ಚಳ್ಳಕೆರೆ : ಜನವರಿ 5ರಂದು ಮಾಚಿದೇವ ಸಂಸ್ಥಾನದಲ್ಲಿ ನಡೆಯುವ ಕಾಯಕ ಜನೋತ್ಸವ ಕಾರ್ಯಕ್ರಮದಲ್ಲಿ ಬಿಎಸ್‍ವೈಗೆ ಮಾಚಿದೇವಶ್ರೀ ಪ್ರಶಸ್ತಿ
ನೀಡಲಾಗುವುದು ಎಂದು ಡಾ.ಬಸವ ಮಾಚಿದೇವ ಮಹಾಸ್ವಾಮಿ ತಿಳಿಸಿದರು.
ಅವರು ನಗರದ ಪ್ರವಾಸಿಮಂದಿರದಲ್ಲಿ ಆಯೋಜಿಸಿದ್ದ ಸಮುದಾಯದ ಸಭೆಯನ್ನು ಉದ್ದೇಶಿಸಿ ಮಾತನಾಡಿ,
ಸಮುದಾಯವನ್ನು ಎಸ್ಸಿ ಸೇರ್ಪಡೆಗೆ ಮಾಡುವ ನಿಟ್ಟಿನಲ್ಲಿ ಅನ್ನಪೂರ್ಣ ವರದಿ ಸಿದ್ದ ಪಡಿಸುವಂತೆ ಆದೇಶ ನೀಡಿದರು, ವರದಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಮುನ್ನ ರಾಜಕೀಯ ಬೆಳವಣಿಗೆಯಲ್ಲಿ ಸಾಧ್ಯವಾಗಲಿಲ್ಲ, 2009ರಲ್ಲಿ ಮಡಿಕಟ್ಟೆಗಳ ಅಭಿವೃದ್ದಿಗೆ 10 ಕೋಟಿ ಹಣ ನೀಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಈ ಭಾರಿಯ ಮಾಚಿದೇವಶ್ರೀ ಶ್ರೀಪ್ರಶಸ್ತಿ ಪ್ರಧಾನ ಮಾಡಲಾಗುವುದು. ಮಲ್ಲಿಗೆಮ್ಮ ಮಾತೋಶ್ರೀ ಪ್ರಶಸ್ತಿಯನ್ನು ಧಾರ್ಮಿಕ ದತ್ತಿ ಸಚಿವೆ ಶಶಿಕಲಾ ಜೊಲ್ಲೆರವರಿಗೆ ನೀಡಲಾಗುವುದು ಎಂದರು.

ಜನವರಿ 5ರಂದು ಕಾರ್ಯಕ್ರಮವನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜವನ್ನು ಎಸ್ಸಿಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಲಾಗುವುದು. ರಾಜ್ಯದ ಮೂಲೆ,‌ಮೂಲೆಯಿಂದ ಸಮುದಾಯದ ಮುಖಂಡರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಗಿದೆ.

About The Author

Namma Challakere Local News
error: Content is protected !!