ಚಳ್ಳಕೆರೆ : ಪ್ರಶಸ್ತಿ ಮತ್ತು ಪದಕಗಳಿಗಿಂತ ಸಮಾಜ ಸೇವೆಯೇ ಅತಿ ಮುಖ್ಯವಾದದ್ದು ಒಬ್ಬ ಅಧಿಕಾರಿ ಮತ್ತು ನೌಕರನಾದವನು ಸರ್ಕಾರಿ ಮತ್ತು ಸಮಾಜಸೇವೆ ಎರಡನ್ನು ಕೂಡ ಸಮಚಿತ್ತದಿಂದ ಮಾಡಬಹುದು ಈ ಸೇವೆಗಳೆರಡನ್ನು ಕೂಡ ಪರಿಣಾಮಕಾರಿಯಾಗಿ ಮೈಗೂಡಿಸಿಕೊಂಡರೆ ಪ್ರಶಸ್ತಿಗಳು ಮತ್ತು ಪದಕಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು.
ನಗರದ ಸರ್ಕಾರಿ ನೌಕರರ ತಾಲೂಕು ಗೃಹರಕ್ಷಕ ದಳದವರು ಮುಖ್ಯಮಂತ್ರಿ ಪದಕ ಮತ್ತು ರಾಷ್ಟ್ರಪತಿ ಪದಕ ಪಡೆದಂತಹ ಅಧಿಕಾರಿಗಳಿಗೆ ಏರ್ಪಡಿಸಿದಂತಹ ಸನ್ಮಾನ ಸಭಾರಂಭದಲ್ಲಿ ಉದ್ಘಾಟನಾ ಭಾಷಣ ಮಾತನಾಡಿ ಕೆಲಸ ನಿರ್ವಹಿಸುವ ಗೃಹರಕ್ಷಕ ದಳದ ಕಾರ್ಯ ಶಾಘ್ಲÀನೀಯ ಪ್ರಶಸ್ತಿ ಮತ್ತು ಪದಕಗಳನ್ನು ಅಧಿಕಾರಿಗಳು ಸಲ್ಲಿಸುವ ವಿಶಿಷ್ಟ ಸೇವೆಗೆ ನೀಡಿದರು ಕೂಡ ಇದರಿಂದ ಉಳಿದಂತಹ ಅಧಿಕಾರಿ ನೌಕರರು ಪ್ರೇರೇಪಣೆಗೊಳ್ಳಬೇಕು ಇನ್ನು ಹೆಚ್ಚು ಹೆಚ್ಚು ಸರ್ಕಾರದ ಮತ್ತು ಸಮಾಜದ ಕಾರ್ಯಗಳನ್ನು ಮಾಡಲು ದಾರಿಯಾಗಬೇಕೆಂಬ ಹಿನ್ನೆಲೆಯಲ್ಲಿ ಗೌರವಿಸಲಾಗುತ್ತಿದೆ.
ತಾಲೂಕಿನ ಎಲ್ಲಾ ಅಧಿಕಾರಿ ನೌಕರರು ಕೂಡ ಇಲ್ಲಿಯ ಜನರ ಸಾಮಾಜಿಕ ಬದಲಾವಣೆಗೆ ಒಂದು ದೀಕ್ಷೆ ತೆಗೆದುಕೊಳ್ಳಬೇಕು ಇದರ ಮುಖಾಂತರ ಪರಿವರ್ತನೆಗೆ ಕಂಕಣ ಭದ್ಧರಾಗಬೇಕು ಇದು ಏನೇ ಆದರೂ ಕೂಡ ಗೃಹ ರಕ್ಷಕ ದಳದ ಅಧಿಕಾರಿ ನೌಕರರು ತಮ್ಮ ಸಂಸಾರವನ್ನು ನಿರ್ಲಕ್ಷಿಸಕೂಡದು ಸರ್ಕಾರಿ ಕೆಲಸ ಮಾಡುವುದರ ಜೊತೆಗೆ ತಮ್ಮ ಕುಟುಂಬಗಳನ್ನು ಕೂಡ ವ್ಯವಸ್ಥಿತ ರೀತಿಯಲ್ಲಿ ಸಲಹಾಬೇಕೆಂದು ಮನವಿ ಮಾಡಿದರು.

ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆAಟ್ ಸಂಧ್ಯಾ ಮಾತನಾಡಿ ಗೃಹರಕ್ಷಕ ದಳದ ಸಿಬ್ಬಂದಿಗಳು ಹತ್ತು ಹಲವು ಇಲಾಖೆಗಳಲ್ಲಿ ಭಾಗಿಯಾಗಿ ಕೆಲಸ ನಿರ್ವಹಿಸುತ್ತಾರೆ ಎಲ್ಲಾ ಇಲಾಖೆಗಳ ಜೊತೆ ಸಮನ್ವಯ ಮಾಡುತ್ತಾರೆ ಆ ಸಂದರ್ಭದಲ್ಲಿ ಎಲ್ಲ ಇಲಾಖೆಗಳಲ್ಲೂ ಹೊಂದಿಕೊಳ್ಳುತ್ತಾರೆ ಈ ಒಂದು ವಿಶಿಷ್ಟ ಗುಣ ಗುರುವರಕ್ಷಕ ದಳದ ನೌಕರರಿಗೆ ಇದೆ ತಮ್ಮ ಆರೋಗ್ಯ ಮತ್ತು ದೇಹದಾಢ್ಯದ ಕಡೆ ಗಮನ ನೀಡಬೇಕು ಮುಂಬರುವ ದಿನಗಳಲ್ಲಿ ಕೋವಿಡ್ ಮುನ್ಸೂಚನೆಯಿದ್ದು ಪರಿಣಾಮಕಾರಿಯಾಗಿ ಎದುರಿಸಲು ಸಿದ್ಧವಾಗಬೇಕೆಂದು ಹೇಳಿದರು.

ರಾಷ್ಟ್ರಪತಿ ಪದಕ ಪಡೆದಂತ ಭೀಮರಾಜು ಮುಖ್ಯಮಂತ್ರಿ ಪದಕ ಪಡೆದಂತಹ ಹನುಮಂತಪ್ಪ ಮತ್ತು ಇತರರನ್ನು ಸನ್ಮಾನಿಸಲಾಯಿತು, ತಾಲೂಕು ಕಮಾಂಡೆAಟ್ ಡಾಕ್ಟರ್ ಲೋಕೇಶ್, ಗೃಹ ರಕ್ಷಕ ದಳದ ಅಧಿಕಾರಿಗಳಾದ ಹನುಮಂತಪ್ಪ ಮತ್ತು ಇತರರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!