ಚಳ್ಳಕೆರೆ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕೇವಲ ಇನ್ನೂ ನಾಲ್ಕು ತಿಂಗಳು ಬಾಕಿ ಇರುವಾಗಲೇ ಬಯಲು ಸೀಮೆಯಲ್ಲಿ ರಾಜಾಕೀಯ ಕಹಳೆ ಮೊಳಗುತ್ತಿವೆ, ಅದರಂತೆ ಕ್ಷೇತ್ರದ ಅಭಿವೃದ್ದಿ, ಹಾಗೂ ಆಕಾಂಕ್ಷಿಗಳ ಪರ ಇರುವ ಹಾಗೂ ವಿರೋಧವಾದ ಬ್ಯಾನರ್ ಗಳನ್ನು ಕಟ್ಟುವ ಮೂಲಕ ರಾಜಾಕೀಯ ಗರಿಗೆದರಿದೆ.
ಅದರಂತೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ಮತದಾರರು ಕಟ್ಟಿದ ಬ್ಯಾನರ್ ಸಾರ್ವಜನಿಕರ ವಲಯದಲ್ಲಿ ಬಾರೀ ಚರ್ಚೆಗೆ ಗ್ರಸವಾಗಿದೆ.
ಇನ್ನೂ ನಾಲ್ಕು ತಿಂಗಳು ಚುನಾವಣೆಗೆ ಬಾಕಿ ಇರುವಾಗಲೆ ಕ್ಷೇತ್ರಕ್ಕೆ ಆಕಾಂಕ್ಷಿಗಳ ಪಾದರ್ಪಣೆ ಭರ್ಜರಿಯಾಗಿ ಇರುವುದರಿಂದ ಮತದಾರರು “ಕ್ಷೇತ್ರದ ಅಭಿವೃದ್ದಿ ವಂಚಿತ ಮೊಳಕಾಲ್ಕೂರು ವಿಧಾನಸಭಾ ಕ್ಷೇತ್ರವು ಹಿಂದುಳಿದ, ಶಾಶ್ವತ ಬರಪೀಡಿತ ಕ್ಷೇತ್ರವಾಗಿದೆ. ಈ ಕ್ಷೇತ್ರದಲ್ಲಿ ಹೊರಗಿನ ವಲಸಿಗ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದು ಕ್ಷೇತ್ರವನ್ನು ಕಡೆಗಣಿಸಿದ್ದಾರೆ. ಇದರಿಂದ ಸ್ಥಳೀಯ ಜನರ ಸಮಸ್ಯೆಗಳು ಬಗೆಹರಿಯದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಇದಕ್ಕೆ ಸೂಕ್ತ ಪರಿಹಾರವೆಂದರೆ ಸ್ಥಳೀಯ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗುವುದು ಎಂಬ ಸತ್ಯ ಕ್ಷೇತ್ರದ ಜನತೆಗೆ ಅರ್ಥವಾಗಿದೆ, ಹಾಗಾಗಿ ವಲಸಿಗರು/ಹೊರಗಿನ ಅಭ್ಯರ್ಥಿಗಳು ಕ್ಷೇತ್ರದ ಕಡೆಗೆ ಬರುವುದು ಉತ್ತಮವಾದ ಬೆಳವಣಿಗೆ ಸ್ಥಳಿಯ ಅಭ್ಯರ್ಥಿಗಳೇ ನಮ್ಮ ಮುಂದಿನ ಶಾಸಕರು. ಎಂದು ಮೊಳಕಾಲ್ಕೂರು ವಿಧಾನಸಭಾ ಕ್ಷೇತ್ರದ ಮತದಾರರು ಪ್ಲೆಕ್ಸ್ಗಳನ್ನು ಹಾಕುವ ಮೂಲಕ ವಲಸಿಗ ಆಕಾಂಕ್ಷಿಗಳ ಎದೆಯಲ್ಲಿ ಭಯವನ್ನುಂಟು ಮಾಡಿದ್ದಾರೆ.
ಅತಿ ಹೆಚ್ಚು ಹಿಂದುಳಿದ ಪರಿಶಿಷ್ಟ ಪಂಗಡ ಹಾಗೂ ಪರಿಷ್ಟ ಜಾತಿ ಹೊಂದಿರುವ ಎಸ್ಟಿ ಮೀಸಲಾತಿ ಕ್ಷೇತ್ರದ ಅಭಿವೃದ್ಧಿ ಕುಂಠಿತವನ್ನು ವಿರೋದಿಸಿ ಕ್ಷೇತ್ರದ ಮತದಾರರು ಕ್ಷೇತ್ರದಲ್ಲಿ ನಾಮಫಕ ಹಾಕುವ ಮೂಲಕ ಕ್ಷೇತ್ರ ಸ್ಫರ್ಥಿಸುವ ಆಕಾಂಕ್ಷಿಗಳಿಗೆ ಈ ಬಾರಿ ಎಚ್ಚರಿಕೆ ನೀಡಲು ಮುಂದಾಗಿದ್ದಾರೆ.
ಕ್ಷೇತ್ರದ ರಸ್ತೆಗಳು ಕಿತ್ತು ಹೋಗಿವೆ, ಗೌರಸಮುದ್ರ ಮಾರಮ್ಮ ದೇವಿ ಪುಣ್ಯ ಕ್ಷೇತ್ರದಿಂದ ಆದಾಯ ಬಂದರೂ ಬರುವ ಭಕ್ತರಿಗೆ ಮೂಲಭೂತ ಸೌಕರ್ಯಗಳಿಲ್ಲ. ಇನ್ನು ಚುನಾವಣೆ ನಾಲ್ಕು ತಿಂಗಳು ಬಾಕಿ ಇರುವಾಗಲೇ ವಿವಿಧ ನಗರಗಳಿಂದ ಕ್ಷೇತ್ರಕ್ಕೆ ಪ್ರಭಲ ಆಕಾಂಕ್ಷಿಗಳು ಎಂದು ಮತದಾರರನ್ನು ಸೆಳೆಯಲು ವಲಸಿಗರ ದಂಡು ಬರುತ್ತಿದ್ದು, ಈ ಬಾರಿ ಕ್ಷೇತ್ರದ ಸ್ಥಳಿಯರಿಗೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವ ನಾಯಕನ್ನು ಆಯ್ಕೆ ಮಾಡಿಕೊಳ್ಳಲು ಕ್ಷೇತ್ರದ ಮತದಾರರು ಪ್ರಥಮವಾಗಿ ಜಾಗೃತರಾಗಿ ಹೊಸ ತಂತ್ರಗಾರಿಕೆ ರೂಪಿಸಿ ಕ್ಷೇತ್ರದ ಎಲ್ಲಾ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ವಲಸಿಗರು, ಹೊರಗಿನ ಅಭ್ಯರ್ಥಿಗಳಿಗೆ ಪ್ರವೇಶವಿಲ್ಲ ಎಂಬ ಪ್ಲೆಕ್ಸ್ ಬ್ಯಾರ‍್ಗಳನ್ನು ಗಳನ್ನು ಅಳವಡಿಸಲು ಮುಂದಾಗಿದ್ದಾರೆ.