ಚಳ್ಳಕೆರೆ : ಕಳೆದ ಹತ್ತು ವರ್ಷಗಳಿಂದ ಬಯಲು ಸೀಮೆಯನ್ನು ಹಸಿರುಕರಣ ದತ್ತ ಕೊಂಡುಯ್ಯುವ ಅಭಿವೃದ್ದಿ ಹರಿಕಾರನೆಂದು ಜನಮಾಸದಲ್ಲಿ ಬಿಂಬಿತರಾದ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಚಳ್ಳಕೆರೆ ಕ್ಷೇತ್ರದ ಜಾಲ್ವಾಂತ ಸಮಸ್ಯೆಗಳನ್ನು ಸದನದಲ್ಲಿ ಧ್ವನಿ ಎತ್ತುವ ಮೂಲಕ ಈಡೀ ರಾಜ್ಯದಲ್ಲಿ ಸದ್ದು ಮಾಡಿದ್ದಾರೆ.
ಅದರಂತೆ ಚಳ್ಳಕೆರೆ ಕ್ಷೇತ್ರದ ಜನತೆಗೆ ಕುಡಿಯುವನ ಜೋತೆಗೆ ಕೆರೆ ಅಭಿವೃದ್ದಿ ಯೋಜನೆಗೆ ಅನುದಾನ ಬಗ್ಗೆ ಧ್ವನಿ ಎತ್ತುವ ಮೂಲಕ ಚಳ್ಳಕೆರೆ ಕ್ಷೇತ್ರದ 38 ಸಿಡಿಗಳು 18 ಕೆರೆಗಳು ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಿದೆ ಆದರೆ ಕೇವಲ 179 ಲಕ್ಷ ಮಾತ್ರ ಬಿಡುಗಡೆ ಮಾಡಿದೆ, ಯೋಜನೆಯ ಪ್ರಕಾರ ಇನ್ನೂ ಇಪ್ಪತ್ತು ಕೋಟಿ ಅನುದಾನದ ಅವಶ್ಯಕತೆ ಇದೆ ಎಂದು ಬೇಡಿಕೆ ಇಟ್ಟಿದ್ದಾರೆ.

ಗ್ರಾಮೀಣ ಭಾಗದ ರಸ್ತೆಗಳ ಜಂಗಳ ಕಟ್ ಮಾಡಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿಯಲ್ಲಿ ಅನುಮೋದನೆ ರೂಪಿಸಬೇಕು ಎಂದು ಸದ್ದು ಮಾಡಿದರು. ನಂತರ ಜಲ ಜೀವನ ಮೀಷನ್ ಅವೈಜ್ಞಾನಿಕ ರಸ್ತೆ ಕಂಟಿಗ್‌ಗೆ ಬೇಸರ ವ್ಯಕ್ತಪಡಿಸಿದ ಶಾಸಕರು ಸದನದಲ್ಲಿ ಧ್ವನಿ ಎತ್ತಿದ್ದಾರೆ.

Namma Challakere Local News
error: Content is protected !!