ಚಳ್ಳಕೆರೆ : ನಿಜಕ್ಕೂ ಗ್ರಾಮೀಣ ಭಾಗದ ಜನರ ಗೋಳು ಕೇಳುವವರಿಲ್ಲವಾಗಿದೆ, ಸರಕಾರದ ಅದೀನ‌ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ.

ಹೌದು ಚಳ್ಳಕೆರೆ ತಾಲೂಕಿನ ಹಲವು ಗ್ರಾಮೀಣ ಭಾಗದಲ್ಲಿ ದಿನ ನಿತ್ಯ ಸಂಚರಿಸುವ ಮರಳು ತುಂಬಿದ ಲಾರಿಗಳ ಓಡಾಟದಿಂದ ಜನರ ಮೇಲೆ ದುಷ್ಪಪರಿಣಾಮ ಬೀರಲಿದೆ.

ಇನ್ನೂ ನಿಯಮ‌ ಮೀರಿ ಮರಳು ಸಾಗಟ ಮಾಡುತ್ತಿರುವ ಮರಳು ಲಾರಿಗಳ‌ ಕಾರುಬಾರು ಗ್ರಾಮೀಣ ಭಾಗದಲ್ಲಿ ಬಲು ಜೋರು,

ಆದರೆ, ಮರಳು‌ ನೀತಿಯಲ್ಲಿ‌ ಪರವಾನಿಗೆ‌ ಒಂದು ಇದ್ದರೆ ಅರಳು ಸಾಗಟ ಮಾಡುವುದೇ ಇನ್ನೋಂದು ಈಗೇ ಸಮಯವಿಲ್ಲದೆ ರಾತ್ರೋ ರಾತ್ರಿ ಮರಳು ಸಾಗಟ, ಮೀತಿ‌ಮೀರಿದ ಲೊಡ್ ಗಳು ಈಗೇ ಲಾರಿಗಳ ಓಡಾಟಕ್ಕೆ ಗ್ರಾಮೀಣ ಭಾಗದ ರಸ್ತೆಗಳು ಕಿತ್ತು ಹಾಳಾಗಿವೆ ಇನ್ನೂ ಕಡಿವಾಣ ಹಾಕಬೇಕಾದ ಅಧಿಕಾರಿ ವರ್ಗ ಮಾತ್ರ ಮೌನವಹಿಸಿದೆ.

ಮರಳು ತುಂಬಿದ ಲಾರಿಗಳ ಸಂಚಾರದಿಂದಾಗಿ ಗ್ರಾಮೀಣ ರಸ್ತೆಗಳು ಹಾಳಾಗುತ್ತಿದ್ದು, ರಸ್ತೆ ದುರಸ್ತಿ ಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮರಳು ಲಾರಿಗಳನ್ನು ಬೆಳ್ಳ ಬೆಳಗ್ಗೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಚಳ್ಳಕೆರೆ ತಾಲೂಕಿನ ವೇದಾವತಿ ನದಿ ಪಾತ್ರದ ಮೈಲಹಳ್ಳಿ ಗ್ರಾಮದಿಂದ ಚಿತ್ರದುರ್ಗ ಸೇರಿದಂತೆ ವಿವಿಧ ಕಡೆಗಳಿಗೆ ಹಗಲು ರಾತ್ರಿ ಲಾರಿಗಳಲ್ಲಿ ದುರ್ಗಾವರ ಗ್ರಾಮದ ಕಿರಿದಾದ ರಸ್ತೆ ಮೇಲೆ ಸಂಚಾರದಿಂದ ರಸ್ತೆ ಕಿತ್ತು ಹೋಗಿ ವರ್ಷಗಳೇ ಕಳೆದಿವೆ.

ಇಂತಹ ಕಿತ್ತು ಹೋದ ರಸ್ತೆಗೆ ಜಲ್ಲಿ ಹಾಗೂ ಜಲ್ಲಿ ಪುಡಿ ಹಾಕಿರುವ ಟೆಂಡರ್ ದಾರರು ಹಲವು ದಿನಗಳಿಂದ ಹಾಗೇ ಬಿಟ್ಟಿರುವುದರಿಂದ ಲಾರಿಗಳ ಸಂಚಾರದಿಂದ ಈಡೀ ಗ್ರಾಮದ ಮನೆಗಳಿಗೆ ಧೂಳು ನುಗ್ಗಿ ಹಸುಗೂಸು ಕಂದಮ್ಮಗಳಿಂದ ಜನರಿಗೆ ನೆಗಡೆ, ಕೆಮ್ಮಿನಂತಹ ಸಾಂಕ್ರಮಿಕ ರೋಗಗಳಿಗೆ ತುತ್ತಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ.

ಪ್ರತಿದಿನ ಸುಮಾರು ಅದಿನೈದರಿಂದ ಇಪ್ಪತ್ತುಕ್ಕೂ ಹೆಚ್ಚು ಮರಳಿನ ಲಾರಿಗಳು ಈ ಗ್ರಾಮೀಣ ಸಂಪರ್ಕ ರಸ್ತೆ ಮೂಲಕ ಹಾದು ಹೋಗುತ್ತಿರುವುದರಿಂದ ರಸ್ತೆ ಬಹುತೇಕ ಕಡೆ ಹಾಳಾಗಿದೆ,

ಗ್ರಾಮಸ್ಥರ ಅಳಲು :

ಮರಳು ಸಾಗಾಟಕ್ಕೆ ನಮ್ಮದು ಅಭ್ಯಾಂತರವಿಲ್ಲ ಯಾವ ಮಾರ್ಗದಲ್ಲಿ ಪರವಾನಿಗೆ ಪಡೆದಿದ್ದಾರೆ ಆ ರಸ್ತೆ ಮೇಲೆ ಮರಳು ಲಾರಿಗಳು ಸಂಚರಿಸಲಿ ಲಾರಿ ಚಾಲಕರಿಗೆ ಯಾವ ಮಾರ್ಗ ಇದೆ ಎಂಬುದರ ಬಗ್ಗೆ ಮಾಹಿತಿ ನೀಡುತ್ತಿಲ್ಲ ,
ಇನ್ನೂ ಹಗಲು ರಾತ್ರಿ ಮರಳು ಲಾರಿಗಳ ಸಂಚಾರದಿಂದ ರಸ್ತೆಗಳು ಕಿತ್ತು ಹೋದರೂ ಸಂಬಂಧಪಟ್ಟ ಅಧಿಕಾರಿಳು ಮೌನವಹಿಸಿರುವುದು ಅನುಮಾನಕ್ಕೆ ಎಡಮಾಡಿದ್ದು ಕಿತ್ತು ಹೋದ ರಸ್ತೆಯಲ್ಲಿ ದ್ವಿಚಕ್ರವಾಹನ ಸವಾರರು ಹೈರಾಣಾಗಿದ್ದಾರೆ.. ವಾಹನ ಸಾವರರು ಬಿದ್ದು ಕೈಕಾಲು ಮುರಿದು ಕೊಂಡ ಪ್ರಕರಣಗಳಿವೆ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಮರಳು ಸಾಗಟ‌ ಲಾರಿಗಳಿಗೆ‌ ಕಡಿವಾಣ ಹಾಕಿ ಸಾರ್ವಜನಿಕರ ಪ್ರಾಣ ಉಳಿಸಬೇಕು ಎಂದು ಪ್ರತಿಭಟನೆಯ‌ ಮೂಲಕ ಎಚ್ಚರಿಕೆ ನೀಡಿದ್ದಾರೆ

ಪ್ರತಿಭಟನೆ‌ನಿರತ ಗ್ರಾಮಸ್ಥರಾದ ಮಹಾಲಿಂಗಪ್ಪ, ಸುರೇಶ, ಗ್ರಾಮ ಪಂಚಾಯತಿ ಸದಸ್ಯಗೋಪಿ,ಆರ್. ನಾಗೇಶ್ರಂಗಸ್ವಾಮಿ, ಬಸವರಾಜ್, ಮಂಜಣ್ಣ, ರಂಗಸ್ವಾಮಿ, ಸತೀಶ್, ಹನುಮಣ್ಣ, ನಿಂಗಪ್ಪ ಹಾಗೂ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿ ಎಚ್ಚರಿಕೆ ನೀಡಿದ್ದಾರೆ.

Namma Challakere Local News
error: Content is protected !!