ನಾಯಕನಹಟ್ಟಿ:: ನಮ್ಮ ಪೂರ್ವಜರ ಕಾಲದಿಂದಲೂ ಬುಡಕಟ್ಟು ಸಂಸ್ಕೃತಿಯ ಆಚರಣೆಯನ್ನು ಆಚರಿಸುತ್ತಾ ಬಂದಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ ಒ ಓಬಳೇಶ್ ಹೇಳಿದ್ದಾರೆ.
ಅವರು ಗುರುವಾರ ಗೌಡಗೆರೆ ಗ್ರಾಮದ ಶ್ರೀದೂಡ್ಲಮಾರಿಕಾಂಬ ಜಾತ್ರ ಮಹೋತ್ಸವದಲ್ಲಿ ಶ್ರೀ ದೊಡ್ಲ ಮಾರಿಕಾಂಬ ದೇವಿಗೆ ಭಕ್ತಿಯ ಪೂಜಿ ಸಲ್ಲಿಸಿ ಮಾತನಾಡಿದ್ದಾರೆ.
ಒಂಬತ್ತು ವರ್ಷಗಳ ಬಳಿಕ ಗೌಡಗೆರೆ ಗ್ರಾಮದಲ್ಲಿ ಶ್ರೀ ದೊಡ್ಲ ಮಾರಿಕಾಂಬ ಜಾತ್ರೋತ್ಸವ ಬುಡಕಟ್ಟು ಸಂಸ್ಕೃತಿಯ ಆಚರಣೆ ಪೂಜಾ ಕೈ ಕರಿಗಳು ನಡೆದಿದೆ ಎಂದರು.
ಮಾಜಿ ಅಧ್ಯಕ್ಷ ಟಿ ರಂಗಪ್ಪ ಮಾತನಾಡಿ ಕಳೆದ ಮೂರು ದಿನದಿಂದ ಪ್ರಾರಂಭವಾದ ಶ್ರೀ ದೊಡ್ಲ ಮಾರಿಕಾಂಬ ಜಾತ್ರಾ ಮಹೋತ್ಸವ ಇಡೀ ಗ್ರಾಮವೇ ಸಂಭ್ರಮ ಸಡಗರದಿಂದ ಭಕ್ತಿ ಭಾವಕ್ಕೆ ಶ್ರೀ ದೊಡ್ಲ ಮಾರಿಕಾಂಬ ಜಾತ್ರೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿದೆ ಕಲೆ ಸಾಹಿತ್ಯ ಸಂಸ್ಕೃತಿ ಉಳಿಸುವುದರ ಜೊತೆಯಲ್ಲಿ ಬುಡಕಟ್ಟು ಸಂಸ್ಕೃತಿ ಆಚರಣೆಗಳು ಪುರಾತನ ಕಾಲದಿಂದ ಗ್ರಾಮದ ಗುರು ಹಿರಿಯರು ಸಂಪ್ರದಾಯದಂತೆ ಶ್ರೀ ದೊಡ್ಲಮಾರಿಕಾಂಬ ಜಾತ್ರೋತ್ಸವ ನಡೆದಿದೆ ಗುರುವಾರದಿಂದ ಎನ್ ದೇವರಹಳ್ಳಿ ಗ್ರಾಮದಿಂದ ಗೌಡಗೆರೆ ಗ್ರಾಮಕ್ಕೆ ಶ್ರೀ ದೊಡ್ಡ ಮಾರಿಕಾಂಬ ದೇವಿಯನ್ನು ಕರೆತರಲಾಯಿತು. ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯದಂತೆ ಗ್ರಾಮದಲ್ಲಿ ಎರಡು ದಿನಗಳ ಕಾಲ ಶ್ರೀದೇವಿಯನ್ನ ಪೂಜಿಸಿ ಇಂದು ಮೂರನೇ ದಿನಕ್ಕೆ ಎನ್ ದೇವರಹಳ್ಳಿ ಗ್ರಾಮಕ್ಕೆ ಪುನಹ ದೇವಿಯನ್ನು ಬೀಳ್ಕೊಡಲಾಗುತ್ತದೆ ಎಂದು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ರಂಗಪ್ಪ ಹೇಳಿದರು
ಇದೇ ವೇಳೆ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರೇವಕ್ಕ, ಮಾಜಿ ಅಧ್ಯಕ್ಷ ಟಿ ರಂಗಪ್ಪ, ಸದಸ್ಯರಾದ ವೆಂಕಟೇಶ್( ದಳಪತಿ) ಎಂ ಎಚ್ ಲಕ್ಷ್ಮಣ್, ಸಣ್ಣ ನಾಗಪ್ಪ, ಶಾಂತಮ್ಮ, ಅನ್ನಪೂರ್ಣೇಶ್ವರಿ, ಮಂಜಕ್ಕ, ಬಿ ಮಂಜಮ್ಮ (ಡಿಜಿ) ನಾಗಣ್ಣ, ಬಿ ಸರೋಜಮ್ಮ, ಗಿಣಿಯರ್ ತಿಪ್ಪೇಶ್, ಸಣ್ಣಪ್ಪ, ರಾಧಮ್ಮ ಬೋರಣ್ಣ, ಕೆಂಗರುದ್ರಪ್ಪ ಕೆ ಎಚ್ ಮಂಜುಳಾ, ಪಿಡಿಓ ಇನಾಯತ್ ಭಾಷಾ ,ಜಿ ಟಿ ತಿಪ್ಪೇಸ್ವಾಮಿ, ಗ್ರಾಮದ ಸಮಸ್ತ ಗುರು ಹಿರಿಯರು ಗ್ರಾಮಸ್ಥರು ಸೇರಿದಂತೆ ಭಕ್ತಾದಿಗಳು ಇದ್ದರು