ಚಳ್ಳಕೆರೆ : ಧಾರ್ಮಿಕ ಭಾವನೆಗಳಿಗೆ ಆಧ್ಯಾತ್ಮಿಕ ಚಿಂತನೆಗಳು ಬೆರೆತಾಗ ಮನಸ್ಸು ಪ್ರಸನ್ನವಾಗುತ್ತದೆ ಸಕಾರಾತ್ಮಕವಾದ ಚಿಂತನೆಗಳು ಮೈಗೂಡುತ್ತವೆ ನಮ್ಮ ರಾಷ್ಟ್ರ ಮತ್ತು ಪರಂಪರೆಯ ಬಗ್ಗೆ ಅದ್ವಿತೀಯವಾದ ಮನಸ್ಸು ಕೇಂದ್ರೀಕೃತವಾಗುತ್ತದೆ ಎಂದು ತಹಸಿಲ್ದಾರ್ ಎನ್.ರಘುಮೂರ್ತಿ ಹೇಳಿದರು
ಅವರು ನಗರದ ವೈಕುಂಠ ಏಕಾದಶಿಯ ಪ್ರಯುಕ್ತ ನಗರದ ಹಳೆ ನಗರದ ತಿಪ್ಪಮ್ಮ ದೇವಾಸ್ಥಾನಕ್ಕೆ, ಹಾಗೂ ಗಾಂಧಿನಗರದ ಶ್ರೀ ತಿಮ್ಮಪ್ಪಸ್ವಾಮಿ ದೇವಸ್ಥಾನದಲ್ಲಿ ಸಂಸ್ಕಾರ ಸಂಘಟನೆ ಸೇವೆ ವತಿಯಿಂದ ಹಮ್ಮಿಕೊಂಡಿದ್ದAತ ಯೋಗ ಮತ್ತು ವೈಕುಂಠ ಏಕಾದಶಿಯ ಪೂಜಾ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು
ಧಾರ್ಮಿಕ ಪರಂಪರೆ ಮತ್ತು ಆಧ್ಯಾತ್ಮಿಕ ಪರಂಪರೆಗಳು ಭಾರತೀಯರಾದ ನಮಗೆ ಹಾಸು ಒಕ್ಕಾಗಿದೆ ಮನಸ್ಸಿನಲ್ಲಿರುವಂಥ ಖಿನ್ನತೆ ಇದರಿಂದ ದೂರವಾಗುತ್ತದೆ ದೇಶಾಭಿಮಾನ ಮತ್ತು ರಾಷ್ಟ್ರಾಭಿಮಾನ ಮಣೆ ಮಾಡುತ್ತದೆ ಇದರಿಂದ ಸಹಜವಾಗಿ ಸಹಕಾರ ಸಹಬಾಳ್ವೆ ಮತ್ತು ಭಾತೃತ್ವ ಮನುಷ್ಯನ ಮನಸ್ಸನ್ನು ಆವರಿಸುತ್ತದೆ ಇಂದು ತಾಲೂಕಿನ ಎಲ್ಲ ಜನತೆಯು ಕೂಡ ವೈಕುಂಠ ಏಕಾದಶಿಯನ್ನು ಭಕ್ತಿಭಾವ ಪರವಶರಾಗಿ ಆಚರಿಸುತ್ತಿದ್ದಾರೆ

ಎಲ್ಲರಲ್ಲಿ ಭಕ್ತಿಯ ಪರಾಕಷ್ಟೇ ಮುಗಿಲ ಮುಟ್ಟಿದೆ 2023ರ ಈ ವರ್ಷ ಇಡೀ ತಾಲೂಕಿನ ಜನತೆಯನ್ನು ನೆಮ್ಮದಿಯ ಉತ್ತುಂಗಕ್ಕೆ ಕೊಂಡಲಿ ಐತಿಹಾಸಿಕ ಪರಂಪರೆಗೆ ಹೆಸರುವಾಸಿ ಆಗಿರುವಂತಹ ಈ ನಾಡು ಮದಕರಿ ನಾಯಕನ ಕಾಲದ ಹೇಳ್ಗೆಗೆ ಮುನ್ನುಡಿ ಬರೆಯಲಿ ಎಂದು ತಾಲೂಕಿನ ಎಲ್ಲ ಜನತೆಗೆ ಆಶಿಸಿದರು ಇದೇ ಸಂದರ್ಭದಲ್ಲಿ ಎಲ್ಲ ಭಕ್ತಾದಿಗಳು, ಟ್ರಸ್ಟಾನ ಪ್ರಮುಖರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!