ ಪ್ರತಿಭಟನೆಯಲ್ಲಿ ಬಂಜಾರ. ಬೋವಿ, ಕೊರಚ, ಛಲವಾದಿ ಸಮುದಾಯದ ಮುಖಂಡರು. ಜನಪ್ರತಿನಿಧಿಗಳು ಭಾಗವಹಿಸಿದ್ದರು